
ಲಕ್ನೋ(ಜು.06):ಪ್ರೇಮಪಾಶದಲ್ಲಿ ಬಿದ್ದು ಕೊಲೆಗಾರರಾಗುವ ಅನೇಕ ಪ್ರೇಮಿಗಳಿದ್ದಾರೆ. ಯಾಕೆಂದರೆ ಅವರಿಗೆ ತಮ್ಮ ಪ್ರೀತಿಯನ್ನು ಹೊರತುಪಡಿಸಿ ಮತ್ತೇನೂ ಕಾಣುವುದಿಲ್ಲ. ಇಂತಹುದೇ ಶಾಕಿಂಗ್ ಘಟನೆ ಉತ್ತರ ಪ್ರದೆಶದ ಔರೆಯಾದಲ್ಲಿ ನಡೆದಿದೆ. ಇಲ್ಲೊಬ್ಬ ಮಗ ಇಲ್ಲೊಬ್ಬ ಮಗ ತನ್ನ ಗರ್ಲ್‌ಫ್ರೆಂಡ್ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲವೆಂದು ತಂದೆಯನ್ನು ನಿದ್ದೆ ಮಾಡುವಾಗಲೇ ಕೊಲೆಗೈದಿದ್ದಾನೆ.
ನಿದ್ದೆ ಮಾಡುತ್ತಿದ್ದ ತಂದೆಯ ಹೊಟ್ಟೆಗೆ ತ್ರಿಶೂಲ
ಶಿವಂ ಹೆಸರಿನ ಯುವಕ ಗಾಢ ನಿದ್ರೆಯಲ್ಲಿದ್ದ ತಂದೆಯ ಅರವಿಂದ್ ಹೊಟ್ಟೆಗೆ ತ್ರಿಶೂಲ ಚುಚ್ಚಿ ಕೊಲೆಗೈದಿದ್ದಾನೆ. ಯುವಕನಿಗೆ ಗರ್ಲ್‌ಫ್ರೆಂಡ್ ಜೊತೆ ಮಾತನಾಡಲು ತಂದೆ ಅಡ್ಡಿಪಡಿಸುತ್ತಿದ್ದರೆಂಬುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಘಟನೆ ದಿನವೂ ತಂದೆ ಮಗ ಇದೇ ವಿಚಾರಕ್ಕೆ ಜಗಳವಾಡಿದ್ದರೆನ್ನಲಾಗಿದೆ.
ರಕ್ತದಿಂದ ತುಂಬಿತ್ತು ಇಡೀ ಕೋಣೆ:
ಮೃತ ಚೀರಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಇನ್ನಿತರ ಕುಟುಂಬ ಸಸದಸ್ಯರು ಆತನ ಕೋಣೆಗೆ ತಲುಪಿದಾಗ ಇಡೀ ಕೋಣೆ ರಕ್ತದಿಂದ ತುಂಬಿತ್ತು. ಕೂಡಲೇ ಅಕ್ಕ ಪಕ್ಕದ ಮನೆಯವರನ್ನು ಕರೆದು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ. ರಕ್ತ ಹೆಚ್ಚು ಹರಿದು ಹೋದ ಪರಿಣಾಮ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆರೋಪಿಯ ಸಹೋದರನ ವಿವರಣೆ
ಈ ಬಗ್ಗೆ ಮಾಹಿತಿ ನೀಡಿದ ಆರೋಪಿಯ ಸಹೋದರರು ರಂದೆ ಈ ಮೊದಲು ಹಲವಾರು ಬಾರಿ ಶಿವಂಗೆ ಗರ್ಲ್‌ಫ್ರೆಂಡ್ ವಿಚಾರವಾಗಿ ಅರ್ಥೈಸಿದ್ದರು. ಆದರೆ ಆತ ಆಕೆಯನ್ನು ಬಿಟ್ಟಿರಲಿಲ್ಲ. ಸೋಮವಾರ ರಾತ್ರಿ ಶಿವಂ ಹಾಗೂ ತಂದೆ ಇದೇ ವಿಚಾರವಾಗಿ ಜಗಳವಾಡಿದ್ದರು. ಇದಾದ ಬಳಿಕ ತಂದೆ ಮಲಗಲು ಹೋಗಿದ್ದರು. ಆದರೆ ಶಿವಂ ಕೋಪದಲ್ಲಿ ತಂದೆಯನ್ನು ಕೊಲೆಗೈದಿದ್ದಾನೆ ಎಂದು ತಿಳಿಸಿದ್ದಾರೆ.
.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ