Asianet Suvarna News Asianet Suvarna News

ಬೆಂಗಳೂರಿನ ಬ್ಯಾಂಕ್‌ನಲ್ಲಿ ಭೀಕರ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್!

ಜುಲೈ 19ರ ಸೋಮವಾರ, ಹಾಡಹಗಲೇ ನಡೆದಿದ್ದ ಹತ್ಯೆವೊಂದಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಕೋರಮಂಗಲದ ಬ್ಯಾಂಕ್ ಒಂದಕ್ಕೆ ನುಗ್ಗಿ ರೌಡಿಶೀಟರ್‌ ಬಬ್ಲಿ ಹತ್ಯೆ ನಡೆದಿತ್ತು. ಸದ್ಯ ಅವರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. 

ಬೆಂಗಳೂರು(ಜು.22): ಜುಲೈ 19ರ ಸೋಮವಾರ, ಹಾಡಹಗಲೇ ನಡೆದಿದ್ದ ಹತ್ಯೆವೊಂದಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಕೋರಮಂಗಲದ ಬ್ಯಾಂಕ್ ಒಂದಕ್ಕೆ ನುಗ್ಗಿ ರೌಡಿಶೀಟರ್‌ ಬಬ್ಲಿ ಹತ್ಯೆ ನಡೆದಿತ್ತು. ಸದ್ಯ ಅವರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. 

ಹೌದು ಸೋಮವಾರದಂದು ಕೋರಮಂಗಲದ ಯೂನಿಯನ್ ಬ್ಯಾಂಕ್‌ಗೆ ರೌಡಿ ಶೀಟರ್‌ ಬಬ್ಲಿ ತನ್ನ ಹೆಂಡತಿಯೊಂದಿಗೆ ಬಂದಿದ್ದ. ಬ್ಯಾಂಕ್ ಮುಂದೆ ಬೈಕ್ ನಿಲ್ಲಿಸುತ್ತಿದ್ದಂತೆಯೇ ಆತನಿಗಾಗಿ ಹೊಂಚು ಹಾಕಿದ್ದ ಹಂತಕರು ಅಲ್ಲಿಗಾಗಮಿಸಿದ್ದರು. ಅಪಾಯವನ್ನರಿತ ಬಬ್ಲಿ ಕೂಡಲೇ ಮಗಳನ್ನು ಬಿಟ್ಟು ಅಲ್ಲಿಂದ ಓಡಿದ್ದ. ಆದರೆ ಕೈಯ್ಯಲ್ಲಿ ಮಾರಕಾಸ್ತ್ರ ಹಿಡಿದು ಬಬ್ಲಿಯನ್ನು ಬೆನ್ನತ್ತಿದ್ದ ಏಳು ಮಂದಿ ಹಂತಕರು ಆತನನ್ನು ಅಟ್ಟಾಡಿಸಿ ಕೊಂದಿದ್ದರು. ಸದ್ಯ ಬಬ್ಲಿ ಮೇಲಿನ ದಾಳಿಯ ದೃಶ್ಯಾವಳಿಗಳು ವೈರಲ್ ಆಗಿವೆ. 

Video Top Stories