ದಿಲ್ಲಿಯಿಂದ ಬಂದು ಹರಿದ್ವಾರದಲ್ಲಿ ಬರ್ತಡೆ ಪಾರ್ಟಿ, ಪೊಲೀಸರಿಗೆ ಕೇಕ್ ಬೇಕಾ ಎಂದ್ರು!

By Suvarna NewsFirst Published Jul 5, 2021, 6:10 PM IST
Highlights

* ಹರಿದ್ವಾರದ ಗಂಗಾ ನದಿಯ ಹರ್ ಕಿ ಪೌರಿ ಘಾಟ್‌ನಲ್ಲಿ ಜನ್ಮದಿನ ಆಚರಣೆ
* ಪೊಲೀಸರಿಗೆ ಕೇಕ್ ತಿನ್ನಿಸಲು ಬಂದರು
* ಪ್ರಕರಣಕ್ಕೆ  ಸಂಬಂಧಿಸಿ ಇಬ್ಬರ ಬಂಧನ

ಡೆಹ್ರಾಡೂನ್(ಜು.  04) ಉತ್ತರಾಖಂಡದ ಹರಿದ್ವಾರದ ಗಂಗಾ ನದಿಯ ಹರ್ ಕಿ ಪೌರಿ ಘಾಟ್‌ನಲ್ಲಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ಅಲ್ಲದೆ  ಪೊಲೀಸ್ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದವರನ್ನು ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದು ಇಬ್ಬರನ್ನು ಬಂಧಿಸಿದ್ದಾರೆ.

ಕೊರೋನಾ ನಿಯಮಾವಳಿ ಜಾರಿಯಲ್ಲಿದ್ದರೂ ಜನಸಂದಣಿ ಸೇರಲು ಈ ಕಾರ್ಯಕರ್ಮ ಕಾರಣವಾಗಿತ್ತು.  ಜನಜಂಗುಳಿ ಸೇರಿದೆ ಎಂಬ ಮಾಹಿತಿ ಲಭ್ಯವಾದ ನಂತರ ಅಲ್ಲಿಗೆ ಭೇಟಿ ನೀಡಿದೆವು.  ದೆಹಲಿಯಿಂದ ಬಂದಿದ್ದ ಗುಂಪು ವ್ಯಕ್ತಿಯೊಬ್ಬರ ಜನ್ಮದಿನ ಆಚರಣೆಯಲ್ಲಿ ನಿರತವಾಗಿತ್ತು.   ಈ ಸಂಭ್ರಮಕ್ಕೆ ಬ್ರೇಕ್ ಹಾಕಿದ ಸಿಬ್ಬಂದಿ ಜತೆ ಯುವಕರ ತಂಡ ಅನುಚಿತ ವರ್ತನೆಗೆ ಇಳಿಯಿತು.

ಜೈಲಿಂದ ಬಿಡುಗಡೆ ಎಂದು ಪಾರ್ಟಿ ಮಾಡಿದವನಿಗೆ ಮತ್ತೆ ಸಂಕಷ್ಟ

ಕೇಕ್ ಇಟ್ಟು ಅದನ್ನು ಕಟ್ ಮಾಡಿ ಸೆಲಬರೇಶನ್ ಗೆ ತಂಡ ಮುಂದಾಗಿತ್ತು. ಇದನ್ನು ಪ್ರಶ್ನೆ  ಮಾಡಿದ ಪೊಲೀಸರಿಗೆ ಯುವಕರ ತಂಡ ಕೇಕ್ ತಿನ್ನಿಸಲು ಬಂದಿದೆ. ನಾವು ಯಾರು ಗೊತ್ತಾ ಎಂದು ಅವಾಜ್ ಸಹ ಹಾಕಿದೆ.

ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಬರ್ತಡೆ ಆಚರಣೆಗೆ ಯುವಕರ ತಂಡ ಮುಂದಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.  ಒಬ್ಬ ಆರೋಪಿ  ದೆಹಲಿಯವರಾಗಿದ್ದರೆ, ಇನ್ನೊಬ್ಬರು ಉತ್ತರ ಪ್ರದೇಶದ ಕಾಸ್‌ಗಂಜ್ ಮೂಲದವರು.  ಇಲ್ಲಿ ಬರ್ತಡೆಗೆ ಆಚರಣೆಗೆ ಅವಕಾಶ ಇಲ್ಲ ಎಂಬುದು ತಮಗೆ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಭಯ್ ಕುಮಾರ್ ತಿಳಿಸಿದ್ದಾರೆ. 

click me!