ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಸೆ.24): ವಿಜ್ಞಾನ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಕಳ್ಳರು ಹೈಟೆಕ್ ಆಗುತ್ತಿದ್ದು ಸೈಬರ್ ಖದೀಮರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ ಸಹಾಯದಿಂದಲೇ ವಂಚನೆ ಮಾಡುವ ಖದೀಮರಿಗೆ ಯಾರ ಭಯವೂ ಇಲ್ಲ. ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿಯೇ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಖತರ್ನಾಕ್ ಸೈಬರ್(cyber) ಖದೀಮರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್(Dr.Sanjeev Patil) ಹೆಸರಿನಲ್ಲಿ ಇನ್‌ಸ್ಟಾಗ್ರಾಂ(Instagram)ನಲ್ಲಿ ನಕಲಿ ಖಾತೆ(Fake account)ಯನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
Cyber Crime: ದ.ಕ ಡಿಸಿ ಮೊಬೈಲ್ ನಂಬರ್ ಹ್ಯಾಕ್: ಜನತೆ ಮೋಸ ಹೋಗದಂತೆ ಡಿಸಿ ಮನವಿ
ಬೆಳಗಾವಿ(Belgavi) ಎಸ್‌ಪಿ ಡಾ.ಸಂಜೀವ ಪಾಟೀಲ್ ಈ ಮುಂಚೆ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿಯಾಗಿದ್ದರು. ಡಾ.ಸಂಜೀವ ಪಾಟೀಲ್‌ರ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಖಾತೆಯಿಲ್ಲ. ಇದನ್ನೇ ಲಾಭವನ್ನಾಗಿಸಿಕೊಂಡ ಸೈಬರ್ ಖದೀಮರು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಹೆಸರು ಹಾಗೂ ಫೋಟೋ ಬಳಸಿ ಇನ್‌ಸ್ಟಾಗ್ರಾಂನಲ್ಲಿ Dr.Sanjeev M Patil, IPS dcpwestbengaluru_ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 7500 ರೂಪಾಯಿ ಹಣ ವರ್ಗಾವಣೆ ಮಾಡುವಂತೆ ಫಾಲೋವರ್ಸ್ ಬಳಿ ರಿಕ್ಚೆಸ್ಟ್ ಮಾಡಿದ್ದಾನೆ.
ಹೀಗಾಗಿ ಈ ಕುರಿತು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಟ್ವೀಟ್(Tweet) ಮಾಡಿದ್ದು, 'ನನ್ನ ಹೆಸರು ಮತ್ತು ಫೋಟೋ ಬಳಸಿ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದಿದ್ದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರಿಕೆ ವಹಿಸಲು ಕೋರಲಾಗಿದೆ' ಎಂದು ತಿಳಿಸಿದ್ದಾರೆ.
ನನ್ನ ಹೆಸರು ಮತ್ತು ಫೊಟೊ ಬಳಸಿ ಇನ್ಸ್ಟಾಗ್ರಾಂ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರವಹಿಸಲು ಕೋರಲಾಗಿದೆ.
— SP Belagavi (@SPBelagavi)ಗ್ರಾಮೀಣ ಪ್ರದೇಶದಲ್ಲೂ ಸೈಬರ್ ಅಪರಾಧ ಹೆಚ್ಚಳ; ಎಸ್‌ಪಿ ಆರ್. ಚೇತನ್
ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದು ಕಂಡು ಬಂದ್ರೆ ಏನ್ ಮಾಡಬೇಕು?
ಯಾರಾದರೂ ನಿಮ್ಮ ಹೆಸರು ಮತ್ತು ನಿಮ್ಮ ಪ್ರೊಫೈಲ್ ಅಥವಾ ನಿಮ್ಮ ಸ್ನೇಹಿತರನ್ನು ಬಳಸಿಕೊಂಡು ಯಾರಾದರೂ ನಕಲಿ ಖಾತೆ ರಚಿಸಿದ್ದು ಕಂಡು ಬಂದ್ರೆ, ನಕಲಿ ಫೇಸ್‌ಬುಕ್ ಖಾತೆಯನ್ನು ತಕ್ಷಣವೇ ಡಿಲೀಟ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
ಕ್ಲಿಕ್ ಮಾಡಿದಾಗ, ನೀವು ಮೂರು ಆಯ್ಕೆಗಳನ್ನು ಕಾಣಬಹುದು
ಅದರಲ್ಲಿ, Find Support or Report Profile ಎಂಬ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ
ಮೇಲಿನ ಹಂತಗಳನ್ನು ಅನುಸರಿಸಿದ ನಂತರ, ನಕಲಿ ಖಾತೆಯ ಪ್ರೊಫೈಲ್ ಅನ್ನು 5 - 10 ನಿಮಿಷಗಳಲ್ಲಿ ಡಿಲೀಟ್ ಆಗುತ್ತದೆ. ಎಂದು ಸೈಬರ್ ಕ್ರೈಮ್ ಸೆಲ್‌ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.