ಮಾಗಡಿ: 13 ವರ್ಷದ ಬಾಲಕಿ ಮೇಲೆ 56 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ!

By Ravi JanekalFirst Published Feb 22, 2024, 3:40 PM IST
Highlights

ವರ್ಷದ ಬಾಲಕಿ ಮೇಲೆ 56 ವರ್ಷದ ವೃದ್ದನಿಂದ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಟ್ಟೇಗೌಡ(56) ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ. ಮಾಗಡಿ ಮೂಲದ ಆರೋಪಿ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ. 

ಬೆಂಗಳೂರು (ಫೆ.22) 13 ವರ್ಷದ ಬಾಲಕಿ ಮೇಲೆ 56 ವರ್ಷದ ವೃದ್ದನಿಂದ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಟ್ಟೇಗೌಡ(56) ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ. ಮಾಗಡಿ ಮೂಲದ ಆರೋಪಿ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ. 

ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದರ ಹಿನ್ನೆಲೆ ಬಾಲಕಿ ಆರೋಗ್ಯದಲ್ಲಿ ಏರುಪೇರು ಆಗಿದೆ. ಈ ಹಿನ್ನೆಲೆ ಅನುಮಾನಗೊಂಡ ಮಗುವಿನ ಪೋಷಕರು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಖಚಿತ ಪಡಿಸಿದ ಮಾಗಡಿ ಸರ್ಕಾರಿ ಅಸ್ಪತ್ರೆ ವೈದ್ಯರು.

ಸದ್ಯ ಆರೋಪಿ ವಿರುದ್ಧ ಮಾಗಡಿ ಪೊಲೀಸ್ ಠಾಣೆಗೆ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿರುವ ಪೋಷಕರು. ಆರೋಪಿ ಪತ್ತೆಗೆ ಮುಂದಾದ ಪೊಲೀಸರು.

ಬೆಳಗಾವಿ: ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು

click me!