
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ, (ಮೇ.17): ಆತ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದನಂತೆ. ಅಷ್ಟರಲ್ಲೇ ಆತನ ಸ್ನೇಹಿತ ಫೋನ್ ಮನೆಯಿಂದ ಹೊರ ಬರಲು ಹೇಳಿದ್ದಾನೆ. ಮನೆಯಿಂದ ಹೊರ ಬಂದವನು ನಡು ರಸ್ತೆಯಲ್ಲೇ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಇದರಿಂದ ಇಡೀ ಊರೇ ಬೆಚ್ಚಿ ಬಿದ್ದಿದೆ.
ಈ ಮನೆಯಲ್ಲಿ ಇನ್ನೆರಡು ದಿನದಲ್ಲಿ ಸಂಭ್ರಮ ಮನೆ ಮಾಡಬೇಕಿತ್ತು. ಆದ್ರೆ ಇದೀಗಾ ಆ ಮನೆ ಸ್ಮಶಾನ ಮೌನ ಆವರಿಸಿದೆ..ಸಂಭ್ರಮದಲ್ಲಿರಬೇಕಾದ ಮನೆಯವರೆಲ್ಲ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ.ಹೌದು, ಇಷ್ಟಕ್ಕೆಲ್ಲ ಕಾರಣ ಈ ಬೀಕರ ಹತ್ಯೆ.ಈತನ ಹೆಸರು ಸಂಜಯ್...ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ನಿವಾಸಿ. ಗುಂಡ್ಲುಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಈತ ಕೆಲಸ ಮಾಡಿಕೊಂಡಿದ್ದನಂತೆ. ಆದ್ರೆ ನಿನ್ನೆ(ಸೋಮವಾರ) ರಾತ್ರಿ ಸ್ನೇಹಿತರೆ ಈತನಿಗೆ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ.
ಪಕ್ಕದ ಮನೆ ಸ್ನೇಹಿತನೊಂದಿಗೆ ಲವ್ವಿಡವ್ವಿ, ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ
ಹೌದು, ನಿನ್ನೆ ರಾತ್ರಿ ಸಂಜಯ್ ಕೆಲಸ ಮುಗಿಸಿಕೊಂಡು ಸಂಜಯ್ ಮನೆಗೆ ಬಂದಿದ್ದನಂತೆ. ಇನ್ನೆನು ಒಂದೆರೆಡು ದಿನದಲ್ಲಿ ಈತನ ಎಂಗೇಜ್ಮೆಂಟ್ ನಡೆಯಬೇಕಿತ್ತು. ಇದರ ಖುಷಿಯಲ್ಲಿ ಮನೆಯವರೆಲ್ಲ ಇದ್ದರು. ಈ ವೇಳೆ ಸ್ನೇಹಿತನೊಬ್ಬ ಕರೆ ಮಾಡಿ ತಮ್ಮ ಬೀದಿಯ ಅರಳಿ ಕಟ್ಟೆಯ ಬಳಿಗೆ ಬರಲು ಹೇಳಿದ್ದಾನೆ. ಅದರಂತೆ ಅರಳಿ ಕಟ್ಟೆ ಬಳಿಗೆ ಬಂದವನಿಗೆ ಅಲ್ಲೆ ಇದ್ದ ಅಭಿಲಾಷ್ ಎಂಬಾತ ಎದೆಯ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲೆ ಇದ್ದವರು ನೋಡ ನೋಡುತ್ತಿದ್ದಂತೆ ಸಂಜಯ್ ಕೊಲೆಯಾಗಿ ಹೋಗಿದ್ದಾನೆ. ಸ್ನೇಹದ ಹೆಸರಿನಲ್ಲಿ ಕರೆದು ಕೊಲೆ ಮಾಡಿದ್ದಾರೆ ಅಂತ ಕುಟುಂಬಸ್ಥರು ಇಡೀ ಶಾಪ ಹಾಕಿದ್ರು.
ಕೊಲೆಗೆ ಈ ವರೆಗು ಯಾರಿಗು ಸರಿಯಾದ ಮಾಹಿತಿ ಇಲ್ಲ.ಮೊನ್ನೆ ಗುಂಡ್ಲುಪೇಟೆಯಲ್ಲಿ ನಡೆದ ಪಟ್ಟಲದಮ್ಮ ಜಾತ್ರೆಯಲ್ಲಿ ಸಂಜಯ್ ಹಾಗೂ ಕೆಲ ಹುಡುಗರ ನಡುವೆ ಗಲಾಟೆಯಾಗಿತ್ತಂತೆ.ಇದೇ ರೀತಿ ಈ ಹಿಂದೆ ಕೂಡ ಸಂಜಯ್ ಹಾಗೂ ಕೆಲ ಹುಡುಗರ ನಡುವೆ ಗಲಾಟೆ ನಡೆಯುತಿತ್ತಂತೆ. ಆದ್ರೆ ಯಾವ ವಿಚಾರಕ್ಕೆ ಗಲಾಟೆಯಾಗುತಿತ್ತು ಅನ್ನೊದು ಮಾತ್ರ ಕುಟುಂಬಸ್ಥರಿಗೆ ಗೊತ್ತಿರಲಿಲ್ಲವಂತೆ. ಆದ್ರೆ ಮೊನ್ನೆ ನಡೆದ ಗಲಾಟೆ ವಿಚಾರ ಇಟ್ಟುಕೊಂಡು ಈ ಕೊಲೆ ಮಾಡಿರಬಹುದು ಅಂತ ಕುಟುಂಬಸ್ಥರು ದೂರಿದ್ದಾರೆ.
ಸದ್ಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಲಾಷ್ ಗೆ ಪೊಲೀಸರು ಬಲೆ ಬೀಸಿದ್ದಾರೆ. ಅದೇನೆ ಇರಲಿ ಜೀವ ಸಣ್ಣ ಪುಟ್ಟ ವಿಚಾರಕ್ಕೆ ಜೀವವನ್ನೇ ತೆಗೆದಿದ್ದು ಮಾತ್ರ ವಿಪರ್ಯಾಸ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ