Vijayapura ಬೆತ್ತಲೆ ವಿಡಿಯೋ ಮಾಡಿ ಹಾಸನ 'ಪ್ರಿಯತಮೆ'ಯಿಂದ ದೋಖಾ: ₹ 40 ಲಕ್ಷ ಕಳೆದುಕೊಂಡ 'ಹೀರೋ'

By Sathish Kumar KH  |  First Published Dec 1, 2022, 2:44 PM IST

ಫೇಸ್‌ಬುಕ್‌ ಮೂಲಕ 40 ಲಕ್ಷ ರೂ. ವಂಚಿಸಿದ ಮಹಿಳೆಯನ್ನು ಬಂಧನ
ವಿಜಯಪುರ ಜಿಲ್ಲೆಯ ಸಿಂಧಗಿ ಮೂಲದ ಯುವಕನಿಗೆ ಹಾಸನದ ಮಹಿಳೆಯಿಂದ ವಂಚನೆ
ಯುವಕನ ಬೆತ್ತಲೆ ಫೋಟೋ ಇಟ್ಟುಕೊಂಡು ಹಣ ವಸೂಲಿ
ಮಹಿಳೆಯ ವಂಚನೆಯ ಕಾರ್ಯಕ್ಕೆ ಸ್ವತಃ ಆಕೆಯ ಪತಿಯೇ ಕೈಜೋಡಿಸಿದ್ದನು


ವರದಿ- - ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಡಿ.1): ಜಿಲ್ಲೆಯ ಯುವಕನೊಬ್ಬನಿಗೆ ಹಾಸನದ ಫೇಸ್‌ಬುಕ್‌ ಗೆಳತಿಯಿಂದ ಉಂಟಾಗಿದ್ದ 40 ಲಕ್ಷ ರೂ. ಪಂಗನಾಮ ಪ್ರಕರಣದ ಆರೋಪಿ ಮಹಿಳೆಯನ್ನು  ವಿಜಯಪುರ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಫ್ರೆಂಡ್‌ ಆಗಿ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಹಾಸನದ ಮಂಜುಳಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಆದರೆ, ಈ ವಂಚನೆಯ ಹಿಂದೆ ಗಂಡನ ಕೈವಾಡವಿದೆ ಎಂಬ ಸತ್ಯ ಹೊರಬಂದಿದ್ದು, ಇಡೀ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

Latest Videos

undefined

ವಿಜಯಪುರ ಮೂಲಕ ಯುವಕನೊಬ್ಬ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಈತನಿಗೆ ಫೇಸ್‌ಬುಕ್‌ ಮೂಲಕ ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌ ಕಳುಹಿಸಿ ಪರಿಚಯ ಮಾಡಿಕೊಂಡ ಹಾಸನ ಮೂಲದ ಮಂಜುಳಾ ಪ್ರೀತಿಯ ನಾಟಕವಾಡಿದ್ದಳು.  ತಾನು ಐಎಎಸ್‌ ಓದುತ್ತಿರುವುದಾಗಿ ತಿಳಿಸಿ ಲಕ್ಷ ಲಕ್ಷ ಹಣವನ್ನು ಯುವಕನಿಂದ ಪಡೆದಿದ್ದಳು. ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳುಹಿಸಿದ್ದನು. ಹೀಗೆ ಹಣಕ್ಕಾಗಿ ಪೀಡಿಸುವುದು ಹೆಚ್ಚಾದಾಗ ನಾನು ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ

ಎರಡು ವಾರದಲ್ಲಿ ಪ್ರಕರಣ ಬೇಧಿಸಿದ ಪೊಲೀಸರು: ಕಳೆದ ನ.15ರಂದು ವಂಚನೆಗೊಳಾದ ಯುವಕ ದೂರು ದಾಖಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು. ಸಾಮಾಜಿಕ ಜಾಲತಾಣದ ಜಾಡು ಹಾಗೂ ಪೋಲನ್‌ ನಂಬರ್ ಟ್ರೇಸ್‌ ಮಾಡಿಕೊಂಡು ಹೋದ ಪೊಲೀಸರು  ಎರಡು ವಾರದಲ್ಲಿ ಹಾಸನದ ಬೆಡಗಿ ಮಂಜುಳಾ ಅವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ  ಆಗಿದ್ದಾರೆ. ಫೇಸ್‌ಬುಕ್‌ ಮೂಲಕ ವಂಚನೆ ಮಾಡಿದ ಸ್ವಾಮಿ ಮತ್ತು ಮಂಜುಳಾ ದಂಪತಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ದಾಸರಹಳ್ಳಿ ಗ್ರಾಮದವರು. ಗಂಡ, ಹೆಂಡತಿ‌ ಸೇರಿಯೆ ವಿಜಯಪುರ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ವಂಚನೆ ಮಾಡಿದ್ದಾರೆ. ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವಂಚಕಿ ವಿಡಿಯೋ ಮಾಡಿಕೊಂಡಿದ್ದಳು. ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ಹಂತ ಹಂತವಾಗಿ ಲಕ್ಷಾಂತರ ರೂ. ಹಣವನ್ನು ಕಿತ್ತುಕೊಂಡಿದ್ದಾರೆ.

ಪತ್ನಿಯ ಕಾರ್ಯಕ್ಕೆ ಗಂಡನಿಂದ ಸಾಥ್: ಫೇಸ್‌ಬುಕ್‌ ಮೂಲಕ ಗೆಳತಿಯಾಗಿ ಯುವಕನಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಅದೇನೆಂದರೆ ಇಡೀ ವಂಚನೆಯ ಹಿಂದೆ ಫೇಸ್‌ಬುಕ್‌ ಗೆಳತಿಯ ಗಂಡನ ಕೈವಾಡವೂ ಇದೆ ಎಂಬುದು ತಿಳಿದುಬಂದಿದೆ. ವಂಚಕಿಯ ವಿಚಾರಣೆ ವೇಳೆ ತನ್ನ ಗಂಡನೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಹಿಳೆ ಬಾಯಿ ಬಿಟ್ಟಿದ್ದಾರೆ. ಆಕೆಯ ಪತಿ ಸ್ವಾಮಿ ಹಾಗೂ ತಾನು ಸೇರಿಯೆ ಯುವಕನ ಬೆತ್ತಲೆ ಪೋಟೋ ಇಟ್ಟುಕೊಂಡು ವಂಚನೆ ಮಾಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ತಾನು ಐಎಎಸ್ ಮಾಡುತ್ತಿರುವುದಾಗಿ ಹೇಳಿ ಪರಮೇಶ್ವರ ಗೆಳೆತನ ಮಾಡಿದ್ದ ಹಾಸನದ ಮಂಜುಳಾ, ಅವರನ್ನು ವಂಚಿಸಿ 40 ಲಕ್ಷ ಹಣವನ್ನು ತನ್ನ ಪೆಡರಲ್ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಳು ಎಂದು ಹೇಳಿದ್ದಾರೆ.

ಬೆಂಗಳೂರು: ಕಸ್ಟಮ್ಸ್‌ ಅಧಿಕಾರಿ ಸೋಗಿನಲ್ಲಿ ವಂಚನೆ: ದಂಪತಿ ಬಲೆಗೆ

ವಂಚನೆ ಹಣದಲ್ಲಿ ಐಷಾರಾಮಿ ಜೀವನ: ವಿಜಯಪುರ ಯುವಕನಿಂದ ವಂಚನೆ ಮೂಲಕ ವಸೂಲಿ ಮಾಡಿದ 40 ಲಕ್ಷ ರೂ. ಹಣದಲ್ಲಿ ಆರೋಪಿ ಮಂಜುಳಾ 100 ಗ್ರಾಂ ಬಂಗಾರ, ಹುಂಡೈ ಕಾರು, ಬೈಕ್ ಖರೀದಿ ಮಾಡಿದ್ದಳು. ಜೊತೆಗೆ, ಆ ಯುವಕ ಕಳುಹಿಸುತ್ತಿದ್ದ ಹಣದಲ್ಲಿಯೇ ಅವರ ಊರಲ್ಲಿ ಹೊಸದಾದ ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದಳು. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ಯಲು ಪ್ರಯತ್ನಿಸಿದ ಮಂಜುಳಾ ಹಾಗೂ ಪತಿಯ ಬಂಧನದ ಬಳಿಕ ಅಸಲಿ ಪ್ರಕರಣ ಬಯಲಿಗೆ ಬಂದಿದೆ.

click me!