ಜಮೀನಿಗೆ ಹೋಗಿದ್ದ ವೇಳೆ ರೈತನ ಮೇಲೆ ನಾಲ್ಕು ಕರಡಿಗಳು ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆದಿದೆ.
ದಾವಣಗೆರೆ (ಜೂ.16): ಜಮೀನಿಗೆ ಹೋಗಿದ್ದ ವೇಳೆ ರೈತನ ಮೇಲೆ ನಾಲ್ಕು ಕರಡಿಗಳು ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆದಿದೆ.
ಹನುಮಂತಪ್ಪ, ಕರಡಿ ದಾಳಿಗೆ ಗಾಯಗೊಂಡಿರುವ ರೈತ. ಬೈರನಾಯಕನಹಳ್ಳಿ ನಿವಾಸಿಯಾಗಿರುವ ರೈತ. ಎಂದಿನಂತೆ ಇಂದು ಜಮೀನಿಗೆ ತೆರಳಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕರಡಿಗಳು. ನಾಲ್ಕು ಕರಡಿಗಳ ಮನಬಂದಂತೆ ಮೈಯೆಲ್ಲ ಪರಚಿ ಕಚ್ಚಿವೆ. ಕರಡಿಗಳ ದಾಳಿಯಿಂದ ಗಾಯಗೊಂಡು ರಕ್ತ ಮಡುವಿನಲ್ಲಿ ಬಿದ್ದಿದ್ದ ರೈತನನ್ನು ನೋಡಿ ಪಕ್ಕದ ಜಮೀನು ರೈತರು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಡೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ದಾವಣಗೆರೆ: ಬ್ಯಾಂಕ್ ಸಾಲಕ್ಕೆ ಹೆದರಿ ರೈತ ನೇಣುಬಿಗಿದು ಆತ್ಮಹತ್ಯೆ!
ಪದೇಪದೆ ರೈತರ ಮೇಲೆ ಕರಡಿಗಳು ದಾಳಿ ನಡೆಸುತ್ತಿದ್ದು ಸುತ್ತಮುತ್ತಲಿನ ಗ್ರಾಮದ ರೈತರು ಜಮೀನಿಗೆ ಹೋಗಲು ಹೆದರುವಂತಾಗಿದೆ. ಇಲ್ಲ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.