ವರದಿ : ದೀಪಕ್,ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಸೆ.24) : ಜಿಲ್ಲೆಯ ಮಾಲೂರು ತಾಲೂಕಿನ ಸಂಪನಗೆರೆ ಗ್ರಾಮದಲ್ಲಿ ಹಾಡಹಗಲೇ ಸಿನಿಮಾ ರೀತಿಯಲ್ಲಿ ದರೋಡೆ ನಡೆದಿದೆ. ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದು ದರೋಡೆ ಮಾಡಿದ್ದು ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗ್ರಾಮದ ಮಂಜುನಾಥ್(Manjunath) ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು,ಎರಡು ಎಕರೆ ಜಮೀನನ್ನು 43 ಲಕ್ಷಕ್ಕೆ ಮಾರಿದ್ದ ಹಣವಾಗಿದೆ. ಸಂಪನಗೆರೆ ಗ್ರಾಮದ ಮಧ್ಯದಲ್ಲಿರುವ ತಮ್ಮ ಹೆಂಚಿನ ಮನೆಯನ್ನು ಕೆಡವಿ ನೂತನ ಮನೆ ಕಟ್ಟುವುದಕ್ಕಾಗಿ ಮಂಜುನಾಥ್ ತಮ್ಮ ಜಮೀನು ಮಾರಿ ಹಣ ಹೊಂದಿಸಿದರು.
Mysuru Crime: ಒಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳರು; ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಎಸ್ಕೆಪ್
ಜಮೀನು ಮಾರಿದ್ದ ಹಣ ಹಾಗೂ ಚಿನ್ನವನ್ನು ಭದ್ರವಾಗಿ ಮನೆಯ ಬೀರುವಿನಲ್ಲಿಡುವಂತೆ ಮಂಜುನಾಥ್ ತನ್ನ ಪತ್ನಿ ಮಮತಾ ತಿಳಿಸಿ ತೋಟದ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೆ ವಿಚಾರ ತಿಳಿದು ದಾಳಿ ಮಾಡಿರುವ ದರೋಡೆಕೊರರು, ಒಂಟಿಯಾಗಿ ಮನೆಯಲ್ಲಿದ್ದ ಮಮತಾಳನ್ನು ನಂಬಿಸಿ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡುವ ನೆಪದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯ ಚೇರಿನ ಮೇಲೆ ಕೂರಿಸಿ, ಅತಿಥಿಗಳಿಗೆ ಕುಡಿಯಲು ನೀರು ತೆಗೆದುಕೊಂಡು ವಾಪಸ್ಸು ಬರುವಾಗ ಸಿನಿಮಾ ರೀತಿಯಲ್ಲಿ ಮಮತಾಳ ಮುಖಕ್ಕೆ ಮತ್ತು ಬರುವಂತ ಸ್ಪ್ರೇ ಮಾಡಿದ್ದಾರೆ. ಮಮತಾ ಕೆಳಗೆ ಕುಸಿದು ಬೀಳುತ್ತಿದಂತೆ ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನವನ್ನು ದೋಚಿ,ಯಾರಿಗೂ ಅನುಮಾನ ಬರದ ರೀತಿ ಮನೆಯ ಬಾಗಿಲಿನ ಚಿಲಕ ಹಾಕಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.
ಇನ್ನು ಎಂದಿನಂತೆ ತೋಟದ ಕೆಲಸವನ್ನು ಮುಗಿಸಿಕೊಂಡು ಮನೆಗೆ ವಾಪಸ್ಸಾದಾಗ ಮಂಜುನಾಥ್ ಬಾಗಿಲನ್ನು ತೆರೆದು ಮನೆಯ ಒಳಗೆ ಪ್ರವೇಶ ಮಾಡುತ್ತಿದಂತೆ ಜ್ಞಾನ ತಪ್ಪಿ ಕೆಳಗೆ ಬಿದಿದ್ದ ಮಮತಾಳನ್ನು ಕಂಡು ಶಾಕ್ ಆಗಿದ್ದಾರೆ. ಮನೆಯ ಒಳಗೆ ಚೆಲ್ಲಾಪಿಲ್ಲಿ ಆಗಿದ್ದನ್ನು ಗಮನಿಸಿ ತಕ್ಷಣ ಮಮಾತಾಳ ಮುಖಕ್ಕೆ ನೀರು ಚಿಮ್ಮಿಸಿ ವಿಚಾರಿಸಿದಗ ನಡೆದ ಘಟನೆಯನ್ನು ಪತಿ ಮಂಜುನಾಥ್ ಗೆ ವಿಚಾರಿಸುತ್ತಿದ್ದಂತೆ ತಡಮಾಡದೆ ಮಾಲೂರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಮಹಿಳೆ ಕೊಲೆಗೈದು ಚಿನ್ನಾಭರಣ ದರೋಡೆ: ಶವ ನದಿಗೆ ಎಸೆದು ದುಷ್ಕರ್ಮಿಗಳು ಎಸ್ಕೇಪ್
ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಎಸ್ಪಿ ದೇವರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಎಸ್ಪಿ ದೇವರಾಜ್ ಅವರು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಎರಡು ವಿಶೇಷ ತಂಡವನ್ನು ರಚಿಸಿ ದರೋಡೆಕೋರರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದ್ದು, ಹಣದ ವಿಚಾರ ಗೊತ್ತಿರುವವರೇ ಈ ಕೃತ್ಯ ಮಾಡಿದ್ದಾರೆ. ಇಂದು ರಾತ್ರಿ ಒಳಗೇ ಬಂಧನವಾಗಲಿದೆ ಎಂದು ಹೇಳಲಾಗ್ತಿದೆ. ಗ್ರಾಮದಲ್ಲಿ ನಡೆದಿರುವ ಸಿನಿಮೀಯ ರೀತಿಯ ದರೊಡೆಗೆ ಗ್ರಾಮಸ್ಥರು, ಮಹಿಳೆಯರು ಶಾಕ್ ಆಗಿದ್ದಾರೆ.