ಲಖನೌ(ಜು.22): ಪ್ರತಿಯೊಬ್ಬರಿಗೆ ತಮಗಿಷ್ಟದ ಉಡುಪು ಧರಿಸುವ ಸ್ವಾತಂತ್ರ್ಯವಿದೆ. ಆದರೆ ದೇಶದಲ್ಲಿ ಹಲವು ಬಾರಿ ಮಹಿಳೆಯ ಉಡುಗೆ ತೊಡುಗೆ ಭಾರಿ ಚರ್ಚೆಯಾಗಿದೆ, ವಿವಾದ ಸೃಷ್ಟಿಸಿದೆ. ಇದೀಗ ಉಡುಗೆ ತೊಡುಗೆ ಪ್ರಕರಣಕ್ಕೆ ಮತ್ತೊಂದು ಭೀಕರ ಘಟನೆಯೂ ಸೇರಿಕೊಂಡಿದೆ. ಜೀಂಟ್ಸ್ ಪ್ಯಾಂಟ್ ಧರಿಸಿದ ಕಾರಣಕ್ಕೆ 17ರ ಯುವತಿಯನ್ನು ಕೋಲಿನಿಂದ ಬಡಿದು ಕೊಂದ ಘಟನೆ ನಡೆದಿದೆ.
ಬೆಂಗಳೂರಿನ ಬ್ಯಾಂಕ್‌ನಲ್ಲಿ ಭೀಕರ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ. 17ರ ಬಾಲಕಿಯ ಉಡುಗು ತೊಡೆಗುಗೆ ಪೋಷಕರ ವಿರೋಧವಿರಲಿಲ್ಲ. ಆದರೆ ಅಜ್ಜ ಸೇರಿದಂತೆ ಕುಟುಂಬಸ್ಥರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಮಂಗಳವಾರ(ಜು.20) ಕುಂಟಬಸ್ಥರ ಎಚ್ಚರಿಕೆ ಕಡೆಗಣಿಸಿ ಜೀನ್ಸ್ ಪ್ಯಾಂಟ್ ಧರಿಸಿದ ಕಾರಣಕ್ಕೆ ಕುಟುಂಬಸ್ಥರು ಬಾಲಕಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆ ಸಾಗಿಸೋ ನೆಪ ಹೇಳಿ ಕುಟುಂಬಸ್ಥರು ಮನೆಯಿಂದ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಕರಣ ಮುಚ್ಚಿಹಾಕಲು ಸೇತುವೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕತೆ ಕಟ್ಟಲಾಗಿದೆ ಎಂದು ಯವತಿ ತಾಯಿ ಆರೋಪಿಸಿದ್ದಾರೆ.
ಪತ್ನಿ ಅಂತ್ಯಸಂಸ್ಕಾರ ವೇಳೆ ಶಾಮಿಯಾನಕ್ಕೆ ನೇಣು ಬಿಗಿದು ಪತಿಯೂ ಆತ್ಮಹತ್ಯೆಘಟನೆ ರಾತ್ರಿ ಜೀನ್ಸ್ ಪ್ಯಾಂಟ್ ಧರಿಸಿದ ಬಾಲಕಿ, ಪೂಜೆಗೆ ತೆರಳುವುದಾಗಿ ಪಂಜಾಬ್‌ನಲ್ಲಿ ವಲಸೆ ಕಾರ್ಮಿಕರಾಗಿರುವ ತಂದೆಗೆ ಫೋನ್ ಮೂಲಕ ತಿಳಿಸಿದ್ದಾಳೆ. ಜೀನ್ಸ್ ಪ್ಯಾಂಟ್ ತೆಗೆಯಲು ಕೂಡು ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಎಚ್ಚರಿಕೆ ಸೊಪ್ಪು ಹಾಕದ ಬಾಲಕಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದಿಯೋರಿಯಾ ಪೊಲೀಸರು ಬಾಲಕಿಯ ಅಜ್ಜನನ್ನು ಬಂಧಿಸಿದ್ದಾರೆ. ಇತರ ಮೂವರು ಕುಟುಂಬ ಸದಸ್ಯರು ತಲೆಮೆರೆಸಿಕೊಂಡಿದ್ದಾರೆ.