ಶುಕ್ರವಾರ ರಾತ್ರಿ ಹಾರ ಬದಲಾಯಿಸಿಕೊಳ್ಳುವ ವೇಳೆ ಆಕೆ ಕುಸಿದುಬಿದ್ದಿದ್ದು, ನಂತರ ಮತ್ತೆ ಎಚ್ಚರಗೊಂಡರೂ, ಬಳಿಕ ಶನಿವಾರ ಬೆಳಗ್ಗೆ ಮತ್ತೆ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದಾಳೆ.
ಮದುವೆ (Wedding) ಅನ್ನೋದು ವಧು (Bride) - ವರ (Bride Groom) ಇಬ್ಬರ ಜೀವನದಲ್ಲೂ ಪ್ರಮುಖವಾದ ಘಟ್ಟ. ಅದರಲ್ಲೂ, ಹುಡುಗಿಗೆ (Girl) ಮದುವೆ ಇನ್ನೂ ಪ್ರಮುಖವಾದುದು. ಆದರೆ, ತನ್ನ ಮದುವೆಯ ಸಂಭ್ರಮದ ನಡುವೆಯೇ ವಧು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ವರದಿಯಾಗಿದೆ. ತನ್ನ ಮದುವೆಯ ಸ್ಟೇಜ್ (Wedding Stage) ಮೇಲೆ ಇದ್ದಕ್ಕಿದ್ದಂತೆ ಕುಸಿದ ಯುವತಿ, ಕೆಲ ಗಂಟೆಗಳ ನಂತರ ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಹಾರ ಬದಲಾಯಿಸಿಕೊಳ್ಳುವ ವೇಳೆ ಆಕೆ ಕುಸಿದುಬಿದ್ದಿದ್ದು, ನಂತರ ಆಕೆ ಮತ್ತೆ ಎಚ್ಚರಗೊಂಡರೂ, ಬಳಿಕ ಶನಿವಾರ ಬೆಳಗ್ಗೆ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದಾಳೆ. ಅಲ್ಲದೆ, ಆಕೆಯನ್ನು ಲಖನೌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಕೆ ಸಾವಿಗೀಡಾಗಿದ್ದಳು ಎಂದು ತಿಳಿದುಬಂದಿದೆ. ಮೃತ ವಧುವನ್ನು ರಾಜ್‌ಪಾಲ ಶರ್ಮಾ ಅವರ ಪುತ್ರಿ ಶಿವಾಂಗಿ ಶರ್ಮಾ ಎಂದು ಗುರುತಿಸಲಾಗಿದೆ. ಆಕೆ, ಉತ್ತರ ಪ್ರದೇಶ್ ಭಾದ್ವಾನಾ ಗ್ರಾಮದವಳಾಗಿದ್ದು, ಆಕೆಯ ವಿವಾಹವನ್ನು ಲಖನೌ ಬಳಿಯ ಬುದ್ಧೇಶ್ವರ್ ಮೊಹಲ್ಲಾದ ವಿವೇಕ್ ಎಂಬಾತನ ಜತೆಗೆ ಮದುವೆ ಶಾಸ್ತ್ರ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನು ಓದಿ: Viral Video: ಮದುವೆಗೆ ಕುಟುಂಬವನ್ನು ಕರೆದೊಯ್ಯಲು ಸಂಪೂರ್ಣ ವಿಮಾನವನ್ನೇ ಬುಕ್ ಮಾಡಿದ ವಧು - ವರ..!
ಶುಕ್ರವಾರ ರಾತ್ರಿ ಹಾರ ಬದಲಾಯಿಸಿಕೊಳ್ಳುವ ವೇಳೆ ವಧು ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ಇದನ್ನು ನೋಡಿದ ಮದುವೆಗೆ ಬಂದಿದ್ದವರು, ಸಂಬಂಧಿಕರು ಆತಂಕಗೊಂಡರು. ಆದರೆ, ಕೆಲ ಕ್ಷಣಗಳ ನಂತರ ಆಕೆ ಮತ್ತೆ ಎಚ್ಚರಗೊಂಡಿದ್ದಾಳೆ. ನಂತರ ಮತ್ತೆ ಉಳಿದ ಶಾಸ್ತ್ರಗಳನ್ನು ನಡೆಸಿದ್ದಾರೆ. ಮತ್ತೆ ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಆಕೆಯ ಆರೋಗ್ಯ ಹದಗೆಟ್ಟು ಕುಸಿದುಬಿದ್ದಿದ್ದಾಳೆ. ಬಳಿಕ, ಆಕೆಯನ್ನು ಕುಟುಂಬದವರು ಲಖನೌನ ಕಾಸ್ಮಾಂಡಿ ಕಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರೂ, ಆ ವೇಳೆಗೆ ಆಕೆ ಹೃದಯಾಘಾತದಿಂದ ಮೃತಪಟ್ಟಳು ಎಂದು ತಿಳಿದುಬಂದಿದೆ.
ಶಿವಾಂಗಿ ಶರ್ಮಾಗೆ ಹಲವು ದಿನಗಲಿಂದ ಅನಾರೋಗ್ಯ ಕಾಡುತ್ತಿತ್ತು. ಆದರೆ, ಆಕೆಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ. ಶಿವಾಂಗಿಯ ಹಠಾತ್ ನಿಧನದಿಂದ ಎರಡೂ ಕುಟುಂಬದವರು ತೀವ್ರ ಶಾಕ್‌ನಲ್ಲಿದ್ದು, ಶನಿವಾರ ಆಕೆಯ ಅಂತ್ಯ ಸಂಸ್ಕಾರವನ್ನೂ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು, ಈ ಘಟನ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಬಂದಿದೆ. ನಂತರ, ತಂಡವನ್ನು ವಿಚಾರಣೆಗೆಂದು ಕಳಿಸಲಾಯ್ತು ಎಂದು ಉತ್ತರ ಪ್ರದೇಶದ ಮಲಿಹಾಬಾದ್‌ನ ಸ್ಟೇಷನ್ ಹೌಸ್ ಆಫೀಸರ್ ಸುಭಾಷ್ ಚಂದ್ರ ಸರೋಜ್ ಶನಿವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಬ್ಬರೊಬ್ಬರನ್ನು ಬಿಟ್ಟಿರೋದು ಕಷ್ಟ ಅಂತೆ, ಒಬ್ಬನನ್ನೇ ಮದುವೆಯಾದ ಅವಳಿ..!
ಶುಕ್ರವಾರ ಭಾದ್ವಾನಾ ಗ್ರಾಮದಲ್ಲಿ ಶಿವಾಂಗಿಗೆ ವಿವೇಕ್ ಜತೆ ಮದುವೆ ಫಿಕ್ಸ್ ಆಗಿತ್ತು. ಹಾರ ಬದಲಾಯಿಸಿಕೊಳ್ಳುವ ವೇಳೆ, ವಧು ಸ್ಟೇಜ್‌ಗೆ ಬಂದು ವರನಿಗೆ ಹಾರ ಹಾಕುತ್ತಿದ್ದಂತೆ ಆಕೆ ಕುಸಿದುಬಿದ್ದಳು. ಈ ವೇಳೆ, ಮದುವೆಗೆ ಬಂದಿದ್ದವರು ಶಾಕ್ ಆದರು. ಆದರೆ, ಕೆಲ ಕ್ಷಣಗಳ ಬಳಿಕ, ಆಕೆ ಮತ್ತೆ ಎಚ್ಚರಗೊಂಡ ನಂತರ ವಿವಾಹದ ಉಳಿದ ಶಾಸ್ತ್ರಗಳನ್ನು ನಡೆಸಲಾಯಿತು. ನಂತರ, ಮತ್ತೆ ಶನಿವಾರ ಬೆಳಗ್ಗೆ ಆಕೆಯ ಆರೋಗ್ಯ ಹದಗೆಟ್ಟಿತು. ನಂತರ, ಲಖನೌಗೆ ಆಕೆಯನ್ನು ಕರೆದೊಯ್ಯಲಾಯಿತಾದರೂ, ಆಕೆ ಮೃತಪಟ್ಟಿರುವ ಬಗ್ಗೆ ವೈದ್ಯರು ಘೋಷಿಸಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಇದನ್ನೂ ಓದಿ: ತಮಾಷೆಗೆಂದು ಅಪರಿಚಿತರ ಮದ್ವೆಗೆ ಹೋಗಿ ಊಟ ಮಾಡದಿರೀ ಜೋಕೆ... ಇಲ್ಲೇನಾಯ್ತು ನೋಡಿ