15ರ ಬಾಲಕಿಯ ಥಳಿಸಿ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಪರಾರಿ: ಯೋಗಿ ನಾಡಿನಲ್ಲಿ ಶಾಕಿಂಗ್ ಘಟನೆ!

By Contributor Asianet  |  First Published May 11, 2022, 2:32 PM IST

* ಉತ್ತರ ಪ್ರದೇಶದಲ್ಲಿ ಮತ್ತೆ ಸದ್ದು ಮಾಡುತ್ಪತಿವೆ ಅಪರಾಧ ಪ್ರಕರಣಗಳು

* 15 ವರ್ಷದ ಬಾಲಕಿಯ ಥಳಿಸಿ, ಸಾಮೂಹಿಕ ಅತ್ಯಾಚಾರ

* ಪಾಪಕೃತ್ಯವೆಸಗಿ ತಲೆಮರೆಸಿಕೊಂಡ ದುರುಳರು


ಮುಜಾಫರ್‌ಪುರ(ಮೇ.11): ಯೋಗಿ ನಾಡಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಅಪರಾಧ ಕೃತ್ಯ ನಡೆದಿದೆ. ಹೌದು ಸೋಮವಾರ ಮುಜಾಫರ್‌ಪುರದಲ್ಲಿ 15 ವರ್ಷದ ಬಾಲಕಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಂಗಳವಾರ ಬೆಳಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ 

Tap to resize

Latest Videos

ಸೋಮವಾರ ಸಂಜೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ನಾಲ್ವರು ಅನಾಂಇಕರು ಆಕೆಯ ಮನೆಗೆ ನುಗ್ಗಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ನಾಲ್ವರೂ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ.

ಸಂತ್ರಸ್ತೆಯ ಪೋಷಕರ ಪ್ರಕಾರ, ಪ್ರಮುಖ ಆರೋಪಿಯೊಬ್ಬ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಪ್ರಮುಖ ಆರೋಪಿ ಬಾಲಕಿಗೆ ಫೋನ್ ಮಾಡಿ ಮಾತನಾಡುವಂತೆ ಒತ್ತಾಯಿಸಿದ್ದ. ತನ್ನ ಆಜ್ಞೆಯನ್ನು ಪಾಲಿಸದಿದ್ದರೆ ಇಡೀ ಕುಟುಂಬವನ್ನು ಕೊಲ್ಲುವುದಾಗಿಯೂ ಆತ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದ್ಯ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಆದರೆ ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ದೂರು ನೀಡಲು ಬಂದ ಅಪ್ರಾಪ್ತೆ ಮೇಲೆ ಠಾಣೆಯಲ್ಲಿ ಮತ್ತೆ ರೇಪ್

 

ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲು ಬಂದಾಗ ಪೊಲೀಸ್ ಠಾಣೆಯ ಮೇಲುಸ್ತುವಾರಿಯೇ ಆಕೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದ ಭಯಾನಕ ಹೇಯ ಘಟನೆ ಉತ್ತರಪ್ರದೇಶದ (Uttar Pradesh) ಪಾಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಲಿತ್‌ಪುರ (Lalitpur) ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು,(gangrape victim)  ಈ ಬಗ್ಗೆ ದೂರು ನೀಡಲು ಆಗಮಿಸಿದ ಸಂತ್ರಸ್ತೆಯ ಮೇಲೆ ಪೊಲೀಸ್ ಠಾಣೆಯ ಉಸ್ತುವಾರಿಯೇ ಅತ್ಯಾಚಾರವೆಸಗಿದ್ದಾನೆ. ಪ್ರಸ್ತುತ ಉಳಿದೆಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಠಾಣೆಯ ಪ್ರಭಾರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಈ ಸಂಬಂಧ ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಲಲಿತ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್ (Nikhil Pathak) , ಪಾಲಿ (Pali) ನಿವಾಸಿಗಳಾದ ನಾಲ್ವರು ಹುಡುಗರು 13 ವರ್ಷದ ಬಾಲಕಿಗೆ ಆಮಿಷ ಒಡ್ಡಿ ಏಪ್ರಿಲ್ 22 ರಂದು ಭೋಪಾಲ್‌ಗೆ ಕರೆದೊಯ್ದು ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

9ನೇ ತರಗತಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್‌ ಮಾಡಿ ಸುಟ್ಟುಹಾಕಿದ ರಾಜಕಾರಣಿಯ ಮಗ

ನಂತರ ನಾಲ್ವರು ಹುಡುಗರು ಬಾಲಕಿಯನ್ನು ಲಲಿತ್‌ಪುರದ ಪಾಲಿಗೆ ಕರೆತಂದು, ಪಾಲಿ ಪೊಲೀಸ್ ಠಾಣೆಯ ಪ್ರಭಾರಿ ತಿಲಕಧಾರಿ ಸರೋಜ್ (Tilakdhari Saroj) ಅವರಿಗೆ ಒಪ್ಪಿಸಿ ಪರಾರಿಯಾಗಿದ್ದಾರೆ. ನಂತರ ಪೊಲೀಸ್ ಠಾಣೆ ಪ್ರಭಾರಿ ಬಾಲಕಿಯನ್ನು ಆಕೆಯ ಚಿಕ್ಕಮ್ಮನೊಂದಿಗೆ ಚೈಲ್ಡ್ ಲೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.

ಎರಡು ದಿನಗಳ ನಂತರ, ಪೊಲೀಸ್ ಠಾಣೆಯ ಪ್ರಭಾರಿಯು ಘಟನೆಯ ಕುರಿತು ಆಕೆಯ ಹೇಳಿಕೆಯನ್ನು ತೆಗೆದುಕೊಳ್ಳುವ ನೆಪದಲ್ಲಿ ಹುಡುಗಿಯನ್ನು ಠಾಣೆಗೆ ಕರೆಸಿದ್ದಾನೆ. ಬಳಿಕ ಬಾಗಿಲು ಹಾಕಿ ಠಾಣೆಯಲ್ಲೇ ಅತ್ಯಾಚಾರವೆಸಗಿದ್ದಾನೆ. ನಂತರ ಮತ್ತೆ ಬಾಲಕಿಯನ್ನು  ಚೈಲ್ಡ್ ಲೈನ್ ಕೇಂದ್ರಕ್ಕೆ ಕಳುಹಿಸಿದ್ದಾನೆ. ಅಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಆಕೆ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಚೈಲ್ಡ್ ಲೈನ್ ತಂಡ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ದಾಖಲಿಸಿದೆ.

click me!