ನೈಟ್‌ಕ್ಲಬ್‌ ಬಾತ್‌ರೂಮ್‌ನಲ್ಲಿ ಯುವತಿಯ ಅತ್ಯಾಚಾರ, ಬಾರ್ಸಿಲೋನಾ ಫುಟ್‌ಬಾಲ್‌ ಸ್ಟಾರ್‌ಗೆ ಜೈಲು ಶಿಕ್ಷೆ!

Published : Feb 22, 2024, 05:55 PM IST
ನೈಟ್‌ಕ್ಲಬ್‌ ಬಾತ್‌ರೂಮ್‌ನಲ್ಲಿ ಯುವತಿಯ ಅತ್ಯಾಚಾರ, ಬಾರ್ಸಿಲೋನಾ ಫುಟ್‌ಬಾಲ್‌ ಸ್ಟಾರ್‌ಗೆ ಜೈಲು ಶಿಕ್ಷೆ!

ಸಾರಾಂಶ

ಬಾರ್ಸಿಲೋನಾದ ನೈಟ್‌ಕ್ಲಬ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಾರ್ಸಿಲೋನಾ ಫುಟ್‌ಬಾಲ್‌ ಕ್ಲಬ್‌ ಹಾಗೂ ಬ್ರೆಜಿಲ್‌ ತಂಡದ ಸ್ಟಾರ್‌ ಫುಟ್‌ಬಾಲ್‌ ಆಟಗಾರನಿಗೆ 4.5 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ನವದೆಹಲಿ (ಫೆ.22): ಸ್ಪೇನ್‌ ಪ್ರಧಾನ ಕೋರ್ಟ್‌ ಗುರುವಾರ ಬ್ರೆಜಿಲ್‌ ಹಾಗೂ ಬಾರ್ಸಿಲೋನಾದ ಮಾಜಿ ಫುಟ್‌ಬಾಲ್‌ ಆಟಗಾರ ಡ್ಯಾನಿ ಆಲ್ವೇಸ್‌ರನ್ನು ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಿದೆ. 2022ರಲ್ಲಿ ಬಾರ್ಸಿಲೋನಾದ ನೈಟ್‌ಕ್ಲಬ್‌ನಲ್ಲಿ ಡಾನಿ ಆಲ್ವೇಸ್‌ ಅತ್ಯಾಚಾರ ಮಾಡಿದ್ದ. ಹಲವು ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ್ದ ಡಾನಿ ಆಲ್ವೇಸ್‌ಗೆ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅದರೊಂದಿಗೆ ಸಂತ್ರಸ್ಥ ಯುವತಿಗೆ 1.35 ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆಯೂ ಕೋರ್ಟ್‌ ಆದೇಶ ನೀಡಿದೆ. "ಅತ್ಯಾಚಾರ ಸಾಬೀತಾಗಿದೆ ಎಂದು ಪರಿಗಣಿಸಲು ಬಲಿಪಶು ಒಪ್ಪಿಗೆ ನೀಡಿಲ್ಲ ಎಂದು ಸಾಬೀತಾಗಿದೆ ಮತ್ತು ಫಿರ್ಯಾದಿಯ ಸಾಕ್ಷ್ಯದ ಜೊತೆಗೆ ಪುರಾವೆಗಳಿವೆ ಎಂದು ಶಿಕ್ಷೆಯು ಪರಿಗಣಿಸುತ್ತದೆ" ಎಂದು ನ್ಯಾಯಾಲಯವು ಹೇಳಿಕೆಯಲ್ಲಿ ತಿಳಿಸಿದೆ. 40 ವರ್ಷ ವಯಸ್ಸಿನ ಅಲ್ವೆಸ್, ಈ ತಿಂಗಳು ಮೂರು ದಿನಗಳ ಕಾಲ ನಡೆದ ವಿಚಾರಣೆಯ ಸಮಯದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಡಾನಿ ಆಲ್ವೇಸ್‌ ನೀಡಿರುವ ತೀರ್ಪಿನ ಶಿಕ್ಷೆಯನ್ನು ಮೇಲ್ಮನವಿ ಸಲ್ಲಿಸಬಹುದಾಗಿದೆ.

40 ವರ್ಷದ ಮಾಜಿ ಬಾರ್ಸಿಲೋನಾ ಡಿಫೆಂಡರ್ ಅನ್ನು ಕಳೆದ ವರ್ಷ ಜನವರಿಯಲ್ಲಿ ಬಂಧಿಸಲಾಯಿತು ಮತ್ತು ಅಂದಿನಿಂದ ರಿಮಾಂಡ್‌ನಲ್ಲಿ ಇರಿಸಲಾಗಿತ್ತು. ಪ್ರಾಸಿಕ್ಯೂಟರ್‌ಗಳು ಮೂರು ಬಾರಿ ಚಾಂಪಿಯನ್ಸ್ ಲೀಗ್ ವಿಜೇತ ಆಟಗಾನಿಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ನಂತರದ  10 ವರ್ಷಗಳ ಪ್ರೋಬೇಷನ್‌ಗೆ ಮನವಿ ಮಾಡಿದ್ದರು.

ತಮ್ಮ ವರ್ಣರಂಜಿತ ಕ್ರೀಡಾ ಜೀವನದಲ್ಲಿ ಬಾರ್ಸಿಲೋನಾ ಫುಟ್‌ಬಾಲ್‌ ಕ್ಲಬ್‌ ಹಾಗೂ ಪ್ಯಾರೀಸ್‌ ಸೇಂಟ್‌ ಜರ್ಮೈನ್‌ ತಂಡದ ಪರವಾಗಿ ಅಡಿದ್ದ ಡಾನಿ ಆಲ್ವೇಸ್‌, 2022 ಡಿಸೆಂಬರ್ 31ರ ಮುಂಜಾನೆ ಸುಟ್ಟನ್ ನೈಟ್‌ಕ್ಲಬ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಆರೋಪದ ಮೇಲೆ ಈ ತಿಂಗಳ ಆರಂಭದಲ್ಲಿ ವಿಚಾರಣೆಗೆ ಒಳಪಟ್ಟಿದ್ದರು. ಈ ವೇಳೆ ಕೋರ್ಟ್‌ಗೆ ಹೇಳಿದ್ದ ಸಂತ್ರಸ್ಥೆ, ಆ ದಿನದ ರಾತ್ರಿ ನೈಟ್‌ಕ್ಲಬ್‌ನ ಬಾತ್‌ರೂಮ್‌ನಲ್ಲಿ ನಾನು ಪರಿಪರಿಯಾಗಿ ಬೇಡಿಕೊಂಡರೂ ನನ್ನನ್ನು ಬಿಡದೇ ಅತ್ಯಾಚಾರ ಮಾಡಿದ್ದ ಎಂದು ಹೇಳಿದ್ದಾರೆ.

IPL 2024 Schedule Announce: ಐಪಿಎಲ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟ..!

ಬಾತ್‌ರೂಮ್‌ನಿಂದ ಹೊರಬಂದ ನಂತರ ಸಂತ್ರಸ್ಥೆ ಹೇಗೆ "ಅನಿಯಂತ್ರಿತವಾಗಿ ಅಳುತ್ತಿದ್ದಳು" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಆಕೆಯೊಂದಿಗಿದ್ದ ಸ್ನೇಹಿತೆ ಕೋರ್ಟ್‌ನಲ್ಲಿಯೇ ಕಣ್ಣೀರಿಟ್ಟಿದ್ದರು. ಅಲ್ವೆಸ್ ಆಕೆಯ ಮೇಲೆ ದಾರುಣವಾಗಿ ಅತ್ಯಾಚಾರ ಮಾಡಿದ್ದ ಎಂದಿದ್ದರು, ಮಹಿಳೆಯನ್ನು ಹಾಜರುಪಡಿಸಿದ ಪೊಲೀಸ್ ಅಧಿಕಾರಿಗಳು ನೈಟ್‌ಕ್ಲಬ್‌ಗೆ ಬಂದಾಗ ಸಂತ್ರಸ್ತೆಯ ಆಘಾತದಲ್ಲಿದ್ದಳಿ. ಅದಲ್ಲದೆ, ನನ್ನ ಮೇಲೆ ರೇಪ್‌ ಮಾಡಿದ ವ್ಯಕ್ತಿ ಯಾರು ಅನ್ನೋದನ್ನು ತಿಳಿಸಿದರೆ ಯಾರೂ ನಂಬುತ್ತಿರಲಿಲ್ಲ ಎಂದು ಪೊಲೀಸರಿಗೆ ಹೇಳಿದ್ದಳು.

ಸಾರಾ ತೆಂಡೂಲ್ಕರ್ ಶುಭಮನ್ ಗಿಲ್ ಬ್ರೇಕಪ್ ಆಯ್ತಾ? ಡೇಟಿಂಗ್ ಆ್ಯಪ್‌ನಲ್ಲಿ ಕ್ರಿಕೆಟಿಗನ ಪ್ರೊಫೈಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!