* ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸ್ನೇಹಿತರ ಬಳಿ ಹೇಳಿದ್ದ ಯುವಕ
* ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಪತ್ತೆ
* ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣು
ಬೆಂಗಳೂರು(ಡಿ.19): ಜೀವನದಲ್ಲಿ ಜಿಗುಪ್ಸೆಗೊಂಡ ಗಾರ್ಮೆಂಟ್ಸ್ ನೌಕರನೊಬ್ಬ(Garments Employee) ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ಧಾರ್ಥ ನಗರದ ನಿವಾಸಿ ಮೋಹನ್ ಕುಮಾರ್ (29) ಮೃತ(Death) ದುರ್ದೈವಿ. ಸಿದ್ಧಾರ್ಥ ನಗರದ ಸಮೀಪ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ(Deadbody) ಕಂಡು ಸ್ಥಳೀಯರು ಪೊಲೀಸರಿಗೆ(Police) ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು(Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೋಹನ್, ಪೀಣ್ಯ ಸಮೀಪ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಸ್ನೇಹಿತರ ಜತೆ ಸಿದ್ಧಾರ್ಥ ನಗರದಲ್ಲಿ ನೆಲೆಸಿದ್ದ ಆತ, ಮನೆಯಿಂದ ಹೊರ ಹೋಗಿ ಶನಿವಾರ ನಸುಕಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Tumakuru Family Suicide : ತುಮಕೂರು ಎಇಇ ಕುಟುಂಬ ಆತ್ಮಹತ್ಯೆಗೆ ಬೇರೆ ಟ್ವಿಸ್ಟ್
ಇತ್ತೀಚೆಗೆ ಬದುಕಿನ ಜಂಜಾಟಗಳಿಂದ ಬೇಸರಗೊಂಡು ಮೋಹನ್ ಖಿನ್ನತೆಗೊಳಗಾಗಿದ್ದ. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶುಕ್ರವಾರ ರಾತ್ರಿ ಹೇಳುತ್ತಿದ್ದ. ಆಗ ಆತನಿಗೆ ಬೈದು ಬುದ್ಧಿ ಮಾತು ಹೇಳಿದ್ದೆವು. ಆದರೆ ನಾವೆಲ್ಲ ಮಲಗಿದ ಬಳಿಕ ಆತ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮೃತನ ಸ್ನೇಹಿತರು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಅಪರಿಚಿತ ಯುವಕ ಆತ್ಮಹತ್ಯೆ
ಕಾರವಾರ(Karwar): ತಾಲೂಕಿನ ಕಣಸಗಿರಿ ಬಳಿ ಚಲಿಸುತ್ತಿರುವ ಗೂಡ್ಸ್ ಟ್ರೇನ್(Train) ಅಡಿಯಲ್ಲಿ ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನಿಗೆ 28-32 ವಯಸ್ಸು ಎಂದು ಅಂದಾಜಿಸಲಾಗಿದೆ. ಕಣಸಗಿರಿ ಬಳಿ ಕಾಳಿ ರೇಲ್ವೆ ಸೇತುವೆಯ ಮೇಲೆ ಗೂಡ್ಸ್ ಟ್ರೇನ್ ಬರುತ್ತಿರುವಾಗ ಹಳಿಗಳ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನ ವಿಳಾಸ ಪತ್ತೆಯಾಗಬೇಕಿದೆ. ಚಿತ್ತಾಕುಲ ಪೊಲೀಸರು ಪ್ರಕರಣ(Case) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾವೇರಿ ನದಿಗೆ ಬಿದ್ದು ಮಗು ಜತೆ ತಾಯಿ ಆತ್ಮಹತ್ಯೆ
ಶ್ರೀರಂಗಪಟ್ಟಣ(Srirangapatna): 3 ವರ್ಷದ ಮಗುವಿನೊಂದಿಗೆ ಗೃಹಣಿ(Housewife) ಕಾವೇರಿ ನದಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಗಂಜಾಂನ ಗೋಸಾಯಿಘಾಚ್ ಬಳಿ ನಡೆದಿದೆ.
ಪಾಂಡವಪುರ ತಾಲೂಕು ಲಕ್ಷ್ಮಿಸಾಗರ ಗ್ರಾಮದ ಪ್ರದೀಪ್ ಕುಮಾರ್ ಪತ್ನಿ ಭಾರ್ಗವಿ (30) ಹಾಗೂ ದೀಕ್ಷಾ (3) ಆತ್ಮಹತ್ಯೆಗೆ ಶರಣಾದವರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರು ಶೆಂಕೆ ವ್ಯಕ್ತಪಡಿಸಿದ್ದಾರೆ. ಮೃತ ಭಾರ್ಗವಿ ಅವರನ್ನು ದೇವೇಗೌಡನಕೊಪ್ಪಲು ಗ್ರಾಮದಿಂದ ಲಕ್ಷ್ಮೀಸಾಗರ ಗ್ರಾಮದ ಪ್ರದೀಪ್‌ಕುಮಾರ್ ಎಂಬುವವರೊಂದಿಗೆ ವಿವಾಹ(Marriage) ಮಾಡಿಕೊಡಲಾಗಿತ್ತು. ಮೈಸೂರಿನ ಊಟಗಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
Lover Commit Suicide: ಪ್ರೇಮಿ ಸಾವಿವ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!
ಶುಕ್ರವಾರ ಸಂಜೆ ಗಂಜಾಂನ ಗೋಸಾಯಿಘಾಟ್‌ಗೆ ತನ್ನ ಮಗಳು ದೀಕ್ಷಾನೊಂದಿಗೆ ಆಗಮಿಸಿದ ಭಾರ್ಗವಿ ಕಾವೇರಿ ನದಿ ತೀರದ ಪಕ್ಕದಲ್ಲೇ ಇದ್ದ ಜಮೀನಿನಲ್ಲಿ(Land) ತನ್ನ ಚಪಲ್ಲಿ, ಮೊಬೈಲ್ ಇಟ್ಟು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗ್ನಿ ಶಾಮಕ ದಳ ಸಿಬ್ಬಂದಿ ನೆರವಿನೊಂದಿಗೆ ಶವಗಳನ್ನು ನದಿಯಿಂದ ಹೊರ ತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರ್ಗವಿ ಹಾಗೂ ಧೀಕ್ಷ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಕರ ಆಕ್ರಂದನ ಮನ ಕಲಕುವಂತಿತ್ತು.
ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ(Karkala): ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ರಂಜಿತ್ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಎರ್ಲಪ್ಪಾಡಿ ಗ್ರಾಮದ ಶ್ರೀಧರ್ ಕುಲಾಲ್ (45) ಶುಕ್ರವಾರ ಬಾರ್ ಮಹಡಿಯ ಮೇಲ್ಛಾವಣಿಗೆ ಅಳವಡಿಸಿದ್ದ ಕಬ್ಬಿಣದ ರಾಡ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ 4 ವರ್ಷವಾದರೂ ಮಕ್ಕಳಿರದ ಕಾರಣ ಮಾನಸಿಕವಾಗಿ ನೊಂದಿದ್ದು, ಇದೇ ಕಾರಣದಿಂದಾಗಿ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.