ರಾಜ್ಯದಲ್ಲಿ ಕೊಲೆ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಮುಖಂಡರೊಬ್ಬರ ಹತ್ಯೆಯಾಗಿ ನಾಲ್ಕು ವರ್ಷವಾದರೂ ಇದುವರೆಗೂ ಹಂತಕರು ಪತ್ತೆಯಾಗಿಲ್ಲ. ಹೀಗಾಗಿ ಹಂತಕರ ಬಂಧನವಾಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.29): ರಾಜ್ಯದಲ್ಲಿ ಕೊಲೆ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಮುಖಂಡರೊಬ್ಬರ ಹತ್ಯೆಯಾಗಿ ನಾಲ್ಕು ವರ್ಷವಾದರೂ ಇದುವರೆಗೂ ಹಂತಕರು ಪತ್ತೆಯಾಗಿಲ್ಲ. ಹೀಗಾಗಿ ಹಂತಕರ ಬಂಧನವಾಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅನ್ವರ್ ಹತ್ಯೆಯಾಗಿ 4 ವರ್ಷ: ಬಿಜೆಪಿ ನಗರದ ಪ್ರಧಾನಕಾರ್ಯದರ್ಶಿಯಾಗಿದ್ದ ಉಪ್ಪಳ್ಳಿಯ ಅನ್ವರ್ ಹತ್ಯೆಯಾಗಿ 4 ವರ್ಷಗಳಾಗಿದ್ದು, ಇದುವರೆಗೂ ಹಂತಕರನ್ನು ಬಂಧಿಸಲು ಮುಂದಾಗದಿರುವ ಬಗ್ಗೆ ಮೃತರ ಕುಟುಂಬದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಗೌರಿಕಾಲುವೆಯಲ್ಲಿ ಜೂನ್ 26ರ 2018ರಂದು ಬಿಜೆಪಿ ಅನ್ವರ್ ಹತ್ಯೆಯಾಗಿದ್ದು, ಹಂತಕರನ್ನು ಪತ್ತೆಹಚ್ಚಿ ಬಂಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೃತರ ಕುಟುಂಬದವರು ಪತ್ರ ಬರೆದಿದ್ದರೂ ಹಂತಕರ ಬಂಧನವಾಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ನಾವು ಮತ ನೀಡಿದ್ದೇವೆ, ಬಿಜೆಪಿ ನಾಯಕರ ಗುಲಾಮರಲ್ಲ: ವಾಟ್ಸಾಪ್ ಸ್ಟೇಟಸ್ ಭಾರೀ ವೈರಲ್
ಎನ್ಐಎ ತನಿಖೆಗೆ ಆಗ್ರಹ: ಅನ್ವರ್ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಮುಂದುವರೆಸಿದ್ದು, ಹಂತಕರ ಸುಳಿವು ನಾಲ್ಕು ವರ್ಷಗಳಾದರೂ ಸಿಕ್ಕಿಲ್ಲವೆ ಎಂಬ ಪ್ರಶ್ನೆ ಎದುರಾಗಿದೆ. ನಗರದಲ್ಲಿ 2018ರ ಜೂನ್ 26 ರಂದು ಸಂಜೆ ಗೌರಿಕಾಲುವೆಗೆ ತೆರಳಿದ್ದ ಅನ್ವರ್ ಕಾರಿನ ಡೋರ್ ತೆಗೆಯಬೇಕೆನ್ನುವಷ್ಟರಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹರಿತವಾದ ಆಯುಧದಿಂದ ಹೊಟ್ಟೆಗೆ ಚುಚ್ಚಿದ್ದು, ಕೂಡಲೇ ಅವರನ್ನು ನಗರದ ಮಲ್ಲೇಗೌಡ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವಪ್ಪಿದ್ದರು.
ಹಂತಕರನ್ನು ಬಂಧಿಸುವಂತೆ ಕುಟುಂಬದವರು ಮತ್ತು ಸ್ನೇಹಿತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಮತ್ತೊಮ್ಮೆ ಉಪ್ಪಳ್ಳಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ, ಹಂತಕರ ಬಂಧನಕ್ಕೆ ಒತ್ತಾಯಿಸಲಾಗಿತ್ತು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾಗಿದ್ದ ಕೆ.ಅಣ್ಣಮಲೈ ಸ್ವತಹ ತನಿಖೆಕೈಗೆತ್ತಿಕೊಂಡು ಮಹತ್ವದ ದಾಖಲೆಗಳನ್ನು ಸಂಗ್ರಹಿಸ ತೊಡಗಿದ್ದರು. ಅಷ್ಟರಲ್ಲಿ ಅವರನ್ನು ರಾಜ್ಯ ಸರ್ಕಾರ ಅಮರನಾಥ ಯಾತ್ರಿಗರ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.
Chikkamagaluru: ಬೀರೂರು ರೈಲ್ವೆ ಸ್ಟೇಷನ್ನಲ್ಲಿ ಕಡೆಗೂ ಲಿಫ್ಟ್ ಅಳವಡಿಕೆ
ಆ ಕಾರ್ಯ ಮುಗಿಸಿಕೊಂಡು ಬಂದ ಬಳಿಕ ಅವರ ವರ್ಗಾವಣೆಯಾಗಿತ್ತು. ಅವರ ಕಚೇರಿಯನ್ನು ಎಸ್ಪಿಯವರನ್ನು ಕುಟುಂಬದವರು ಭೇಟಿ ಮಾಡಿ ಚರ್ಚಿಸಿದ್ದಾಗ ಹಂತಕರ ಸುಳಿಯ ಸದ್ಯದಲ್ಲೆ ದೊರೆಯಲಿದೆ ಎಂದು ಮಾಹಿತಿಯನ್ನುನೀಡಿ ಬೆಂಗಳೂರಿಗೆ ವರ್ಗಾವಣೆಯಾದರು. ಆ ನಂತರ ಹರೀಶ್ ಪಾಂಡೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾದರು. ಅನ್ವರ್ ಹತ್ಯೆಯನ್ನು ಸಿಐಡಿ ತನಿಖೆಗೆ ವಹಿಸಿದ್ದು, ಪತ್ತೆಕಾರ್ಯ ಮುಂದುವರೆದಿದೆ ಹತ್ಯೆಯ ಆರೋಪಿಗಳು ಬಂಧನಕ್ಕೊಳಗಾಗುವರೆ ಎಂಬುದನ್ನು ಕಾದು ನೋಡಬೇಕಿದೆ.