ಹೈದರಾಬಾದ್(ಜು.06): ಮನ್ಸೂನ್‌ನಿಂದ ಕೆರೆ ನದಿಗಳು ತುಂಬಿವೆ. ಜಲಪಾತಗಳ ಸೌಂದರ್ಯ ಹೆಚ್ಚಿದೆ. ಇಲ್ಲೇ ಒಂದು ಫೋಟೋ ತೆಗೆಯೋಣ ಅಂತ ಗಡಿಬಿಡಿಯಲ್ಲಿ ಧಾವಿಸೋ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
ಸೆಲ್ಫೀ ತೆಗೆಯೋ ಗೀಳಿನಿಂದ ಮೂವರು ಸಹೋದರಿಯರು ನೀರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಂಗಂನಲ್ಲಿ ಘಟನೆ ನಡೆದಿದೆ.
ಭಾನುವಾರ ಸಂಜೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಂಗಂ ಗ್ರಾಮದಲ್ಲಿ ಸೆಲ್ಫೀ ಕ್ಲಿಕ್ ಮಾಡುವ ಕ್ರೇಝ್‌ಗೆ ಮೂವರು ಅಪ್ರಾಪ್ತ ಸಹೋದರಿಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಬಾಲಕಿಯರನ್ನು ಸುನೀತಾ (16), ವೈಶಾಲಿ (14) ಮತ್ತು ಅಂಜಲಿ (14) ಎಂದು ಗುರುತಿಸಲಾಗಿದೆ.
ಮೂವರು ಹದಿಹರೆಯದ ಸಹೋದರಿಯರು ಭಾನುವಾರ ಸಂಜೆ ಕಾಣೆಯಾಗಿದ್ದರು. ಮರುದಿನ ಸೋಮವಾರ ಅವರ ಮೃತದೇಹ ಗ್ರಾಮದ ಹೊರವಲಯದಲ್ಲಿರುವ ಕೊಳವೊಂದರಲ್ಲಿ ಪತ್ತೆಯಾಗಿವೆ. ಸೆಲ್ಫಿಗಳನ್ನು ಕ್ಲಿಕ್ ಮಾಡಲು ಮೂವರು ಕೊಳಕ್ಕೆ ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!...
ಹುಡುಗಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವಾಗ ಜಾರಿ ಕೊಳಕ್ಕೆ ಬಿದ್ದಿದ್ದಳು. ತರುವಾಯ, ಅವಳ ಇಬ್ಬರು ಸಹೋದರಿಯರು ಅವಳನ್ನು ಉಳಿಸಲು ನೀರಿಗೆ ಹಾರಿದರು. ದುರದೃಷ್ಟವಶಾತ್, ಮೂವರೂ ಮುಳುಗಿದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ನಾಟಕದ ಮಂಗಳೂರು ಜಿಲ್ಲೆಯ ಜೋಕಾಟ್ಟೆ ರಸ್ತೆ ಸಂಖ್ಯೆ 04 ಬಳಿ ಸೆಲ್ಫಿ ಕ್ಲಿಕ್ ಮಾಡುವಾಗ 16 ವರ್ಷದ ಬಾಲಕನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದ ಘಟನೆಯ ನಂತರ ನಡೆದ ಸೆಲ್ಫೀ ಟ್ರಾಜಿಡಿ ಇದಾಗಿದೆ.