ಗುಬ್ಬಿ(ಡಿ.18): ಹೇಮಾವತಿ (Hemavathi) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್ (Engineer) ಕುಟುಂಬ ಖಿನ್ನತೆಯಿಂದ ಬಳಲುತ್ತಿತ್ತಾ? ಇಂತಹದೊಂದು ಅನುಮಾನವನ್ನು ಸ್ವತಃ ಮೃತ ಕುಟುಂಬದ (Family) ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಎಂಜಿನಿಯರ್ ರಮೇಶ್ (Ramesh) ಹಾಗೂ ಪತ್ನಿ ಮಮತಾ ಅವರ ಮಗಳು ಶುಭಾಗೆ ಒಂದು ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು. ಆದರೆ ಕೌಟುಂಬಿಕ ಕಲಹದಿಂದಾಗಿ ಗಂಡನ ಮನೆಯಿಂದ ವಾಪಾಸಾಗಿದ್ದಳು. ಮದುವೆಯಾದ ತಿಂಗಳಲ್ಲೇ ಮಗಳನ್ನು ಅಳಿಯ ಕಳುಹಿಸಿದ್ದು, ಎಂಜಿನಿಯರ್ ರಮೇಶ್‌ಗೆ ತೀವ್ರ ಘಾಸಿಯಾಗಿತ್ತು. ಈ ಸಂಬಂಧ ತೀವ್ರ ಯೋಚನೆಗೆ ತೆಗೆದುಕೊಂಡಿದ್ದ ರಮೇಶ್ (Ramesh) ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.
ಅಲ್ಲದೇ ಕೆಲ ಆರೋಗ್ಯ ಸಂಬಂಧಿ ಸಮಸ್ಯೆಗಳು ಇದ್ದವು. ಮದುವೆಯಾದ ಮಗಳು ವಾಪಾಸ್ ತವರಿಗೆ ಸೇರಿದ್ದ ಹಿನ್ನೆಲೆಯಲ್ಲಿ ರಮೇಶ್ (Ramesh) ಹಾಗೂ ಅವರ ಪತ್ನಿ ಮಮತಾ ಮರ್ಯಾದೆಗೆ ಅಂಜಿ ಈ ದುರ್ಘಟನೆಗೆ ಮುಂದಾಗಿರಬಹುದು ಎಂದು ಪೊಲೀಸರ (Police) ಮುಂದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.
ಮೂಲತಃ ಕೆ.ಆರ್.ನಗರ ಮೂಲದ ರಮೇಶ್ ಉದ್ಯೋಗದ ಸಂಬಂಧ ತುಮಕೂರು (Tumakuru) ಜಿಲ್ಲೆಗೆ ಬಂದಿದ್ದರು. ಇವರ ಪತ್ನಿ ಕೂಡ ಸರ್ಕಾರಿ ಶಾಲಾ (Govt School) ಶಿಕ್ಷಕಿಯಾಗಿದ್ದರು. ಗುರುವಾರ ರಾತ್ರಿ ಸೋಮಲಾಪುರ ಗೇಟ್ ಬಳಿ ತಾವು ತಂದಿದ್ದ ಕಾರನ್ನು (Car) ನಾಲೆ ಬಳಿ ನಿಲ್ಲಿಸಿ ನಾಲೆಗೆ ಧುಮುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ರಾತ್ರಿ 7 ರಿಂದ 8 ಗಂಟೆ ಸುಮಾರಿಗೆ ಆತ್ಮಹತ್ಯೆ (Suicide) ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.
ಗುರುವಾರ ರಾತ್ರಿಯೇ ತಾಯಿ (Mother) ಮಗಳ ಶವಪತ್ತೆಯಾಗಿತ್ತು. ಆದರೆ ಸಹಾಯಕ ಎಂಜಿನಿಯರ್ ರಮೇಶ್ (Ramesh) ಅವರ ಮೃತದೇಹ ಶುಕ್ರವಾರ ಬೆಳಿಗ್ಗೆ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಅವರ ಸಂಬಂಧಿಕರಿಗೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರಿನಲ್ಲಿದ್ದ ಡೆತ್ ನೋಟ್ (DeathNote) ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು (Police) ತನಿಖೆ ಕೈಗೊಂಡಿದ್ದಾರೆ.
ಒಂದೇ ಕುಟುಂಬದ ಮೂವರ ಆತ್ಮಹತ್ಯೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಹ ಘಟನೆ ದಾವಣಗೆರೆ ನಗರದ ಭಾರತ್ ಕಾಲೋನಿಯಲ್ಲಿ ಸೆ.20 ರಂದು ನಡೆದಿತ್ತು. ಕೃಷ್ಣ ನಾಯಕ(35) ಲಾರಿ ಚಾಲಕ, ಪತ್ನಿ ಸುಮಾ (30), ಮಗು ಧೃವ (6) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಪತ್ನಿಯ ಅನಾರೋಗ್ಯದಿಂದ ಕುಟುಂಬ ಬೇಸತ್ತಿತ್ತು ಎಂದು ಹೇಳಲಾಗುತ್ತಿದೆ.
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿರಂತರ ಅಲೆದಾಡುತ್ತಿತ್ತು ಈ ಕುಟುಂಬ. ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ಕೃಷ್ಣನಾಯ್ಕ್ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಆರ್‌ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!
ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ಸೆ. 18 ರಂದು ನಡೆದಿತ್ತು. ಭಾರತಿ (50), ಸಿಂಚನಾ (33), ಸಿಂಧೂರಾಣಿ ( 30), ಮಧುಸಾಗರ್ (27) ಆತ್ಮಹತ್ಯೆಗೆ ಶರಣಾದವರು. ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದಿದ್ದಕ್ಕೆ ಬೇಸರಗೊಂಡಿದ್ದ ಶಂಕರ್, ಮನೆಯಲ್ಲಿ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಮನೆಗೆ ವಾಪಸ್ಸಾಗಿದ್ದಾರೆ. ಮನೆ ಬೀಗ ಹಾಕಿದ್ದನ್ನು ಗಮನಿಸಿ ಸ್ನೇಹಿತರ ಮನೆಗೆ ಹೋಗಿದ್ದಾರೆ. ಮನೆಯವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ರಿಸೀವ್ ಮಾಡದೇ ಇದ್ದಾಗ ಮನೆಗೆ ಬಂದು ಕಿಟಕಿ ಗಾಜು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು.