Fraud: ಸ್ವಿಫ್ಟ್‌ ಕಾರು ಗೆದ್ದಿದ್ದೀರಿ ಎಂದು 11.65 ಲಕ್ಷ ಪಡೆದು ಟೋಪಿ ಹಾಕಿದ ಖದೀಮರು..!

Kannadaprabha News   | Asianet News
Published : Nov 25, 2021, 07:25 AM ISTUpdated : Nov 25, 2021, 07:34 AM IST
Fraud: ಸ್ವಿಫ್ಟ್‌ ಕಾರು ಗೆದ್ದಿದ್ದೀರಿ ಎಂದು 11.65 ಲಕ್ಷ ಪಡೆದು ಟೋಪಿ ಹಾಕಿದ ಖದೀಮರು..!

ಸಾರಾಂಶ

*   ಆನ್‌ಲೈನ್‌ ಶಾಪಿಂಗಲ್ಲಿ ಕಾರು ಗೆದ್ದಿರೋದಾಗಿ ಸ್ಕ್ರ್ಯಾಚ್‌ ಕಾರ್ಡ್‌ *   ಸ್ಕ್ರ್ಯಾಚ್‌ ಕಾರ್ಡ್‌ ನಂಬಿ ಮೋಸ ಹೋದ ಜಯನಗರದ ವ್ಯಕ್ತಿ *   ಆರ್‌ಟಿಒ ನೋಂದಣಿ ತೆರಿಗೆ ಪಾವತಿ ಮಾಡಿ ಎಂದು ಮೋಸ  

ಬೆಂಗಳೂರು(ನ.25):  ಆನ್‌ಲೈನ್‌ ಶಾಪಿಂಗ್‌ನಲ್ಲಿ(Online Shopping) ಕಾರು ಗೆದ್ದಿರುವುದಾಗಿ ಸೈಬರ್‌ ಕಳ್ಳರು(Cyber Thieves) ನಗರದ ವ್ಯಕ್ತಿಯೊಬ್ಬರ ಮನೆಗೆ ಅಂಚೆಯಲ್ಲಿ ಸ್ಕ್ರ್ಯಾಚ್‌ ಕಾರ್ಡ್‌ ಕಳುಹಿಸಿ ಬಳಿಕ .11.65 ಲಕ್ಷ ಪಡೆದು ವಂಚಿಸಿದ್ದು, ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರದ 9ನೇ ಬ್ಲಾಕ್‌ನ 49 ವರ್ಷದ ವ್ಯಕ್ತಿ ವಂಚನೆಗೆ(Fraud) ಒಳಗಾದವರು. ಅಕ್ಟೋಬರ್‌ 16ರಂದು ದೂರುದಾರರ ಮನೆ ವಿಳಾಸಕ್ಕೆ ಅಂಚೆ ಮೂಲಕ ಸ್ಕ್ರ್ಯಾಚ್‌ ಕಾರ್ಡ್‌(Scratch Card) ಕಳುಹಿಸಲಾಗಿತ್ತು. ಅದರಲ್ಲಿ ನಾಪ್‌ ಟೋಲ್‌ ಆನ್‌ಲೈನ್‌ ಶಾಪಿಂಗ್‌ನಲ್ಲಿ 8.80 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರು(Swift Desire Car) ಬಹುಮಾನ ಬಂದಿದೆ ಎಂದು ಬರೆಯಲಾಗಿತ್ತು. ಇದರಿಂದ ಸಂತಸಪಟ್ಟ ದೂರುದಾರ ಅಂಚೆಯಲ್ಲಿ ನೀಡಿದ್ದ ವಾಟ್ಸ್‌ಆಪ್‌ ನಂಬರ್‌ಗೆ ಸಂಪರ್ಕಿಸಿದ್ದಾರೆ. ಕರೆ ಸ್ವೀಕರಿಸಿದ ಸೈಬರ್‌ ಕಳ್ಳರು, ನಿಮಗೆ ಕಾರು ಬಹುಮಾನ(Prize) ಬಂದಿದೆ ಎಂದು ಶುಭಾಶಯ ಕೋರಿ ನಂಬಿಸಿದ್ದಾರೆ.

Fraud| ಒಂದೇ ಸೈಟ್‌ ಹಲವರಿಗೆ ಮಾರಾಟ, ಡಿ ಗ್ರೂಪ್‌ ಅಧ್ಯಕ್ಷನ ವಿರುದ್ಧ FIR

ನಿಮಗೆ ಕಾರು ಸಿಗಬೇಕಾದರೆ ಮುಂಗಡವಾಗಿ ಆರ್‌ಟಿಒ ನೋಂದಣಿ ತೆರಿಗೆ ಪಾವತಿಸಬೇಕು ಹೇಳಿದ್ದಾರೆ. ಸೈಬರ್‌ ವಂಚಕರ ಈ ಮಾತು ನಂಬಿದ ದೂರುದಾರ, ವಂಚಕರು ನೀಡಿದ ಬ್ಯಾಂಕ್‌ ಖಾತೆಗೆ(Bank Account) ಹಂತ ಹಂತವಾಗಿ .11.65 ಲಕ್ಷ ಜಮೆ ಮಾಡಿದ್ದಾರೆ. ಬಳಿಕ ಕಾರು ಯಾವಾಗ ಬರಲಿದೆ ಎಂದು ಕೇಳಿದಾಗ, ವಂಚಕರು ಕರೆ ಸಂಪರ್ಕ ಕಡಿತಗೊಳಿಸಿದ್ದಾರೆ. ಹಲವು ಬಾರಿ ಪ್ರಯತ್ನಿಸಿದರೂ ವಂಚಕರು ಕರೆ ಸ್ವೀಕರಿಸಿಲ್ಲ. ಹೀಗಾಗಿ ದೂರುದಾರರಿಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಮೊಬೈಲ್‌ ಕಳವು ಮಾಡುತ್ತಿದ್ದ ವೃತ್ತಿಪರ ಕಳ್ಳ ಸೇರಿ ಇಬ್ಬರ ಸೆರೆ

ಮೊಬೈಲ್‌ ಕಳವು(Mobile Theft) ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಕಿಡಿಗೇಡಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest).

ಫ್ರೇಜರ್‌ಟೌನ್‌ ನಿವಾಸಿ ಮೊಹಮದ್‌ ಉಸ್ಮಾನ್‌(21) ಮತ್ತು ಜೆ.ಜೆ.ನಗರ ನಿವಾಸಿ ರೌಡಿ ಶೀಟರ್‌(Rowdysheeter) ಅಸ್ಲಾಂ ಪಾಷಾ ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 2.66 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ, ಎರಡು ಮೊಬೈಲ್‌ ಫೋನ್‌ಗಳು ಹಾಗೂ .31 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲಸದ ಆಮಿಷ: Amazon ಹೆಸರಲ್ಲಿ 12 ಲಕ್ಷ ರು. ವಂಚನೆ

ಇತ್ತೀಚೆಗೆ ಮಿನರ್ವ ಮಿಲ್‌ ಗೇಟ್‌ ಎದುರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಿಂತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದು ವ್ಯಕ್ತಿಯ ಕೈಯಲ್ಲಿದ್ದ ಸುಮಾರು .35 ಸಾವಿರ ಮೌಲ್ಯದ ಮೊಬೈಲ್‌ ಫೋನ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಜೆ.ನಗರ ಪೊಲೀಸ್‌ ಠಾಣೆ ರೌಡಿ ಶೀಟರ್‌ ಆಗಿರುವ ಅಸ್ಲಾಂ ಪಾಷಾ ವೃತ್ತಿಪರ ಕಳ್ಳನಾಗಿದ್ದಾನೆ. ಉಸ್ಮಾನ್‌ ಕದ್ದ ಮೊಬೈಲ್‌ಗಳನ್ನು ಕಡಿಮೆ ದರಕ್ಕೆ ಖರೀದಿಸಿ ಬಳಿಕ ಕರ್ನಾಟಕ(Karnataka), ತಮಿಳುನಾಡು(Tamil Nadu), ಆಂಧ್ರಪ್ರದೇಶ(Andhra Pradesh) ರಾಜ್ಯಗಳಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಈ ಹಿಂದೆ ಜೆ.ಜೆ.ನಗರ, ಎಸ್‌.ಜೆ.ಪಾರ್ಕ್, ವಿವೇಕ ನಗರ, ಗಿರಿನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೆಲ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಕುಕೃತ್ಯ ಮುಂದುವರಿಸಿದ್ದ. ಎರಡು ವರ್ಷದ ಹಿಂದೆಯಷ್ಟೇ ಕೇಂದ್ರ ವಿಭಾಗದ ಪೊಲೀಸರು ಅಸ್ಲಾಂ ಪಾಷಾನನ್ನು ಬಂಧಿಸಿ 500ಕ್ಕೂ ಅಧಿಕ ಮೊಬೈಲ್‌ ಫೋನ್‌ ಜಪ್ತಿ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?