ಸತಾಯಿಸಿದ ಬಾಸ್ ನಂಬರ್ ಡೇಟಿಂಗ್ ಸೈಟ್‌ಗೆ ಸೇರಿಸಿ, ಮನೆಗೆ ಸೆಕ್ಸ್ ಟಾಯ್ಸ್ ಕಳುಹಿಸಿದ ಉದ್ಯೋಗಿ!

Published : Aug 08, 2020, 02:29 PM ISTUpdated : Aug 08, 2020, 02:34 PM IST
ಸತಾಯಿಸಿದ ಬಾಸ್ ನಂಬರ್ ಡೇಟಿಂಗ್ ಸೈಟ್‌ಗೆ ಸೇರಿಸಿ, ಮನೆಗೆ ಸೆಕ್ಸ್ ಟಾಯ್ಸ್ ಕಳುಹಿಸಿದ ಉದ್ಯೋಗಿ!

ಸಾರಾಂಶ

ರಜೆ ಕೇಳಿ ಕೊಡದ ಬಾಸ್ ಮೇಲೆ ರೇಗಾಡಿದ ಉದ್ಯೋಗಿ, ಸಮಸ್ಸೆಗೆ ಸ್ಪಂದಿಸಿದ ಬಾಸ್ ಮೇಲೆ ಹಲ್ಲೆ ಮಾಡಿದ ಉದ್ಯೋಗಿ ಸೇರಿದಂತೆ ಹಲವು ಕಾರಣಗಳಿಗೆ ಬಾಸ್ ವಿರುದ್ಧ ಉದ್ಯೋಗಿಗಳು ತಿರುಗಿಬಿದ್ದ ಘಟನೆಗಳು ನಡೆದಿವೆ. ಇದೀಗ ತನ್ನ ಪ್ರಾವಿಡೆಂಟ್ ಫಂಡ್(PF) ಮೊತ್ತ ಕ್ಲೀಯರ್ ಮಾಡದೇ ಸತಾಯಿಸುತ್ತಿದ್ದ ಬಾಸ್ ವಿರುದ್ಧ ಉದ್ಯೋಗಿ ಆಕ್ರೋಶ ವ್ಯಕ್ತಪಡಿಸಿದ ರೀತಿ ಭಾರಿ ಸಂಚಲನ ಮೂಡಿಸಿದೆ.

ಬೆಂಗಳೂರು(ಆ.08): ಸಾಮಾನ್ಯವಾಗಿ ಕಚೇರಿಗಳಲ್ಲಿ ಕೊಂಚ ಸಮಸ್ಯೆಯಾದರೂ ಉದ್ಯೋಗ ತೊರೆದು ಬೇರೆ ಕಂಪನಿಗೆ ಸೇರುವ ಸಮಯವಿದು. ಆದರೆ ಸದ್ಯ ಕೊರೋನಾ ವೈರಸ್ ಕಾರಣ ಹಲವು ಕೆಲಸ ಕಳೆದುಕೊಂಡಿದ್ದಾರೆ. ದುಡಿಮೆ, ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಹೀಗೆ ಕೆಲಸವಿಲ್ಲದೆ ಆದಾಯವೂ ಇಲ್ಲದ ಉದ್ಯೋಗಿ, ತನ್ನ ಪಿಎಫ್ ಹಣ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಬಾಸ್ ಸ್ಪಂದಿಸಲೇ ಇಲ್ಲ. ಹೀಗಾಗಿ ಬಾಸ್ ಫೋನ್ ನಂಬರನ್ನು ಡೇಟಿಂಗ್ ವೈಬ್‌ಸೈಟ್‌ಗೆ ನಮೂದಿಸಿ, ಮನೆಗೆ ಸೆಕ್ಸ್ ಟಾಯ್ಸ್ ಆರ್ಡರ್ ಮಾಡಿ ಕಳಹಿಸಿಕೊಟ್ಟ ಘಟನೆ ನಡೆದಿದೆ.

ತರಕಾರಿ ಮಾರುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ!

ಬೆಂಗಳೂರಿನ ಕಲ್ಮನೆ ಪ್ರವೇಟ್ ಲಿಮಿಟೆಡ್ ಕಂಪನಿಯ ಉದ್ಯೋಗಿ  ಹರಿಪ್ರಸಾದ್ ಜೋಶಿ , ಕೊರೋನಾ ವೈರಸ್ ಕಾರಣ ಉದ್ಯೋಗ ಹಾಗೂ ಆದಾಯವಿಲ್ಲದೆ ಪರದಾಡಿದ್ದಾನೆ. ಹೀಗಾಗಿ ತನ್ನ ಪಿಎಫ್ ಹಣ ಬಿಡುಗಡೆ ಮಾಡುವಂತೆ ಕಂಪನಿಗೆ ಮನವಿ ಮಾಡಿದ್ದಾನೆ. ಕೊರೋನಾ ವೈರಸ್ ಲಾಕ್‌ಡೌನ್ ಮೊದಲೇ ಪಿಎಪ್ ಹಣ ಕ್ಲೀಯರ್ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದಾನೆ.

ಹುಬ್ಬಳ್ಳಿ: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಸಾವು; ತನಿಖೆ ತೀವ್ರ...

ಈ ಹಿಂದಿನ ಬಾಸ್‌ಗೆ ಎಲ್ಲಾ ದಾಖಲೆ ನೀಡಿದ್ದರೂ ಪಿಎಫ್ ಕ್ಲೀಯರ್ ಮಾಡಿರಲಿಲ್ಲ. ಇದರಿಂದ ರೋಸಿ ಹೋದ ಉದ್ಯೋಗಿ ಹರಿಪ್ರಸಾದ್ ಜೋಶಿ, ನೂತನ ಬಾಸ್ ಅವಿನಾಶ್ ಪ್ರಭುಗೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರಭು ಕೊರೋನಾ ವೈರಸ್ ಸಮಸ್ಯೆ ಬಗೆ ಹರಿದು ಕಂಪನಿ ಆದಾಯ ಸಹಸ ಸ್ಥಿತಿಗೆ ಮರಳಿ ಎಂದಿದ್ದರು. ಆದರೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ  ಉದ್ಯೋಗಿ ಕಳೆದ ಹಲವು ತಿಂಗಳಿನಿಂದ ಇದಕ್ಕಾಗಿ ಅಲೆದಾಡುತ್ತಿದ್ದು, ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದಾನೆ.

ಉದ್ಯೋಗಿ ಪ್ರತಿ ದಿನ ಕರೆ ಮಾಡಿ ಬಾಸ್‌ಗೆ ಪ್ರಾವಿಡೆಂಟ್ ಫಂಡ್ ಕ್ಲೀಯರ್ ಮಾಡುವಂತೆ ಗೋಗೆರೆಯುತ್ತಿದ್ದ. ಇದರಿಂದ ರೋಸಿ ಹೋದ ಬಾಸ್ ಅವಿನಾಶ್ ಪ್ರಭು, ಪಿಎಫ್ ಹಣ ಕ್ಲೀಯರ್ ಮಾಡಲು ಸಾಧ್ಯವಿಲ್ಲ ಎಂದು ಗದರಿಸಿದ್ದಾನೆ. ದಿಕ್ಕೇ ತೋಚದ ಉದ್ಯೋಗಿ ಜೋಶಿ, ಬಾಸ್ ಮೊಬೈಲ್ ಸಂಖ್ಯೆನ್ನು ಡೇಟಿಂಗ್ ವೈಬ್‌ಸೈಟ್‌ನಲ್ಲಿ ನಮೂದಿಸಿದ್ದಾನೆ.

ಬಾಸ್ ಇಮೇಲ್‌ಗೆ ಅಸಭ್ಯ ಮೇಲೆ ಮಾಡಿದ್ದಾನೆ. ಇನ್ನು ಬಾಸ್ ಮನೆಗೆ ಸೆಕ್ಸ್ ಟಾಯ್ಸ್ ಆರ್ಡರ್ ಮಾಡಿ ಕಳಹಿಸಿಕೊಟ್ಟಿದ್ದಾನೆ. ಐಟಿ ಆಕ್ಟ್ ಪ್ರಕಾರ ಪೊಲೀಸರು ಉದ್ಯೋಗಿ ಹರಿಪ್ರಸಾದ್ ಜೋಶಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು