* ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ಮಹಿಳೆ ಕೊಲೆ
* ಮಹಿಳೆಯ ಶವವನ್ನು ಬೈಕಲ್ಲಿ ಒಯ್ಯುತ್ತಿದ್ದ ಆರೋಪಿಗಳು
* ಬೈಕ್ ಸ್ಕಿಡ್ ಆಗಿ ಬಿದ್ದ ವೇಳೆ ಅಪಘಾತವೆಂದು ಹೈಡ್ರಾಮ
ರಾಮನಗರ(ಮೇ.12): ಮಹಿಳೆಯ ಶವ(Deadbody) ಸಾಗಿಸುತ್ತಿದ್ದ ಬೈಕೊಂದು ಅಪಘಾತಕ್ಕೀಡಾಗಿದ್ದು(Accident), ಈ ವೇಳೆ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಗಳು ಸಿಕ್ಕಿಬಿದ್ದಿರುವ ಘಟನೆ ರಾಮನಗರದಲ್ಲಿ(Ramanagara) ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿ ಶ್ವೇತಾ ಕೊಲೆಯಾದವರು(Murder). ಆರೋಪಿಗಳಾದ(Accused) ದುರ್ಗಿ, ರಘು, ವಿನೋದ್, ನಾಗರಾಜುನನ್ನು ಪೊಲೀಸರು(Police) ಬಂಧಿಸಿದ್ದು(Arrest), ಮತ್ತೊಬ್ಬ ಆರೋಪಿ ಅಭಿ ಎಂಬಾತನಿಗಾಗಿ ಹುಡುಕಾಟ ಮುಂದುವರೆದಿದೆ.
Love Tragedy : ಹೆಂಡತಿಯ ಬಾಯ್‌ಫ್ರೆಂಡ್ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್
ಏನಿದು ಪ್ರಕರಣ?
ಮೃತ ಶ್ವೇತಾ ಮತ್ತು ದುರ್ಗಿ ಇಬ್ಬರು ಸ್ನೇಹಿತೆಯರು. ಕಳೆದ ಆರು ತಿಂಗಳಿನಿಂದ ಶ್ವೇತಾ, ದುರ್ಗಿಯ ಬೆಂಗಳೂರಿನ ಮನೆಯಲ್ಲಿ ಉಳಿದುಕೊಂಡಿದ್ದಳು. ಕ್ಷಲ್ಲಕ ಕಾರಣಕ್ಕೆ ಜಗಳವಾಗಿ ದುರ್ಗಿ, ಶ್ವೇತಾಗೆ ಬಡಿಗೆ ತೆಗೆದುಕೊಂಡು ಹೊಡೆದಿದ್ದರಿಂದ ಆಕೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ(Death).
ಈ ವಿಷಯವನ್ನು ದುರ್ಗಿ ಪತಿ ರಘುಗೆ ತಿಳಿಸಿದ್ದಾಳೆ. ರಘು ತನ್ನ ಗೆಳೆಯರಾದ ಅಭಿ, ವಿನೋದ್ ಮತ್ತು ನಾಗರಾಜು ಎಂಬವರೊಂದಿಗೆ ಸೇರಿ ಶ್ವೇತಾಳ ಮೃತದೇಹವನ್ನು ಶ್ರೀರಂಗಪಟ್ಟಣ ಬಳಿಯ ನದಿ ಅಥವಾ ಸೇತುವೆ ಕೆಳಗೆ ಎಸೆಯುವ ಉಪಾಯ ಮಾಡಿದ್ದಾನೆ.
ಯೋಜನೆಯಂತೆ ನಾಗರಾಜು ಮತ್ತು ವಿನೋದ್ ಮೃತ ದೇಹವನ್ನು ಮಧ್ಯದಲ್ಲಿ ಇರಿಸಿಕೊಂಡು ಬೆಂಗಳೂರಿನಿಂದ ಹೊರಟಿದ್ದು ರಾಮನಗರ ಬಳಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಬಳಿಕ ಪೊಲೀಸರ ಬಳಿ ಅಪಘಾತದಿಂದ ಮಹಿಳೆ ಮೃತಪಟ್ಟಿರುವುದಾಗಿ ನಾಟಕವಾಡಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಶ್ವೇತಾ ಮೃತಪಟ್ಟು 5-6 ಗಂಟೆ ಕಳೆದಿರುವುದಾಗಿ ಬಹಿರಂಗ ಪಡಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.