ಪರಸಂಗ ಮಾಡಿ ಕೆಟ್ಟ ಗೃಹಿಣಿ: ನೇಣಿಗೆ ಶರಣಾದ ಝುಂಬಾ ಟ್ರೈನರ್, ಪ್ರಿಯಕರನೂ ಆತ್ಮಹತ್ಯೆ

By Suvarna News  |  First Published Jul 29, 2022, 8:29 PM IST

ಬಳ್ಳಾರಿಯಲ್ಲಿ ಝೂಂಬಾ ಟ್ರೈನಿಂಗ್ ಹೇಳಿಕೊಡುತ್ತಿದ್ದ ಟ್ರೇನರ್ ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಾದ ಬಳಿಕ ಆಕೆಯ ಪ್ರಿಯಕರನೂ ನೇಣಿಗೆ ಶರಣಾಗಿದ್ದಾನೆ. 


ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ: ಮಾಡಬಾರದು ಮಾಡಿದ್ರೇ, ಆಗಬಾರದು ಆಗುತ್ತದೆ ಎನ್ನುವ ಮಾತಿಗೆ ಈ ಎರಡು ಆತ್ಮಹತ್ಯೆಗಳೇ ಸಾಕ್ಷಿಯಾಗಿವೆ. ವಾರದ ಹಿಂದೆ ಗೃಹಿಣಿ ಮತ್ತು ಇಂದು ಯುವಕನೊಬ್ಬನ ಸಾವಿಗೆ ಅನೈತಿಕ ಪ್ರೇಮ ಸಂಬಂಧವೇ ಕಾರಣ ಎನ್ನುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅವಳು ನೋಡೋಕೆ ಸುರಸುಂದರಿ. ಮೇಲಾಗಿ ವಿವಿಐಪಿಗಳಿಗೆ ಜಿಮ್ ಟ್ರೇನರ್ ಆಗಿದ್ದವಳು. ಮದುವೆಯಾಗಿ ಮುದ್ದಾದ ಮಗುವಿದ್ದಾಕೆ ಸಂಸಾರ ಮಾಡೋದನ್ನು ಬಿಟ್ಟು ಮತ್ತಿನೇನು ಮಾಡಲು ಹೋಗಿ ಮದುವೆಯ ನಂತರ ಮತ್ತೊಬ್ಬನ ಪ್ರೇಮಪಾಶಕ್ಕೆ ಒಳಗಾಗಿದ್ದಳು, ಮುಂದುವರೆದು ಪ್ರಿಯಕರನಿಗಾಗಿ ಗಂಡನಿಗೆ ವಿಚ್ಛೇದನ ನೀಡಿದ್ದಳು. ಪ್ರಿಯತಮನ ಮದುವೆಯಾಗುವ ಯೋಜನೆಯಲ್ಲಿದ್ದ ಆಕೆ ಈಗ ನೇಣಿಗೆ ಶರಣಾಗಿದ್ದಾಳೆ. 

ಪರಸಂಗ ಮಾಡಿ ಕೆಟ್ಟ ಗೃಹಿಣಿ ನೇಣಿಗೆ ಶರಣಾದ ದುರಂತ ಕತೆಯಿದು

Tap to resize

Latest Videos

undefined

ಮೈ ಬಳಕಿಸುತ್ತಾ ಎಲ್ಲರಿಗೂ ಝುಂಬಾ ಡಾನ್ಸ್ ಕ್ಲಾಸ್ ಹೇಳಿ ಕೊಡ್ತಾ ಇದ್ದ ಈ ಚೆಲುವೆಯ ಹೆಸರು ನಾಜೀಯಾ ಭಾನು. ಬಳ್ಳಾರಿಯ ಕೂಲ್ ಕಾರ್ನರ್ ಬಳಿಯ ನ್ಯೂ ಎನರ್ಜಿ ಫಿಟ್ನೆಸ್ ಸೆಂಟರ್ ನಲ್ಲಿ ಝುಂಬಾ ಡಾನ್ಸ್ ಕೋಚ್ ಆಗಿದ್ದ ಈಕೆ ಬಳ್ಳಾರಿಯ ಬಹುತೇಕ ಮಹಿಳೆಯರಿಗೆ ಝುಂಬಾ ಡಾನ್ಸ್ ತರಬೇತಿ ನೀಡುತ್ತಿದ್ದಳು. ನೋಡೋಕೆ ಅಂದ ಚೆಂದವಾಗಿದ್ದ ಈ ನಾಜಿಯಾ ಕೆಲ ವರ್ಷಗಳ ಹಿಂದೆ ಪೊಲೀಸ ಪೇದೆಯೊಬ್ಬರನ್ನ ಮದುವೆಯಾಗಿದ್ದಳು. ಮದುವೆ ನಂತರ ಮುದ್ದಾದ ಮಗು ಹೊಂದಿದ್ದ ನಾಜೀಯಾ ಮನಸ್ಸು ಮಾಡಿದ್ರೆ ಸುಖವಾಗಿ ಸಂಸಾರ ಮಾಡಬಹುದಿತ್ತು. ಆದ್ರೆ ಪರಸಂಗದ ಮೋಹದಲ್ಲಿ ಮತ್ತೊಬ್ಬರ  ಪ್ರೀತಿಯ ಬಲೆಗೆ ಬಿದ್ದ ಆಕೆಕಟ್ಟಿಕೊಂಡ ಗಂಡನಿಗೆ ವಿಚ್ಛೇದನ ಕೊಟ್ಟು ಪ್ರಿಯಕರನ ಹಿಂದೆ ಹೋಗಿದ್ದು, ಅದೇ ಈಗ ಆಕೆಯ ಜೀವಕ್ಕೆ ಮುಳುವಾಗಿದೆ. 

ಕಳೆದ ಮೂರು ದಿನಗಳ ಹಿಂದೆ ತಾನೂ ತರಬೇತಿ ನೀಡತ್ತಿದ್ದ ಝುಂಬಾ ಸೆಂಟರ್‌ನಲ್ಲಿಯೇ ನೇಣು ಬಿಗಿದುಕೊಂಡು ನಾಜೀಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಡೆತ್ ನೋಟ್ ಬರೆದಿಟ್ಟಿರುವ ಈ ಚೆಲುವೆ ನಾನು ಒಳ್ಳೆಯ ತಾಯಿಯೂ ಆಗಲಿಲ್ಲ. ತಾಯಿಗೆ ಒಳ್ಳೆಯ ಮಗಳು ಆಗಲಿಲ್ಲ. ಐ ಆಮ್ ಮ್ಯಾಡ್ ಅಂತಾ ಡೆತ್ ನೋಟ್ ನಲ್ಲಿ ನೋವು ತೋಡಿಕೊಂಡಿದ್ದಾಳೆ. ಪ್ರಿಯಕರನ ಮದುವೆಯಾಗೋ ಯೋಚನೆಯಲ್ಲಿದ್ದ ನಾಜಿಯಾ ಸಾವಿಗೆ ಶರಣಾಗಿದ್ದು ಏಕೆ ಎಂಬ ಬಗ್ಗೆ ಬಳ್ಳಾರಿ ಎಸ್ಪಿ ಸೈದುಲು ಅದಾವತ್  ವಿವರಿಸಿದ್ದಾರೆ.

ಝಂಬಾ ಟೀಚರ್ ಮನಸ್ಸು ಕದ್ದವನು ಆತ್ಮಹತ್ಯೆಗೆ ಶರಣು

ನಾಜಿಯಾಬಾನು ಗಂಡನನ್ನು ತೊರೆದು ಫೇಸ್ಬುಕ್ ಫ್ರೆಂಡ್ ಆಗಿದ್ದ ಮಂಜುನಾಥ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಮುದ್ದಾದ ಮಗು, ಗಂಡನನ್ನ ಬಿಟ್ಟು ಕಳೆದ 2-3 ವರ್ಷಗಳಿಂದ ಪ್ರಣಯ ಪಕ್ಷಿಗಳಂತೆ ಓಡಾಡುತ್ತಿದ್ದ ನಾಜೀಯಾ ಮತ್ತು ಮಂಜುನಾಥ ಮದುವೆಯಾಗೋ ಪ್ಲ್ಯಾನ್ ನಲ್ಲಿದ್ರು. ಆದ್ರೆ ಪ್ರೇಮಿಗಳಿಬ್ಬರ ಮಧ್ಯೆ ಮೂಡಿದ ಅದೊಂದು ಸಣ್ಣ ಬಿರುಕು ನಾಜಿಯಾಳನ್ನ ನೇಣಿಗೆ ಕೊರಳೊಡ್ಡುವಂತೆ ಮಾಡಿದೆ. ಇಬ್ಬರ ಮಧ್ಯೆ ನಡೆದ ಸಣ್ಣ ಜಗಳದ ನಂತರ ಪ್ರಿಯಕರ ಮಂಜುನಾಥ ನಾಜಿಯಾಳ ಪೋನ್ ರಿಸೀವ್ ಮಾಡದೇ ಇದ್ದಿದ್ದಕ್ಕೆ ಕಳೆದ 24ರಂದು ಝುಂಬಾ ಸೆಂಟರ್‌ನಲ್ಲೆ ನೇಣಿಗೆ ಶರಣಾಗಿದ್ದಾಳೆ. ನಾಜಿಯಾ ಸಾವನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಳೆದ 3 ದಿನಗಳಿಂದ ಮಂಕಾಗಿದ್ದ ಪ್ರೇಮಿ ಮಂಜುನಾಥ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾನೆ. ನನ್ನ ತಪ್ಪಿನಿಂದಲೇ ಅವಳ ಪ್ರಾಣ ಹೊಯ್ತು. ಅವಳ ಸಾವಿಗೆ ನಾನೇ ಕಾರಣ ಎಂದು ಕೊರಗಿದ ಪ್ರೇಮಿ ಮಂಜುನಾಥ 6 ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವನಪ್ಪಿದ್ದಾನೆ. ಮಂಜುನಾಥ ಆತ್ಮಹತ್ಯೆ ಸುದ್ದಿ ತಿಳಿದು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗ ಅವಳನ್ನ ಮದುವೆಯಾಗೋಕೆ ನಾನು ಒಪ್ಪಿದ್ದೇ. ಆದ್ರೆ ನನ್ನ ಮಗ ನನ್ನ ಬಿಟ್ಟು ಹೋದ ಅಂತಾ ಮಂಜುನಾಥ  ತಾಯಿ  ಶಂಕ್ರಮ್ಮ ಕಣ್ಣೀರಿಡುತ್ತಿರೋ ದೃಶ್ಯ ಮಾತ್ರ ಮನಕಲುಕುವಂತಿತ್ತು.

ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು

ಗಂಡನನ್ನ ಬಿಟ್ಟು  ಪ್ರೇಮಿಯನ್ನ ಮದುವೆಯಾಗೋಕೆ ರೆಡಿಯಾಗಿದ್ದ ನಾಜಿಯಾ ಸಣ್ಣ ಜಗಳದಿಂದ ಸಾವನ್ನಪ್ಪಿದ್ರೆ. ಪ್ರಿಯತಮೆಯ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೇ ಪ್ರೇಮಿ ಮಂಜುನಾಥ್‌ ಸಹ ನೇಣಿಗೆ ಕೊರಳೊಡ್ಡಿದ್ದಾನೆ. ಇವರಿಬ್ಬರ ಮಧ್ಯದ ಪ್ರೀತಿ ಸಾವಿನಲ್ಲಿ ಕೊನೆಯಾಗಿದೆ. ಆದರೆ ಏನೂ ತಿಳಿಯದ ನಾಜೀಯಾ ಬಾನು ಮುದ್ದಾದ ಮಗು ಮಾತ್ರ ತಾಯಿ ಪ್ರೀತಿಯಿಂದ ವಂಚಿತವಾಗಿದೆ. ಇನ್ನೊಂದೆಡೆ ಇರೋ ಒಬ್ಬ ಮಗ  ಮಂಜುನಾಥನನ್ನು ಕಳೆದುಕೊಂಡು ತಾಯಿ  ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕೌಟುಂಬಿಕ ಕಲಹ: ಮನನೊಂದ ತಾಯಿ 2 ವರ್ಷದ ಮಗುವಿನ ಜತೆ ಆತ್ಮಹತ್ಯೆ!

 

click me!