Shraddha Walker Murder: ಅಫ್ತಾಬ್‌ ಮಂಪರು ಪರೀಕ್ಷೆ ಮುಕ್ತಾಯ, 2 ಗಂಟೆ ಪ್ರಶ್ನೆಗಳ ಸುರಿಮಳೆ!

By Santosh NaikFirst Published Dec 1, 2022, 3:33 PM IST
Highlights

ನವದೆಹಲಿಯ ಕುಖ್ಯಾತ 35 ಪೀಸ್‌ ಮರ್ಡರ್‌ ಕೇಸ್‌ನಲ್ಲಿ ಅಫ್ತಾಬ್‌ ಪೂನಾವಾಲಾನ ಮಂಪರು ಪರೀಕ್ಷೆ ಗುರುವಾರ ನಡೆದಿದೆ. ಅಂದಾಜು 2 ಗಂಟೆಗಳ ಕಾಲ ಅವನಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಶ್ರದ್ಧಾಳ ಮೊಬೈಲ್‌ ಹಾಗೂ ಬಟ್ಟೆಗಳನ್ನು ಏನು ಮಾಡಲಾಗಿದೆ ಎನ್ನುವ ಪ್ರಶ್ನೆಯನ್ನು ಮುಖ್ಯವಾಗಿ ಕೇಳಿದ್ದಾರೆ.

ನವದೆಹಲಿ (ಡಿ. 1):  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಮಂಪರು ಪರೀಕ್ಷೆ ಗುರುವಾರ ಯಶಸ್ವುಯಾಗಿ ನಡೆದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ಈ ಕುರಿತಾಗಿ ಮಾತನಾಡಿದ್ದು, ಪಾಲಿಗ್ರಾಫ್ ಪರೀಕ್ಷೆಯ ನಂತರ ಅಫ್ತಾಬ್ ನಾರ್ಕೋ ಪರೀಕ್ಷೆಯಲ್ಲೂ ಶ್ರದ್ಧಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾಧ್ಯಮಗಳ ವರದಿ ಪ್ರಕಾರ ಶ್ರದ್ಧಾ ಅವರ ಮೊಬೈಲ್ ಮತ್ತು ಬಟ್ಟೆ ಎಲ್ಲೆಲ್ಲಿ ಎಸೆದಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬೆಳಿಗ್ಗೆ 8.40 ಕ್ಕೆ ರೋಹಿಣಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಮೊದಲಿಗೆ ಅಫ್ತಾಬ್‌ ಪೂನಾವಾಲಾನ ಸಾಮಾನ್ಯ ಪರೀಕ್ಷೆಗೆ ತಪಾಸಣೆ ಮಾಡಲಾಗಿತ್ತು.ಅಧಿಕಾರಿಗಳ ಪ್ರಕಾರ, ಪರೀಕ್ಷೆಯು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿತ್ತು. ಸುಮಾರು ಎರಡು ಗಂಟೆಗಳ ನಂತರ ಪರೀಕ್ಷೆ ಮುಕ್ತಾಯವಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಪರೀಕ್ಷೆಯಲ್ಲಿ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ ಅಫ್ತಾಬ್ ಇಂಗ್ಲಿಷ್‌ನಲ್ಲಿ ಉತ್ತರಿಸಿದ್ದಾರೆ. ನಾರ್ಕೋ ಪರೀಕ್ಷೆಯಲ್ಲಿ ಮನಶಾಸ್ತ್ರಜ್ಞರು, ಫೊರೆನ್ಸಿಕ್ ಲ್ಯಾಬ್ ರೋಹಿಣಿಯ ಫೋಟೋ ತಜ್ಞರು, ಅಂಬೇಡ್ಕರ್ ಆಸ್ಪತ್ರೆಯ ವೈದ್ಯರು ಹಾಜರಿದ್ದರು ಎಂದು ಸಂಜೀವ್ ಗುಪ್ತಾ ತಿಳಿಸಿದ್ದಾರೆ.

ಬ್ರೇನ್‌ ಮ್ಯಾಪಿಂಗ್‌ ನಡೆಸುವ ಸಾಧ್ಯತೆ: ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡ ನಾರ್ಕೋ ಪರೀಕ್ಷೆಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿತ್ತು. ಪರೀಕ್ಷೆಯ ವೇಳೆ ಎಫ್‌ಎಸ್‌ಎಲ್ ತಂಡದೊಂದಿಗೆ ವೈದ್ಯರೂ ಹಾಜರಿದ್ದರು. ವರದಿಗಳ ಪ್ರಕಾರ, ನಾರ್ಕೋ ಪರೀಕ್ಷೆಯು ಅನಿರ್ದಿಷ್ಟವಾಗಿ ಉಳಿದಿದ್ದರೆ, ಪೊಲೀಸರು ಅಫ್ತಾಬ್‌ನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಮಾಡಬಹುದು ಎನ್ನಲಾಗಿದೆ.

ಒಳ್ಳಯ ನಡತೆಯೇ ಅನುಮಾನಕ್ಕೆ ಕಾರಣ: ಅಫ್ತಾಬ್ ತುಂಬಾ ಬುದ್ಧಿವಂತನಾಗಿದ್ದು, ಯಾವಾಗ ಬೇಕಾದರೂ ಪ್ರಕರಣಕ್ಕೆ ಹೊಸ ತಿರುವು ನೀಡುವಂತ ಹೇಳಿಕೆ ನೀಡುತ್ತಾನೆ ಎಂದು ತನಿಖೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಇದುವರೆಗೂ ಪೊಲೀಸರ ಮಾತಿಗೆ ನಿರಾಕರಿಸದೆ ತನಿಖೆಗೆ ಸಹಕರಿಸುತ್ತಿದ್ದಾರೆ. ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆಗೆ ಸಹ ಒಂಚೂರು ಹೆದರಿಕೆಯಿಲ್ಲದೆ ಒಪ್ಪಿಕೊಂಡರು. ಆತನ ಒಳ್ಳೆಯ ನಡತೆಯ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶ್ವಾಸದದಿಂದ ವಿಚಾರಣೆ ಎದುರಿಸಿದ ಅಫ್ತಾಬ್‌: ವಿಚಾರಣೆ ವೇಳೆ ಅಫ್ತಾಬ್ ತುಂಬಾ ವಿಶ್ವಾಸ ಹೊಂದಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡಿ ನಿರಾಳನಾಗುತ್ತಿದ್ದ. ಆದ್ದರಿಂದ ಅವನು ಬಹಳ ಯೋಚನೆ ಮಾಡಿ ಉತ್ತರ ನೀಡುತ್ತಿದ್ದಾನೆ ಎನ್ನುವುದು ತಿಳಿದುಬರುತ್ತದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಕರೆದಾಗ, ದೆಹಲಿಯ ಫ್ಲಾಟ್‌ನಲ್ಲಿ ಶ್ರದ್ಧಾಳ ದೇಹದ ಕೆಲವು ಭಾಗಗಳು ಇದ್ದವು ಎಂದು ಪೊಲೀಸರು ಶಂಕಿಸಿದ್ದಾರೆ.

Shraddha Walker Murder case: ಶ್ರದ್ಧಾ ಕೊಲೆಗೆ ಗಲ್ಲಿಗೇರಿಸಿದರೂ ಪಶ್ಚಾತಾಪವಿಲ್ಲ: ಅಫ್ತಾಬ್‌

ಅಫ್ತಾಬ್‌ ಹೊಸ ಗೆಳತಿಯ ಹೇಳಿಕೆ: ದೆಹಲಿ ಪೊಲೀಸ್‌ ಇತ್ತೀಚೆಗೆ ಅಫ್ತಾಬ್‌ ಪೂನಾವಾಲಾನ ಹೊಸ ಗೆಳತಿಯ ವಿಚಾರಣೆ ನಡೆಸಿದ್ದಾರೆ. ಶ್ರದ್ಧಾಳ ಕೊಲೆ ಹಾಗೂ ಆಕೆಯನ್ನು ಆತ 35 ಪೀಸ್‌ ಮಾಡಿದ ವಿಚಾರದಲ್ಲಿ ತಮ್ಮದೇನೂ ಪಾತ್ರವಿಲ್ಲ. ನಾನು ಅಫ್ತಾಬ್‌ನ ಮನೆಯಲ್ಲಿ ಆತನನ್ನು ಭೇಟಿ ಮಾಡಲು ಹೋಗುತ್ತಿದ್ದದ್ದು ನಿಜ. ಆದರೆ, ಅದೇ ಮನೆಯಲ್ಲಿ ಶ್ರದ್ಧಾಳ ದೇಹದ ಭಾಗಗಳನ್ನು ಇರಿಸಿದ್ದ ಎನ್ನುವ ನಿಟ್ಟಿನಲ್ಲಿ ಯಾವ ಮಾಹಿತಿ ಕೂಡ ನನಗೆ ಇದ್ದಿರಲಿಲ್ಲ ಎಂದಿದ್ದಾರೆ.

Shraddha Walker Murder: ಜೊಮಾಟೋ, ಸೋಶಿಯಲ್‌ ಮೀಡಿಯಾ ಮಾಹಿತಿ ಕೇಳಿದ ಪೊಲೀಸ್‌!

ಇನ್ನು ಅಫ್ತಾಬ್‌ ಪೂನಾವಾಲಾನ ಪಾಲಿಗ್ರಾಫಿ ಟೆಸ್ಟ್‌ ಕೆಲ ದಿನಗಳ ಹಿಂದೆ ಮುಕ್ತಾಯವಾಗಿದ್ದು, ಇದರ ಅಂತಿಮ ವರದಿಯನ್ನು ಕೂಡ ಸಿದ್ಧ ಮಾಡಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಚಾರಣೆಯ ವೇಳೆ ತಾನೇ ಶ್ರದ್ಧಾಳನ್ನು ಕೊಂದಿರುವುದಾಗಿ ಅಫ್ತಾಬ್‌ ಒಪ್ಪಿಕೊಂಡಿದ್ದು, ಆಕೆಯ ಸಾವಿಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.

click me!