15 ವರ್ಷದ  ಪಂಟರ್ ಹ್ಯಾಕರ್...  ಚೀನಿ ಆ್ಯಪ್  ಬಳಸಿ ಪೋರ್ನ್ ತೋರಿಸುತ್ತಿದ್ದ

By Suvarna NewsFirst Published Jul 21, 2021, 10:20 PM IST
Highlights

* ಕಿರಾತಕ ಬಾಲಕ ಮಾಡಿದ ಕೆಲಸ ಅಂಥಿತ್ತದ್ದಲ್ಲ
* ಚೀನಿ ಅಪ್ಲಿಕೇಶನ್ ಬಳಸಿ ಬ್ಲಾಕ್ ಮೇಲ್
* ಪೋರ್ನ್ ವಿಡಿಯೋ ತೋರಿಸಿ ಬ್ಲಾಕ್ ಮೇಲ್
* ಹತ್ತನೇ ತರಗತಿ ವಿದ್ಯಾರ್ಥಿ ಹ್ಯಾಕಿಂಗ್ ಪಂಟರ್

ಭೋಪಾಲ್(ಜು. 21)   ಈ ಬಾಲಕ ಅಂತಿಂಥ ಕಿರಾತಕ ಅಲ್ಲ. ಬ್ಯಾನ್ ಆಗಿರುವ ಚೈನೀಸ್ ಆ್ಯಪ್  ಬಳಸಿ ಹಲವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ.

15 ವರ್ಷದ ಬಾಲಕ ಹಲವಾರು ಜನರನ್ನು ಬ್ಲ್ಯಾಕ್ ಮೇಲ್ ಮಾಡಲು ನಿಷೇಧಿತ ಚೀನೀ ಆ್ಯಪ್ ಮತ್ತು ವಾಟ್ಸಾಪ್ ಬಳಸುತ್ತಿದ್ದ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿಯಾಗಿರುವ ಈ ಹುಡುಗ ಈ ಆ್ಯಪ್  ಮೂಲಕ ಕರೆ ಮಾಡಿ ಎದುರಿಗೆ ಸಿಗುತ್ತಿದ್ದವರನ್ನು ಅಶ್ಲೀಲವಾಗಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ಸ್ಕ್ರೀನ್ ಶಾಟ್ ತೆಗೆದುಕೊಂಡು ನಂತರ ಬ್ಲಾಕ್ ಮೇಲ್ ಶುರು ಮಾಡುತ್ತಿದ್ದ.

10 ನೇ ತರಗತಿ ವಿದ್ಯಾರ್ಥಿ ನಿಷೇಧಿತ ಚೀನೀ ಅಪ್ಲಿಕೇಶನ್ 'ಟೆಕ್ಸ್ಟ್ ನೌ' ಅನ್ನು ಬಳಸಿಕೊಂಡು ಸುಮಾರು 14 ವಾಟ್ಸಾಪ್ ಖಾತೆ ಮಾಡಿಕೊಂಡಿದ್ದ.  ವಿವಿಧ ಖಾತೆಗಳಿಂದ ಹಣ ವರ್ಗಾವಣೆ ಮಾಡಿ ಡಾರ್ಕ್ ವೆಬ್ ಮೂಲಕ ಅದನ್ನು ಕ್ರಿಫ್ಟೋ ಕರೆನ್ಸಿಯನ್ನಾಗಿ ಬದಲಾಯಿಸುತ್ತಿದ್ದ.

ಬೆತ್ತಲೆ ಅಡಿಶನ್ ಮಾಡುತ್ತಿದ್ದ ರಾಜ್ ಕುಂದ್ರಾ!

21 ವರ್ಷದ ಯುವಕನೊಬ್ಬ ತನಗೆ ಮೋಸವಾಗಿದೆ ಎಂದು ಪೊಲೀಸರನ್ನು ಸಂಪರ್ಕಿಸಿದ್ದಾನೆ.  ವಾಟ್ಸ ಅಪ್ ಕಾಲ್ ಮೂಲಕ ಬೆದರಿಕೆ ಹಾಕುತ್ತಿದ್ದು ಹಣ  ಕೇಳುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದ.

ಮಾಹಿತಿ ಕಲೆಹಾಕಿದ ಪೊಲೀಸರು ಬಾಲಕನ ಬೆನ್ನು ಬಿದ್ದಿದ್ದಾರೆ. ತನ್ನ ಐಪಿ ಅಡ್ರೆಸ್ ಸಹ ಆತ ಬದಲಾಯಿಸಿಕೊಂಡು ಯುಎಇ ಎಂದು ತೋರಿಸುವಂತೆ ಮಾಡಿಕೊಂಡಿದ್ದ. ಆಪ್ ಬಳಸಿ ವಿಡಿಯೋ ಕಾಲ್ ಮಾಡಿ  ಮಾಡಿ ಎದುರಿಗೆ ಇದ್ದವನಿಗೆ ಪೋರ್ನ್ ವಿಡಿಯೋ ತೋರಿಸುತ್ತಿದ್ದ. ಅದು ಲೈವ್ ಚಾಟ್ ನಂತೆ ಭಾಸವಾಗುತ್ತಿತ್ತು. ಸಂದರ್ಭ ಬಳಸಿ ಸ್ಕ್ರೀನ್ ಶಾಟ್ ತೆಗೆದುಕೊಂಡು ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಬಾಲಕನ ತಂದೆ ಪ್ರಸಿದ್ಧ ಕಂಪನಿಯೊಂದರಲಲ್ಇ ಕೆಲಸ ಮಾಡುತ್ತಿದ್ದಾರೆ.   ಹ್ಯಾಕ್ ಮಾಡುವುದುದನ್ನು ಯೂಟ್ಯೂಬ್ ನೋಡಿ ಕಲಿತುಕೊಂಡಿದ್ದ.. ಜತೆಗೆ ಹ್ಯಾಕಿಂಗ್ ಕ್ಲಾಸ್ ಗಳನ್ನು ಅಟೆಂಡ್ ಮಾಡಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ. 

click me!