ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, 20 ವರ್ಷದ ಮಹಿಳೆಯ ಮೇಲೆ ಕೇಸ್!

Published : May 11, 2022, 03:58 PM ISTUpdated : May 11, 2022, 04:01 PM IST
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, 20 ವರ್ಷದ ಮಹಿಳೆಯ ಮೇಲೆ ಕೇಸ್!

ಸಾರಾಂಶ

17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪದ ಮೇಲೆ 20 ವರ್ಷದ ಮಹಿಳೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಮಹಿಳೆ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಮತ್ತು ಆತನ ತಂದೆ, ನಾಲ್ವರು ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.  

ಮುಂಬೈ (ಮೇ.11): ಧಾರಾವಿಯ (dharavi) 20 ವರ್ಷದ ಮಹಿಳೆಯೊಬ್ಬರು (Women) ಬಿಹಾರದ (Bihar) 17 ವರ್ಷದ ಬಾಲಕನ ಮೇಲೆ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯ (POCSO Act) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದರ ನಡುವೆ, ಮಹಿಳೆ ತನ್ನ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಮೇಲೆ ಅಪ್ರಾಪ್ತ ಮತ್ತು ಆತನ ತಂದೆ, ನಾಲ್ವರು ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಸ್ತುತ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿರುವ ಧಾರಾವಿ ಪೊಲೀಸರು, ಅಪ್ರಾಪ್ತರ ಕುಟುಂಬದವರು ನೀಡಿದ ದೂರಿನ ಪ್ರಕಾರ, ಮಹಿಳೆ ಮತ್ತು ಅಪ್ರಾಪ್ತ ವಯಸ್ಕರು ಸೆಪ್ಟೆಂಬರ್ 2020 ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡು, ಚಾಟ್ ಮಾಡುತ್ತಿದ್ದರು. ಮಹಿಳೆಯು ಹುಡುಗನಿಗೆ ಹಲವಾರು ಬಾರಿ ಪ್ರಪೋಸ್ ಮಾಡಿದ್ದಾಳೆ, ಆದರೆ ಹುಡುಗ ಅವಳನ್ನು ತಿರಸ್ಕರಿಸಿ ಅವಳನ್ನು ಬ್ಲಾಕ್ ಕೂಡ ಮಾಡಿದ್ದ. ನಂತರ ಬೇರೆ ಬೇರೆ ಹೆಸರುಗಳನ್ನು ಬಳಸಿ ಬೇರೆ ಪ್ರೊಫೈಲ್ ಗಳನ್ನು ತೆರೆದು ಆತನ ಸಂಪರ್ಕಕ್ಕೆ ಬಂದಿದ್ದಳು.

ಹುಡುಗ ಜನವರಿ 19 ರಂದು ಮುಂಬೈನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕೆಲಸ ಹುಡುಕುವ ಉದ್ದೇಶಕ್ಕಾಗಿ ಬಂದಿದ್ದ. ಈ ವಿಷಯ ತಿಳಿದ ನಂತರ ಮಹಿಳೆ ತನ್ನ ಹೆತ್ತವರನ್ನು ಭೇಟಿಯಾಗಲು ಧಾರವಿಯಲ್ಲಿರುವ ತನ್ನ ಮನೆಗೆ ಅವನನ್ನು ಆಹ್ವಾನಿಸಿದಳು. ಆದರೆ ಹುಡುಗ ಬಂದಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ. ಈ ವೇಳೆ ಆತನಿಗೆ ಸೆಕ್ಸ್ ಗಾಗಿ ಬಲವಂತ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

'ತನಗೆ ಏನು ಬೇಕಾದರೂ ನೀನು ಮಾಡಬಹುದು ಎಂದು ಹುಡುಗಿ ಈ ವೇಳೆ ಹುಡುಗನಿಗೆ ಹೇಳಿದ್ದಾಳೆ. ಇದಕ್ಕೆ ವಿರೋಧ ಮಾಡಿದರೆ, ಆತನ ವಿರುದ್ಧ ಹಾಗೂ ಆತನ ಕುಟುಂಬದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾಳೆ. ವಾಶಿಯ ಲಾಡ್ಜ್ ಸೇರಿದಂತೆ ಹಲವು ಸ್ಥಳಗಳಿಗೆ ಬಾಲಕನನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಅಪ್ರಾಪ್ತ ಹುಡುಗನು ತನ್ನ ಹೆತ್ತವರಿಗೆ ಈ ವಿಷಯವನ್ನು ತಿಳಿಸಿದ ಬಳಿಕ, ಅವರು ಮುಂಬೈಗೆ ಬಂದು ಮಹಿಳೆಯಿಂದ ದೂರವಿರುವಂತೆ ತಿಳಿಸಿದ್ದರು' ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದೆಡೆ ಮಹಿಳೆ ತನ್ನ ಮನೆಯನ್ನು ತೊರೆದು ಸ್ನೇಹಿತನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಕಳೆದ ತಿಂಗಳು, ಅವರು ನವಿ ಮುಂಬೈ ಪೊಲೀಸರನ್ನು ಸಂಪರ್ಕಿಸಿ,  ಹುಡುಗ, ಅವನ ತಂದೆ, ಅವನ ನಾಲ್ವರು ಚಿಕ್ಕಪ್ಪ ಮತ್ತು ಸೋದರಸಂಬಂಧಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ. ನವಿ ಮುಂಬೈ ಪೊಲೀಸರು ಪ್ರಕರಣವನ್ನು ಧಾರಾವಿ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಶಿಕ್ಷಣ ಸಚಿವರ ಸೊಸೆ ನೇಣಿಗೆ ಶರಣು, 1 ದಿನದ ಹಿಂದಷ್ಟೇ ತವರು ಮನೆಯಿಂದ ಮರಳಿದ್ದರು!

ಅಪ್ರಾಪ್ತರ ಕುಟುಂಬ ನಿರೀಕ್ಷಣಾ ಜಾಮೀನು ಪಡೆದುಕೊಂಡಿದೆ. ನಂತರ ಅವರು ಮಹಿಳೆ ತಮ್ಮ ಮಗನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಧಾರಾವಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ ಮತ್ತು ಅದರಂತೆ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

15ರ ಬಾಲಕಿಯ ಥಳಿಸಿ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಪರಾರಿ: ಯೋಗಿ ನಾಡಿನಲ್ಲಿ ಶಾಕಿಂಗ್ ಘಟನೆ!

ಇನ್ನೊಂದೆಡೆ, ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲು ಬಂದಾಗ ಪೊಲೀಸ್ ಠಾಣೆಯ ಮೇಲುಸ್ತುವಾರಿಯೇ ಆಕೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದ ಭಯಾನಕ ಹೇಯ ಘಟನೆ ಉತ್ತರಪ್ರದೇಶದ (Uttar Pradesh) ಪಾಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಲಿತ್‌ಪುರ (Lalitpur) ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು,(gangrape victim)  ಈ ಬಗ್ಗೆ ದೂರು ನೀಡಲು ಆಗಮಿಸಿದ ಸಂತ್ರಸ್ತೆಯ ಮೇಲೆ ಪೊಲೀಸ್ ಠಾಣೆಯ ಉಸ್ತುವಾರಿಯೇ ಅತ್ಯಾಚಾರವೆಸಗಿದ್ದಾನೆ. ಪ್ರಸ್ತುತ ಉಳಿದೆಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಠಾಣೆಯ ಪ್ರಭಾರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!