ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪೇಂಟರ್ ಕೊಲೆ: ಪಾರ್ಟಿ ಮಾಡಿಸಿ ಕೊಂದು ಹಾಕಿದರಾ ಕಿರಾತಕರು?

By Suvarna News  |  First Published Jul 29, 2022, 8:26 PM IST

Kalaburagi News: ಪೇಂಟರ್ ಕೆಲಸ ಮಾಡುತ್ತಿದ್ದ ಯುವಕನನ್ನು  ಮಾರಕಾಸ್ತ್ರಗಳಿಂದ ಕೊಚ್ಚಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ


ಕಲಬುರಗಿ (ಜು.29): ಪೇಂಟರ್ ಕೆಲಸ ಮಾಡುತ್ತಿದ್ದ ಯುವಕನನ್ನು ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಗಾಜೀಪೂರ ಬಡಾವಣೆಯ ನಿವಾಸಿ 28 ವರ್ಷದ ನಾಗರಾಜ್  ಕೊಲೆಯಾದ ದುರ್ದೈವಿ. ಎಂದಿನಂತೆ ಮೊನ್ನೆ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಹೋದವನು ವಾಪಾಸ್ ಬಂದೇ ಇಲ್ಲ. ಆದರೆ ಮರುದಿನ ಅಂದ್ರೆ ನಿನ್ನೆ ಆತನ ಶವ ಕಲಬುರಗಿ ನಗರದಿಂದ ಆಳಂದಗೆ ತೆರಳುವ ರಸ್ತೆಯಲ್ಲಿನ ಭೋಸಗಾ ಕ್ರಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಮೊದಲು ಅಪರಿಚಿತ ಶವ ಎನ್ನಲಾಗಿತ್ತಾದ್ರೂ ಕೆಲವೇ ನಿಮಿಷಗಳಲ್ಲಿ ಇದು ಗಾಜೀಪೂರ ಬಡಾವಣೆಯ ನಾಗರಾಜ್ ನದು ಎಂದು ಗೊತ್ತಾಗಿದೆ. 

ಪಾರ್ಟಿ ಮಾಡಿಸಿ ಕೊಲೆ?:  ನಾಗರಾಜ ಶವ ಪತ್ತೆಯಾದ ಸ್ಥಳದಲ್ಲಿ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಗ್ಲಾಸ್, ಸ್ಕ್ಯಾನ್ಸ ಪಾಕೇಟುಗಳು ಪತ್ತೆಯಾಗಿದ್ದು ಆ ಸ್ಥಳದಲ್ಲಿ ಕೊಲೆಗೂ ಮುನ್ನ ಮಧ್ಯದ ಪಾರ್ಟಿ ನಡೆದಿರುವುದು ತಿಳಿದುಬಂದಿದೆ. ಹೀಗಾಇ ಹಂತಕರು ನಾಗರಾಜನಿಗೆ ಪರಿಚಿತರೇ ಎನ್ನಲಾಗಿದೆ.

Tap to resize

Latest Videos

ಪಾರ್ಟಿ ಮಾಡುವುದಕ್ಕಾಗಿ ಆತನಿಗೆ ಕಲಬುರಗಿ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಕಂಠ ಪೂರ್ತಿ ಕುಡಿಸಿ ನಶೆಯ ಮತ್ತಿನಲ್ಲಿದ್ದ ನಾಗರಾಜನಿಗೆ ಮೊದಲು ಮಾರಕಾಸ್ತ್ರಗಳಿಂದ ಚುಚ್ಚಲಾಗಿದೆ. ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಲಕ್ಷಣಗಳು ಸ್ಥಳ ಪರಿಶೀಲನೆಯಿಂದ ಗೊತ್ತಾಗುತ್ತಿದೆ. 

ಕುತ್ತಿಗೆಗೆ ಹಗ್ಗ ಬಿಗಿದು ಯುವಕನ ಹತ್ಯೆ ಶಂಕೆ, ಘಟನಾ ಸ್ಥಳಕ್ಕೆ ಶ್ವಾನದಳ ಭೇಟಿ

ಇನ್ನು ಕಲಬುರಗಿ ನಗರ ಪೊಲೀಸ್ ಕಮೀಷನರ್, ಎನ್ ರವಿಕುಮಾರ ಮತ್ತು ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮುಗಿಲು ಉಟ್ಟಿದ ಆಕ್ರಂದನ: ನಾಗರಾಜ್ ಇನ್ನೂ ಅವಿವಾಹಿತನಾಗಿದ್ದ.‌ ತನ್ನ ಸಹೋದರಿಯರು ಹಾಗೂ ತಾಯಿಯ ಜೊತೆಗೆ ಕಲ್ಬುರ್ಗಿ ನಗರದ ಹೃದಯ ಭಾಗದಲ್ಲಿರುವಂತಹ ಗಾಜಿಪುರ ಬಡಾವಣೆಯಲ್ಲಿ ವಾಸವಾಗಿದ್ದ. ಸದಾ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಅದಾಗ್ಯೂ ಬಡಾವಣೆಯ ಜನರ ಪಾಲಿಗೆ ಮಾತ್ರ ಅಚ್ಚುಮೆಚ್ಚಿನ ಯುವಕನಾಗಿದ್ದ. 

ಯಾರೊಂದಿಗೂ ದ್ವೇಷ ಹೊಂದಿರದ ನಾಗರಾಜನ ಕೊಲೆ ಮನೆಯವರಿಗೆ ಮಾತ್ರವಲ್ಲ, ಬಡಾವಣೆಯ ಜನರಲ್ಲೂ ಅಚ್ಚರಿ ಹಾಗೂ ಆಘಾತ ಮೂಡಿಸಿದೆ. ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ.

click me!