ಡ್ರಗ್ ಪೆಡ್ಲರ್ ಹೊಟ್ಟೆಯಲ್ಲಿತ್ತು 13.6 ಕೋಟಿ ರೂ. ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್!

Published : Sep 24, 2022, 01:56 PM ISTUpdated : Sep 24, 2022, 01:58 PM IST
ಡ್ರಗ್ ಪೆಡ್ಲರ್ ಹೊಟ್ಟೆಯಲ್ಲಿತ್ತು 13.6 ಕೋಟಿ ರೂ. ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್!

ಸಾರಾಂಶ

ಡ್ರಗ್ ಪೆಡ್ಲರ್ ಹೊಟ್ಟೆಯಲ್ಲಿತ್ತು 13.6 ಕೋಟಿ ರೂ. ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್! ಕೇಂಪೇಗೌಡ ಏರ್‌ಪೋರ್ಟ್‌ನಲ್ಲಿ ‌ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ

ಬೆಂಗಳೂರು ಗ್ರಾಮಾಂತರ (ಸೆ.24) : 104 ಕೊಕೇನ್ ತುಂಬಿದ್ದ ಕ್ಯಾಪ್ಸುಲ್ ಗಳನ್ನ  ನುಂಗಿ ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ಹೊಟ್ಟೆಯಲ್ಲಿದ್ದ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್ ಗಳನ್ನ ವಶಕ್ಕೆ  ಪಡೆಯಲಾಗಿದೆ.  

Bengaluru Crime News: ಸೀರಿಯಲ್​ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್‌

ಇಥಿಯೋಪಿಯ(Ethiopia)ದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ಕ್ಕೆ ಬಂದ ಪ್ರಯಾಣಿಕ ಬೆಂಗಳೂರು(Bengaluru) ಕಸ್ಟಮ್ಸ್ ನ ಇಂಟೆಲಿಜೆನ್ಸ್ ಯುನಿಟ್(CIU) ಅಧಿಕಾರಿಗಳು  ವಿಚಾರಣೆ  ನಡೆಸಿದ ವೇಳೆ ಮಾದಕ ದ್ರವ್ಯ  ಕಳ್ಳಸಾಗಾಣಿಕೆಯ ಪ್ರಕರಣ ಬೆಳಕಿಗೆ ಬಂದಿದೆ,  ಬಂಧಿತ ವ್ಯಕ್ತಿ  ಘಾನ(Ghana)ದ 53 ವರ್ಷದ ಬಾಹ್ ಅಂಪಾಡು ಕ್ವಾಡ್ವೋ(Bah Ampadu Kwadwo) ಎಂದು ತಿಳಿದು ಬಂದಿದೆ, ಆರೋಪಿ ಅಡಿಸ್ ಅಬಾಬಾ(Addis Ababa)ದಿಂದ ಇಥಿಯೋಪಿಯನ್(Ethiopian) ಏರ್‌ಲೈನ್ಸ್ ಫ್ಲೈಟ್ ET 690 ಮೂಲಕ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ.

ಸಂಶಯದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಸ್ಕ್ಯಾನ್ ಗೆ ಒಳಪಡಿಸಿದ್ದಾಗ, ಆತನ ಹೊಟ್ಟೆಯಲ್ಲಿ  ಕ್ಯಾಪ್ಸುಲ್(Capsule) ಗಳನ್ನ ತೋರಿಸಿದೆ, ಬಹಳ ಎಚ್ಚರಿಕೆಯಿಂದ 104 ಕ್ಯಾಪ್ಸುಲ್ ಗಳನ್ನ ಹೊರಗೆ ತೆಗೆಯಲಾಗಿದೆ. ಮೂರು ದಿನದೊಳಗೆ ಕ್ಯಾಪ್ಸುಲ್ ಗಳನ್ನ ಹೊರಗೆ ತೆಗೆಯದಿದ್ದಲ್ಲಿ ಆತನ ಜೀವಕ್ಕೆ ಅಪಾಯ ಇತ್ತು. ಒಂದು ವೇಳೆ  ಹೊಟ್ಟೆಯೊಳಗೆ ಕ್ಯಾಪ್ಸುಲ್ ಗಳು ಹೊಡೆದು ಹೊಗಿದ್ರು ಜೀವಕ್ಕೆ ಕಂಠಕವಾಗುತ್ತಿತ್ತು. ಒಡಿಶಾದ ಮೂವರು ಸೇರಿ 8 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ

ಆರೋಪಿಯಿಂದ ಒಟ್ಟು  1.2 ಕೆಜಿಯ 104 ಕ್ಯಾಪ್ಸುಲ್ ಗಳನ್ನ ವಶಕ್ಕೆ  ಪಡೆಯಲಾಗಿದ್ದು ಅಂತರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಇದರ ಬೆಲೆ 13.6 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಎನ್ ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ  ದಾಖಲು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ