ಪ್ರೀತಿ ಉಳಿಸಿಕೊಳ್ಳಲು ಮರ್ಡರ್‌.. ಬಾಯ್‌ಫ್ರೆಂಡ್‌ ಜೊತೆ ಸೇರಿ ಯುವತಿಯ ಕೊಲೆ ಮಾಡಿದ್ಲು ಸುಂದರಿ!

By Santosh Naik  |  First Published Dec 1, 2022, 5:14 PM IST

ಇದೊಂದು ಚಾಣಾಕ್ಷ ಕೊಲೆ ಕೇಸ್‌. ಪೊಲೀಸರು ಈ ಕೊಲೆ ಕೇಸ್‌ನ ತನಿಖೆಗೆ ಇಳಿದಾಗ ಇದರ ಸೂತ್ರಧಾರಿಯಾಗಿದ್ದು, ಪಾಯಲ್‌ ಭಟ್ಟಿ ಎನ್ನುವ ಚಂದನೆಯ ಹುಡುಗಿ. ಪ್ರೀತಿಸಿದ ಹುಡುಗನನ್ನು ಮದುವೆಯಾಗುವ ಸಲುವಾಗಿ ಪಾಪದ ಹುಡುಗಿಯೊಬ್ಬಳನ್ನು ಸಾಯಿಸಿ ನಾಟಕವಾಡಿದ್ದಳು.
 


ನೊಯ್ಡಾ (ಡಿ.1): ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ದಾದ್ರಿ ಪ್ರದೇಶದಲ್ಲಿ ಅಚ್ಚರಿಯ ಕೊಲೆ ಕೇಸ್‌ ಬೆಳಕಿಗೆ ಬಂದಿದೆ. ಬದ್‌ಪುರ ಗ್ರಾಮದ ಪಾಯಲ್‌ ಭಟ್ಟಿ ಎನ್ನುವ ಹುಡುಗಿ ತಾನೇ ಸತ್ತಿದ್ದೇನೆ ಎಂದು ಸಾಬೀತುಮಾಡುವ ಸಾಕ್ಷ್ಯ ರೂಪಿಸಿ ಪ್ರೇಮಿಯನ್ನು ಮದುವೆಯಾಗುವ ಪ್ರಯತ್ನ ಮಾಡಿದ್ದಲ್ಲದೆ ಅದಕ್ಕಾಗಿ ಒಂದು ಕೊಲೆಯನ್ನೂ ಮಾಡಿದ ಘಟನೆ ನಡೆದಿದೆ. ಆರೋಪಿ ಯುವತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಸೇರಿ, ತಮ್ಮದೇ ಅಸುಪಾಸು ವಯಸ್ಸಿನ ಹೇಮಾ ಚೌಧರಿ ಎನ್ನುವ ಹುಡುಗಿಯನ್ನು ಅಪಹರಣ ಮಾಡಿ ಕೊಲೆ ಮಾಡಿದ್ದರು. ಸಿಕ್ಕಿರುವ ಮಾಹಿತಿಗಳ ಪ್ರಕಾರ, ಆರೋಪಿಯಾಗಿರುವ ಪಾಯಲ್‌ ಭಟ್ಟಿ, ಹೇಮಾ ಚೌಧರಿಯನ್ನು ಸಾಯಿಸಿದ್ದು ಮಾತ್ರಲ್ಲದೆ ಆಕೆಯ ದೇಹಕ್ಕೆ ತನ್ನ ಬಟ್ಟೆಗಳನ್ನು ಹಾಕಿದ್ದಳು. ಪೊಲೀಸರು ತಾನು ಸತ್ತಿದ್ದಾಗಿ ಪರಿಗಣಿಸುವ ಮೂಲಕ ಈ ಭೀಕರ ಕೊಲೆಯಿಂದ ಪಾರಾಗಬಹುದು ಎನ್ನುವ ಆಲೋಚನೆಯಲ್ಲಿದ್ದಳು. ಆದರೆ. ಪೊಲೀಸರು ಈ ಕೊಲೆಯ ಸೂತ್ರ ಹಿಡಿದು ಹೊರಟಾಗ ಪಾಯಲ್‌ ಭಟ್ಟಿ ಮಾಡಿರುವ ಚಾಣಾಕ್ಷತನ ಬಯಲಿಗೆ ಬಂದಿದೆ.

ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಪಾಲಕರು: ಪಾಯಲ್‌ ಭಟ್ಟಿ ಅವರ ಪಾಲಕರು ಸಾಲದ ಬಾಧೆ ತಾಳಲಾಗದೆ ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ತಂದೆ ಹಾಗೂ ತಾಯಿ ಯಾರಿಂದ ಸಾಲ ಪಡೆದುಕೊಂಡಿದ್ದರೂ, ಅವರು ಪೀಡಿಸಲು ಆರಂಭ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಡುವೆ ತಾನು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮದುವೆಯಾಗಲು ಕುಟುಂಬ ಬಿಡೋದಿಲ್ಲ ಎನ್ನುವ ಆತಂಕ ಪಾಯಲ್‌ಳನ್ನು ಕಾಡಿತ್ತು. ಅದಕ್ಕಾಗಿ ಕುಟುಂಬದವರಿಗೆ ತಾನು ಸತ್ತಿದ್ದೇನೆ ಎಂದು ನಂಬಿಸಲು ಪಾಪದ ಹುಡುಗಿಯನ್ನು ಸಾಯಿಸಿರುವ ಘಟನೆ ಇದಾಗಿದೆ.

ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಹೇಮಾ ಚೌಧರಿ: ಗ್ರೇಟರ್‌ ನೋಯ್ಡಾ ಪಶ್ಚಿಮದಲ್ಲಿರುವ ಗೌರ್‌ ಸಿಟಿ ಮಾಲ್‌ನ ವ್ಯಾನ್‌ ಹಸನ್‌ ಶೋ ರೂಮ್‌ನಲ್ಲಿ ಹೇಮಾ (ಹೇಮಲತಾ ಚೌಧರಿ) ಕೆಲಸ ಮಾಡುತ್ತಿದ್ದರು. ಹೇಮಾಳನ್ನು ಕೊಂದ ನಂತರ ಆಕೆಯ ಮುಖವನ್ನು ಗುರುತಿಸಲಾಗದಂತೆ ಬಿಸಿ ಸಾಸಿವೆ ಎಣ್ಣೆಯಿಂದ ಸುಟ್ಟಿದ್ದರು. ಇದರ ಪಕ್ಕದಲ್ಲಿ ಸಿಕ್ಕ ಸೂಸೈಡ್‌ ನೋಟ್‌ನಲ್ಲಿ, ನನ್ನ ಮುಖವನ್ನು ಸುಡಲಾಗಿದೆ. ಈ ಮುಖವನ್ನು ಇಟ್ಟುಕೊಂಡು ನನಗೆ ಬದುಕಲು ಸಾಧ್ಯವಿಲ್ಲ ಎಂದು ಬರೆಯಲಾಗಿತ್ತು.  ಈ ಶವಕ್ಕೆ ತನ್ನ ಬಟ್ಟೆಗಳು ಹಾಗೂ ಆಭರಣಗಳನ್ನು ಪಾಯಲ್‌ ಹಾಕಿದ್ದಳು. ಅಚ್ಚರಿಯೆಂದರೆ, ಪಾಯಲ್‌ ಭಟ್ಟಿಯ ಕುಟುಂಬದವರೂ ಕೂಡ ಹೇಮಾಳ ದೇಹವನ್ನು ಪಾಯಲ್‌ ದೇಹ ಎಂದುಕೊಂಡು ನವೆಂಬರ್‌ 21 ರಂದು ಅಂತ್ಯಸಂಸ್ಕಾರ ಮಾಡಿದ್ದರು. ಇದರ ನಡುವೆ ನವೆಂಬರ್‌ 12 ರ ರಾತ್ರಿ ಹೇಮಾ ಚೌಧರಿ ನಾಪತ್ತೆಯಾಗಿದ್ದಳು ಎನ್ನುವ ಮಾಹಿತಿ ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿತ್ತು.

Tap to resize

Latest Videos

Shraddha Walker Murder: ಅಫ್ತಾಬ್‌ ಮಂಪರು ಪರೀಕ್ಷೆ ಮುಕ್ತಾಯ, 2 ಗಂಟೆ ಪ್ರಶ್ನೆಗಳ ಸುರಿಮಳೆ!

ನಾಪತ್ತೆ ದೂರು ದಾಖಲಿಸಿದ ಹೇಮಲತಾ ಸೋದರ:  
ತನ್ನ ತಂಗಿ ಕಾಣೆಯಾಗಿರುವ ಬಗ್ಗೆ ಹೇಮಲತಾಳ ಸಹೋದರ ಪೊಲೀಸರಿಗೆ ದೂರು ದಾಖಲು ಮಾಡಿದ್ದ. ಹೇಮಲತಾಳ ನಂಬರ್‌ ಹಿಡಿದು ಜಾಲಾಡಿದಾಗ ಇದು ಪಾಯಲ್‌ ಗೆಳೆಯ ಅಜಯ್‌ನ ದಾಖಲೆ ತೋರಿಸಿದೆ. ಅಜಯ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಹಿರಂಗವಾಗಿದೆ. ಇನ್ನು ಪಾಯಲ್‌ಳ ಪ್ರಿಯಕರ ಅಜಯ್‌ಗೆ ಅದಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರರೆ. ಹೇಮಾಳನ್ನು ಸಾಯಿಸಿದ್ದ ಪಾಯಲ್‌ ನವೆಂಬರ್‌ 19 ರಂದು ಅಜಯ್‌ ಠಾಕೂರ್‌ನನ್ನು ಅರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದಳು. ಈ ಅಜಯ್‌ ಠಾಕುರ್‌ ಬುಲಂದ್‌ಶೇರ್‌ನ ಸಿಕಂದರಬಾದ್‌ ಮೂಲದವ.

Shraddha Walker Murder case: ಶ್ರದ್ಧಾ ಕೊಲೆಗೆ ಗಲ್ಲಿಗೇರಿಸಿದರೂ ಪಶ್ಚಾತಾಪವಿಲ್ಲ: ಅಫ್ತಾಬ್‌

ಪಾಯಲ್‌ಳ ಅಜ್ಜ ಬ್ರಹ್ಮ್‌ ಸಿಂಗ್‌ ಈ ಕುರಿತಾಗಿ ಮಾತನಾಡಿದ್ದು, ಪಾಯಲ್‌ ಹಾಗೂ ಅಜಯ್‌ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ಇದು ಬಳಿಕ ಪ್ರೀತಿಗೆ ತಿರುಗಿತ್ತು. ಇಬ್ಬರು ಮಕ್ಕಳ ತಂದೆಯಾಗಿರುವ ವ್ಯಕ್ತಿಯನ್ನು ಮದುವೆಯಾಗಲು ಕುಟುಂಬ ಒಪ್ಪೋದಿಲ್ಲ ಎಂದುಕೊಂಡಿದ್ದ ಪಾಯಲ್‌, ಈ ಎಲ್ಲಾ ಕೆಲಸ ಮಾಡಿದ್ದಾಳೆ. ತಾನು ಸತ್ತಿದ್ದೇನೆ ಎಂದು ಜನರು ತಿಳಿದುಕೊಂಡರೆ ಅಜಯ್‌ ಜೊತೆ ಜೀವನ ಮಾಡಬಹುದು ಎನ್ನುವ ಯೋಚನೆ ಅವಳದಾಗಿತ್ತು.

click me!