* ನಬೀಸಾಬ್ ಜಾಪರ್ ಎಂಬುವರ ಅಂಗಡಿ ಧ್ವಂಸ ಮಾಡಿದ್ದ ಶ್ರಿರಾಮ ಸೇನಾ ಕಾರ್ಯಕರ್ತರು
* ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲು
* ಬಂಧಿತರ ಮೇಲೆ ಕಲಂ. 143, 147 298 427 504 506 ಸಹ ಕಲಂ 149 ಅನ್ವಯ ದೂರು
ಧಾರವಾಡ(ಏ.11): ನುಗ್ಗಿಕೇರಿ ಧರ್ಮ ವ್ಯಾಪಾರ(Religion Trade) ಗಲಾಟೆ ಕಳೆದ ಶನವಾರದಂದು ನಡೆದಿತ್ತು. ಇನ್ನು ಮಾ. 26 ಕ್ಕೆ ಹಿಂದೂ ದೇವಸ್ಥಾನ(Hindu Temple) ಆವರಣದಲ್ಲಿ ಮುಸ್ಲಿಂ ಅಂಗಡಿಗಳನ್ನ ತೆರವು ಮಾಡಿಸಬೇಕು ಎಂದು ದೇವಸ್ಥಾನದ ಟ್ರಸ್ಟಿಗಳಿಗೆ ಮನವಿ ಕೊಟ್ಟಿದ್ದರು. ಮನವಿ ಕೊಟ್ಟು 15 ದಿನಗಳು ಕಳೆದ್ರು ಅಂಗಡಿಯನ್ನ ತೆರವು ಮಾಡಿಲ್ಲ ಎಂದು ಆಕ್ರಮಣದಿಂದ ಶನಿವಾರದಂದು ಶ್ರಿರಾಮ ಸೇನಾ(Sri Ram Sene) ಕಾರ್ಯಕರ್ತರು ನುಗ್ಗಿಕೇರಿ ಆಂಜನೇಯನ ದೇವಸ್ಥಾನಕ್ಕೆ ಏಕಾಏಕಿ ನುಗ್ಗಿ ಐದು ಅಂಗಡಿಗಳನ್ನ ತೆರವು ಮಾಡಿದ್ದಾರೆ.
ಕಲ್ಲಂಗಡಿ ಹಣ್ಣಿನಂಗಡಿ ದ್ವಂಸ ಮಾಡಿದಕ್ಕೆ ಪ್ರಕರಣ ನಬೀಸಾಬ್ ಧಾರವಾಡ(Dharwad) ಗ್ರಾಮೀಣ ಪೋಲಿಸ್ ಠಾಣೆಗೆ ಭೇಟಿ ನೋಡಿ ಅನಾಧೇಯ ಗುಂಪೊಂದು ಧ್ವಂಸ ಮಾಡಿದೆ ಎಂದು ದೂರು ದಾಖಲು ಮಾಡಿದ್ದರು. ದೂರನ್ನ ಆಧರಿಸಿ ಸದ್ಯ ನಾಲ್ಕು ಜನ ಶ್ರಿರಾಮ ಸೇನಾ ಕಾರ್ಯಕರ್ತರನ್ನ ಬಂಧಿಸಿದ್ದಾರೆ(Arrest). ಬಂಧಿತರಾದ ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ, ಕುಮಾರ ಕಟ್ಟಿಮನಿ ಬಂಧಿತರು ವ್ಯಕ್ತಿಗಳು.ಇನ್ನು ನಬಿಸಾಬ್, ಹಾನಿಗೀಡಾದ ಕಲ್ಲಂಗಡಿ ಹಣ್ಣಿನಂಗಡಿ ಮಾಲೀಕ ಕಣ್ಣೀರು ಹಾಕಿದ್ದಾರೆ. ರಾಜ್ಯದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಧಾರವಾಡ ಗ್ರಾಮೀಣ ಪೊಲೀಸರು(Police) ಸದ್ಯ ಬಂಧಿತರ ಮೇಲೆ ಕಲಂ. 143, 147 298 427 504 506 ಸಹ ಕಲಂ 149 ಅನ್ವಯ ದೂರು ದಾಖಲಾಗಿದೆ.
ಧಾರವಾಡದಲ್ಲಿ ಮುಸ್ಲಿಂ ಅಂಗಡಿ ತೆರವು: ನನ್ನನ್ನು ಕೊಂದು ಬಿಡಿ ಎಂದು ಅಂಗಡಿ ಮಾಲಿಕ ಕಣ್ಣೀರು
ಇನ್ನು ಅಂಗಡಿ ಮಾಲೀಕರಾದ, ನಬೀಸಾಬ ಗೌಸುಸಾಬ ಕಿಲ್ಲೇದಾರ, ಸಲೀಂ ಮೆಹಬೂಬಸಾಬ ಮುಜಾವರ್, ಶರೀಪ್ ಜಾಫರ್ ಖಾನ ತಡಕೋಡ ಎಂಬ ಮೂವರು ಮುಸ್ಲಿಂ ವ್ಯಾಪಾರಿಗಳ(Muslim Traders) ಅಂಗಡಿಗಳ ಮೇಲೆ ದಾಳಿ(Attack) ಮಾಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಇನ್ನು ಪ್ರಕರಣವನ್ನ ದಾಖಲಿಸಿಕೊಂಡು ನಾಲ್ವರನ್ನ ಬಂಧಿಸಿ ತನಿಖೆಯನ್ನ ನಡೆಸುತ್ತಿದ್ದಾರೆ.
ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಕಲ್ಲಂಗಡಿ ನಾಶ: ನಬೀಸಾಬ್ ಕುಟುಂಬಕ್ಕೆ ಎಚ್‌ಡಿಕೆ ನೆರವು
ಧಾರವಾಡ: ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿ ಮಾಲೀಕ ನಬಿಸಾಬ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ. ತಮ್ಮ ಆಪ್ತರ ಮೂಲಕ ಹತ್ತು ಸಾವಿರ ರೂ. ನೆರವು ನೀಡಿದ್ದಾರೆ.
Dharwad: ಶ್ರೀರಾಮಸೇನೆ ಕಾರ್ಯಕರ್ತರಿಂದ ದೇವಸ್ಥಾನದ ಬಳಿಯಿದ್ದ ಮುಸ್ಲಿಂ ಅಂಗಡಿಗಳು ಧ್ವಂಸ
ಧಾರವಾಡ ತಾಲೂಕಿನ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಹಿಂದೂಯೇತರ ಅಂಗಡಿ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ದಾಳಿ ನಡೆಸಿದ್ದರು. ನಿನ್ನೆ (ಶನಿವಾರ) ನಡೆದ ಗಲಾಟೆಯಲ್ಲಿ ವ್ಯಾಪಾರಿ ನಬೀಸಾಬ್ ಅವರ 5 ರಿಂದ 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ಹಾನಿಯಾಗಿತ್ತು. ಇದರಿಂದ ವ್ಯಾಪಾರಿ ನಬೀಸಾಬ್ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಕ್ರಿಯಿಸಿದ್ದು, ತಿನ್ನುವ ಅನ್ನವನ್ನು ಕಿತ್ತುಕೊಂಡು ಏನ್ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ 15 ದಿನಗಳ ಹಿಂದೆ ಶ್ರೀರಾಮಸೇನಾ ಕಾರ್ಯಕರ್ತರು ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿತ್ತು. ಆದರೆ, ಈ ಕುರಿತು ದೇವಸ್ಥಾನ ಸಮಿತಿ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಿನ್ನೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿಕೇರಿಗೆ ಬಂದು ಹಿಂದೂಯೇತರ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.