
ಕಲಬುರಗಿ (ಫೆ.22): ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆಯ ಮೇಲೆ ಬಾಲಕ ಚಾಕು ಇರಿದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಬಾಲಕ ಹುಡುಗಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ. ಬಸ್ ನಲ್ಲಿ ತೆರಳ್ತಿದ್ದ ಅಪ್ರಾಪ್ತೆಗೆ ಬಸ್‌ನಿಂದ ಇಳಿಸಿಕೊಂಡು ಇಬ್ಬರು ಅಪ್ರಾಪ್ತ ಬಾಲಕರು ಚಾಕು ಇರಿದಿದ್ದಾರೆ. ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ಬೈಕ್ ನಲ್ಲಿ ಬಂದು ಬಸ್ ನಿಲ್ಲಿಸಿ ಬಸ್ಸಿಂದ ಆಕೆಯನ್ನು ಇಳಿಸಿ ಬಾಲಕರು ಅಪ್ರಾಪ್ತೆಯ ಕತ್ತು ಕೊಯ್ದಿದ್ದಾರೆ.
Hassan ಕಾಲೇಜು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ, ವಾರ್ಡನ್ ಕಾರಣವೆಂದು ಪೋಷಕರ ದಾಂಧಲೆ
ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಪ್ರೀತಿ ಮಾಡಲು ನಿರಾಕರಿಸಿದ್ದೇ ಕಾರಣ ಎಂದು ತಿಳಿದುಬಂದಿದೆ.
ಶಾಲೆಗೆ ಹೋಗುತ್ತಿದ್ದ 10 ನೇ ತರಗತಿ ಬಾಲಕಿಯ ಕತ್ತು ಕೊಯ್ದು ಬಳಿಕ ಏನು ನಡೆದೇ ಇಲ್ಲ ಎನ್ನುವಂತೆ ಶಾಲೆಗೆ ಹೋಗಿ 9 ನೇ ತರಗತಿಯ ಬಾಲಕ ಕ್ಲಾಸ್ ನಲ್ಲಿ ಕುಳಿತಿದ್ದಾನೆ.
ಬೆಟ್ಟಿಂಗ್ ಜತೆ ಹೆಣ್ಣಿನ ಚಟ, ಹಗಲು ದರೋಡೆಗಿಳಿದ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ಉದ್ಯೋಗಸ್ಥರೇ ಟಾರ್ಗೆಟ್!
ತನಗಿಂತ ಒಂದು ಕ್ಲಾಸ್ ಮುಂದಿರುವ ಹುಡುಗಿಯನ್ನು ಬಾಲಕ ಲವ್ ಮಾಡಿದ್ದು. ಪ್ರೀತಿ ನಿವೇದನೆ ಮಾಡಿಕೊಂಡಾಗ ಲವ್ ಗಿವ್ ಬೇಡ ಎಂದಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಾಲಕ ಬಾಲಕಿಯನ್ನು ಬಸ್ ನಿಂದ ಕೆಳಗಿಳಿಸಿ ಕತ್ತು ಕೊಯ್ದಿದ್ದಾನೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲಾಸ್ ರೂಮ್ ನಿಂದ ಪೊಲೀಸರು ಬಾಲಕನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ