ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಫೇಸ್‌ಬುಕ್, ಎಕ್ಸ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ.
ಬೆಂಗಳೂರು (ಜ.5) : ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಫೇಸ್‌ಬುಕ್, ಎಕ್ಸ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಹುಟ್ಟುಹಬ್ಬದ ದಿನಾಂಕ, ಹೆಸರು ಹಾಗೂ ಸಾಮಾನ್ಯ ಪದಗಳನ್ನು ಪಾಸ್‌ವರ್ಡ್‌ಗೆ ಬಳಸುವಾಗ ಯೋಚಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
undefined
2023ರಲ್ಲಿ ಭಾರತೀಯರ ನೆಚ್ಚಿನ ಪಾಸ್‌ವರ್ಡ್ ಯಾವ್ದು ನೋಡಿ: ನೀವೂ ಇದನ್ನೇ ಬಳಸ್ತಿದ್ರೆ ಮೊದ್ಲು ಚೇಂಜ್ ಮಾಡಿ!
ನಿಯಮಿತವಾಗಿ ಬಳಸುವ ಪಾಸ್ ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸಿ. ಸೈಬರ್ ವಂಚನೆಗಳಿಗೆ ಒಂದೇ ರೀತಿಯ ಪಾಸ್ ವರ್ಡ್ ಬಳಕೆ ಸಹ ಪ್ರಮುಖ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವದಲ್ಲಿ ಟಾಪ್‌ಟೆನ್ ಸಾಮಾನ್ಯ ಪಾಸ್‌ವರ್ಡ್ ಹೀಗಿವೆ.
ಪಾಸ್‌ವರ್ಡ್ ಬಳಸುವವರ ಸಂಖ್ಯೆ (ಸೆಕೆಂಡ್‌ಗಳ ಲೆಕ್ಕ)
123456 45,24,867
admin 40,08,850
123456789 13,71,152
123456789 12,13,047
1234 9,69,811
12345 7,28,414
password 7,10,321
123 5,28,086
ao123456 3,19,725
1234567890 3,02,709