ACB Raid:ಪೈಪ್‍ನಲ್ಲಿ ಹಣ ತುರುಕಿದ್ದ ಜೆಇ ಅಕ್ರಮ ಸಂಪತ್ತು, ಅಚ್ಚರಿಯ ಮಾಹಿತಿ ಬಹಿರಂಗ!

By Suvarna News  |  First Published Nov 25, 2021, 4:58 PM IST

* ಪೈಪ್‍ನಲ್ಲಿ ಹಣ ತುರುಕಿದ ಕುಖ್ಯಾತಿ ಶಾಂತಗೌಡನ ಬಗೆದಷ್ಟು ಅಕ್ರಮ ಸಂಪತ್ತು ಪತ್ತೆ
* ಅಕ್ರಮ ಆದಾಯದ ಮಾಹಿತಿ ಕಲೆಹಾಕುತ್ತಿರುವ ಎಸಿಬಿ ಅಧಿಕಾರಿಗಳು
* ಜೆಇ ಶಾಂತಗೌಡ ಬಿರಾದಾರ್ ಖಜಾನೆ ಸುತ್ತಮುತ್ತ ಅಚ್ಚರಿಯ ಸಂಗತಿಗಳ ಹೂರಣ


ಕಲಬುರಗಿ, (ನ.25): ಜೇವರ್ಗಿ (Jevargi) ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಜೆಇ ಶಾಂತಗೌಡ  ಬಿರಾದಾರ್ (JE Shanthgowda Biradar) ಅವರ ಅಕ್ರಮ ಆದಾಯದ ಮಾಹಿತಿ ಕಲೆಹಾಕುತ್ತಿರುವ ಎಸಿಬಿ  (ACB) ಅಧಿಕಾರಿಗಳು ಗುರುವಾರವೂ ಶೋಧ ಮುಂದುವರಿಸಿದ್ದಾರೆ.

ನಿನ್ನೆ ಎಸಿಬಿ ಅಧಿಕಾರಿಗಳಿಗೆ 2 ಲಾಕರ್ ಕೀ ಕೊಡಲು ಶಾಂತಗೌಡ ಸತಾಯಿಸಿದ್ದರು. ಇಂದೂ ಸಹ ಲಾಕರ್ ಕೀ ಕೊಟ್ಟಿಲ್ಲವಾದರೂ ಅಧಿಕಾರಿಗಳು ಶಾಂತಗೌಡ ಹೊಂದಿರುವ ಬ್ಯಾಂಕ್ ಖಾತೆಗಳ ತಲಾಶ್ ಮುಂದುವರಿಸಿದ್ದಾರೆ (ACB raid). ಕಲಬುರಗಿ ಹಾಗೂ ಜೇವರ್ಗಿಯ ಎಸ್ಬಿಐ, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಜೆವರ್ಗಿಯ ಖಾಸಗಿ ಬ್ಯಾಂಕ್ ಶಾಖೆಗಳಲ್ಲಿ ಶಾಂತಗೌಡ ಹೆಸರಲ್ಲಿರುವ ಖಾತೆಗಳು, ಅಲ್ಲಿರುವ ಹಣಕಾಸಿನ ಮಾಹಿತಿ ಪಡೆಯುತ್ತಿದ್ದಾರೆ.

Tap to resize

Latest Videos

undefined

ACB Raid: ಕಲಬುರ್ಗಿ PWD ಅಧಿಕಾರಿ ಮನೆಯ ಪೈಪ್‌ನಲ್ಲಿ ನೀರಲ್ಲ, ಕಂತೆ ಕಂತೆ ಹಣ.!

ಎಸ್ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ಎರಡು ತಂಡಗಳಾಗಿ ತೆರಳಿದ ಎಸಿಬಿ ಸಿಬ್ಬಂದಿಗಳು ಕಲಬುರಗಿ ನಗರ ಹಾಗೂ ಜೇವರ್ಗಿ ಬ್ಯಾಂಕ್ ಶೋಧಕ್ಕೆ ಮುಂದಾಗಿದ್ದಾರೆ. ಎಸಿಬಿ ಮೂಲಗಳ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ಹಣ ಇಡಲಾಗಿದೆ. ಕೋಟಿಗಟ್ಟಲೇ ಸಂಪತ್ತು ಗುರುವಾರದ ಶೋಧದಲ್ಲಿಯೂ ಪತ್ತೆಯಾಗಿದೆ ಎನ್ನಲಾಗುತ್ತಿ.

ಕಲಬುರಗಿ ಸೂಪರ್ ಮಾರ್ಕೆಟ್‍ನಲ್ಲಿರುವ ಎಸ್ಬಿಐ ವಲಯ ಶಾಖೆ ಸೇರಿದಂತೆ ಇಲ್ಲಿರುವ ಕೆನರಾ, ಕರ್ನಾಟಕ ಬ್ಯಾಂಕ್‍ಗಳಿಗೂ ಎಸಿಬಿ ತಡ ಭೇಟಿ ನೀಡಿ ಕಡತಗಳು, ಖಾತೆಗಳ ಪರಿಶೀಲನೆ ನಡೆಸಿದೆ. ಮಹೀಂದ್ರಾ ಹಾಗೂ ಭಾಸ್ಕರ್ ಇವರನ್ನೊಳಗೊಂಡ ಇನ್ನೊಂದು ತಂಡ ಜೇವರ್ಗಿ ಎಸ್ಬಿಐ ಶಾಖೆಗೆ ಭೇಟಿ ನೀಡಿ ಅಲ್ಲಿ ಶಾಂತಗೌಡರ ಖಾತೆಗಳನ್ನು ಪರಿಶೀಲಿಸಿದೆ.

ACB Raid: ಕಲಬುರಗಿ ಭ್ರಷ್ಟ ಅಧಿಕಾರಿ ಶಾಂತಗೌಡ ಅರೆಸ್ಟ್‌

ಟ್ರಂಕ್ ಖರೀದಿಸಿ ಎಸಿಬಿ
ಎಸಿಬಿ ಸಿಬ್ಬಂದಿ ಶಾಂತಗೌಡರ ಸಂಪತ್ತು, ಕಡತ, ದಾಖಲೆಗಳನ್ನು ಜೋಡಿಸಿಡಲು ಹೊಸತಾಗಿ ಟ್ರಂಕ್‍ಗಳನ್ನೇ ಖರೀದಿಸಿದೆ. ಗುರುವಾರ ಸೂಪರ್ ಮಾರ್ಕೆಟ್‍ಗೆ ಹೋಗಿದ್ದ ಎಸಿಬಿ ಸಿಬ್ಬಂದಿಗಳು ಹೊಸ 2 ಟ್ರಂಕ್ ಖರೀದಿಸಿಕೊಂಡು ಬಂದಿದ್ದಾರೆ. ಇಂದು ಶಾಂತಡೌಗರ ಸಂಬಂಧಿಸಿದಂತೆ ಎಲ್ಲಾ ಆಸತಿಪಾಸ್ತಿ ಶೋಧಕಾರ್ಯ ಪೂರ್ಣಗೊಳ್ಳುವ ಸಂಭವಗಲಿದ್ದು ಕಡತಗಳು, ನೋಟು, ದಾಖಲೆಗಳನ್ನೆಲ್ಲ ಸುರಕ್ಷಿತವಾಗಿಡಲು ಈ ಟ್ರಂಕ್ ಬಳಕೆ ಮಾಡಲಾಗುತ್ತಿದೆ.

ತೋಟದ ಮನೆಯಲ್ಲೇ ಜಲ್ಲಿ ಕ್ರಶರ್ ಘಟಕ
ಶಾಂತಡೌಗರ ಯಡ್ರಾಮಿ ಹತ್ತಿರದ ಹಂಗರಗಿ ತೋಟದ ಮನೆಯಲ್ಲಿ ಜಾಲಾಡಿದಾಗ ಅಲ್ಲೇ ಜಲ್ಲಿ ಕಲ್ಲು ಘಟಕ ಪತ್ತೆಯಾಗಿದೆ. ಇದಲ್ಲದೆ ಮಗಳ ಹೆಸರಲ್ಲಿ ಶಾಲೆ ತೆರೆದಿದ್ದು ಅದಕ್ಕೊಂದು ವಾಹನ ಸಬ ಇರೋದು ಬೆಳಕಿಗೆ ಬಂದಿದೆ. ಹಂಗರಗಾ ಊರಿನಿಂದ ತಮ್ಮ ತೋಟದವರೆಗೂ ಸಿಸಿ ರಸ್ತೆ ನಿರ್ಮಿಸಿಕೊಂಡಿರುವ ಗೌಡರು ಇದಕ್ಕೆ ವೆಚ್ಚ ಮಾಡಿದ ಹಣದ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ.

ಜೇವರ್ಗಿಯ ಇಬ್ಬರು ಮಾಜಿ ಶಾಸಕರ ಅತ್ಯಾಪ್ತರು!
ಶಾಂತಗೌಡರು ಜೇವರ್ಗಿಯ ಇಬ್ಬರು ಮಾಜಿ ಶಾಸಕರ ಅತ್ಯಾಪ್ತರು ಎಂದು ಹೇಳಲಾಗುತ್ತಿದೆ. 20 ವರ್ಷದಿಂದ ಕೆಲಸಕ್ಕೆ ಸೇರಿರುವ ಗೌಡರು ಜೇವರ್ಗಿಯಲ್ಲೇ ಕಳೆದ 11 ವರ್ಷದಿಂದ ಕೆಲಸದಲ್ಲಿದ್ದಾರೆ. ಸ್ಥಳೀಯ ಕೆಲವು ಗುತತಿಗೆದಾರರಂದಿಗೆ ಮೈತ್ರಿ ಮಾಡಿಕೊಂಡಿರುವ ಶಾಂತಗೌಡ ಕೋಟ್ಯಾಂತರ ರುಪಾಯಿ ಕಾಮಗಾರಿ ತಾವೇ ಬೇನಾಮಿ ಗುತ್ತಿಗೆ ಮಾಡುತ್ತಿದ್ದರು ಎಂಬ ಚರ್ಚೆಗಳು ಸಾಗಿವೆ. ಈ ಮಾತಿಗೆ ಪೂರಕವಾಗಿ ಜಲ್ಲಿಕಲ್ಲು ಘಟಕವೂ ಇವರ ಹೊಲದಲ್ಲಿ ಪತ್ತೆಯಾಗಿದೆ. ಪ್ರಮುಖ ರಾಜಕೀಯ ಪಕ್ಷಗಳೆರಡರ ಜಿಲ್ಲಾ ಮುಖಂಡರಿಗೆ ಮೆಚ್ಚಿನವರಾಗಿದ್ದ ಇವರು ಪಿಡಬ್ಲೂಡಿ ಜೇವರ್ಗಿ ಉಪ ವಿಭಾಗದಲ್ಲಿನ ಎಲ್ಲಾ ಪ್ರಮುಖ ನಿರ್ಣಯಗಳಿಗೆ ತಮ್ಮದೇ ಮೂಗಿನ ನೇರಕ್ಕೆ ದಾಳ ಉರುಳಿಸುತ್ತಿದ್ದರು. ತಾಲೂಕು ಮಟ್ಟದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಡುವ ಕೆಲಸಗಳನ್ನೆಲ್ಲ ಜೆಇ ಆಗಿ ಶಾಂತಗೌಡರೇ ಮಾಡಿ ಮುಗಿಸುತ್ತಿದ್ದರು ಎಂದು ಜೇವರ್ಗಿ ಜನತೆ , ಇವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.

ಆದಾಯಕ್ಕಿಂತ 500 ಪಟ್ಟು ಆಸ್ತಿಪಾಸ್ತಿ!
ಶಾಂತಗೌಡರು ನೌಕರಿಗೆ ಸೇರಿದಾಗಿನಿಂದ, ಅವರು ಹೊಂದಿರುವ ಹುದ್ದೆ, ಸಂಬಳ ಲೆಕ್ಕ ಹಾಕಿ ಹೇಳೋದಾದಲ್ಲಿ ಆದಾಯಕ್ಕಿಂತ 500 ಪಟ್ಟು ಅದಿಕ ಆಸ್ತಿಪಾಸ್ತಿ ಮಾಡಿದ್ದಾರೆ. 2002 ರಲ್ಲಿ ನೌಕರಿಗೆ ಸೇರಿರುವ ಶಾಂತಗೌಡರ ಪ್ರಸ್ತುತ ಸಂಬಳ 51 ಸಾವಿರ ರುಪಾಯಿ, ಇವರ ಸೇವಾವಧಿಯ ವೇತನ, ಸ್ಥಿರಾಸ್ತಿ ಆದಾಯ ಲೆಕ್ಕ ಹಾಕಿದರೆ 1. 69 ಕೋಟಿ ರು ಆಗಬೇಕಿತ್ತು. ಆದರೆ ದಾಳಿಯ ಕಾಲದಲ್ಲಿ ಈಗಾಗಲೇ 6. 33 ಕೋಟಿ ರು ಮೊತ್ತದ ಆದಾಯ ಪತ್ತೆಯಾಗಿದ್ದು ಇನ್ನೂ ಈ ಮೊತ್ತ ಹೆಚ್ಚುವ ಸಾಧ್ಯತೆಗಳಿವೆ. ಇವರ ಆದಾಯದ ಹಿನ್ನೆಲೆಯಲ್ಲಿ 30 ಲಕ್ಷ ರು ಸ್ಥಿರಾಸ್ತಿ ಇರಬೇಕಿದ್ದ ಜಾಗದಲ್ಲಿ 1. 18 ಕೋಟಿ ರು ಸ್ಥಿರಾಸ್ತಿ ಪತ್ತೆಯಾಗಿದೆ. ಬೆಂಗಳೂರಿನ ಯಲಹಂಕದಿಂದ ಜೇವರ್ಗಿಯ ಹಂಗರಗಾ ಹಳ್ಳಿಯವರೆಗೂ ಶಾಂತಗೌಡರ ಆಸ್ತಿಪಾಸ್ತಿ ಹರಡಿದೆ.

click me!