Mysuru: ಹಿಂದೂ ಯುವಕ ಬರ್ತಡೇ ಆಚರಿಸಿದ್ದನ್ನು ವಿರೋಧಿಸಿ 5 ಜನರಿಂದ ಚಾಕು ಇರಿತ!

By Gowthami K  |  First Published Jun 5, 2023, 10:53 AM IST

ಹುಟ್ಟುಹಬ್ಬ ಆಚರಣೆ ವೇಳೆ ಗಲಾಟೆ ನಡೆದು ಅನ್ಯ ಕೋಮಿನ ಯುವಕರಿಂದ ಯುವಕನಿಗೆ ಚಾಕು ಇರಿದಿರುವ ಘಟನೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ.


ಮೈಸೂರು (ಜೂ.5): ಹುಟ್ಟುಹಬ್ಬ ಆಚರಣೆ ವೇಳೆ ಗಲಾಟೆ ನಡೆದು ಅನ್ಯ ಕೋಮಿನ ಯುವಕರಿಂದ ಯುವಕನಿಗೆ ಚಾಕು ಇರಿದಿರುವ ಘಟನೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ. ಪ್ರಸಾದ್ 22 ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ. ಇನ್ನು ಮುಂದೆ ನಿಮ್ಮ ಮನೆಗಳಲ್ಲಿ ಹುಟ್ಟುಹಬ್ಬ ಆಚರಿಸಿ. ಇದು ನಮ್ಮ ಸರ್ಕಾರ, ನೀವು ಹಿಂದೂಗಳು ಏನು ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅನಂತರ ಗಲಾಟೆ ಮಾಡಿ ಚಾಕು ಇರಿದ ಆರೋಪ ಇದೆ. ಈ ಸಂಬಂಧ 5 ಜನರ ವಿರುದ್ದ ಎಫ್‌ಐ‌ರ್ ದಾಖಲು ಮಾಡಲಾಗಿದೆ. ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಸಾದ್‌ಗೆ ನಂಜನಗೂಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಮಾಹಿತಿಗೆ ಮೈಸೂರಿನ‌ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.

ಟಿಪ್ಪರ್‌ ಲಾರಿಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ನಾಗಮಂಗಲ: ಚಲಿಸುತ್ತಿದ್ದ ಟಿಪ್ಪರ್‌ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ರ ತಾಲೂಕಿನ ತಿರುಮಲಾಪುರ ಗ್ರಾಮದ ಶ್ರೀ ಶನಿದೇವರ ದೇವಸ್ಥಾನದ ಮುಂಭಾಗ ಭಾನುವಾರ ಮುಂಜಾನೆ 4.30ರ ಸುಮಾರಿನಲ್ಲಿ ಸಂಭವಿಸದೆ.

Tap to resize

Latest Videos

Gadag: ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ದಾರುಣ ಸಾವು!

ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲೂಕಿನ ಕಂಪನಹಳ್ಳಿ ಕೊಟ್ಟೂರಯ್ಯಕ ಪುತ್ರ ಕೆ.ಶರತ್‌(22), ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಹುಚ್ಚೇಗೌಡರ ಪುತ್ರ ಹೇಮಂತ್‌ಕುಮಾರ್‌ (22), ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಟಿ.ಮಂಜಪ್ಪರ ಪುತ್ರ ಎನ್‌.ಎಂ.ಧೀರಜ್‌ಕುಮಾರ್‌ (22) ಮತ್ತು ತುರುವೇಕೆರೆ ತಾಲೂಕಿನ ಚಂಡೂರಪುರ ಗ್ರಾಮದ ಪ್ರಕಾಶ್‌ ಪುತ್ರ ಪಿ.ಯೋಗೇಶ್‌ಗೌಡ(23) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿಗಳು.

ಅಪಘಾತದ ಬಗ್ಗೆ ಹೆದ್ದಾರಿ ಗಸ್ತು ಪೊಲೀಸ್‌ ಸಿಬ್ಬಂದಿ ಬೆಳ್ಳೂರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣ ಸ್ಥಳಕ್ಕಾಗಮಿಸಿದ ಬೆಳ್ಳೂರು ಪಿಎಸ್‌ಐ ಲೋಕೇಶ್‌ ನೇತೃತ್ವದ ಪೊಲೀಸ್‌ ಸಿಬ್ಬಂದಿ ಸ್ಥಳೀಯ ಜನರ ನೆರವಿನೊಂದಿಗೆ ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದ ಕಾರಿನಿಂದ ಮೃತದೇಹಗಳನ್ನು ಹೊರತೆಗೆದು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

Bengaluru: ಪತಿ ಕಣ್ಣೆದುರೇ ಪತ್ನಿಯನ್ನು ಬಲಿ ತೆಗೆದುಕೊಂಡ ಕೆಎಸ್‌ಆರ್‌ಟಿಸಿ ಬಸ್!

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ಎನ್‌.ಯತೀಶ್‌, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್‌, ಸಿಪಿಐ ನಿರಂಜನ್‌ ಪರಿಶೀಲನೆ ನಡೆಸಿದರು. ಮೃತ ಪಟ್ಟಿರುವ ನಾಲ್ವರು ಸ್ನೇಹಿತರಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತುಮಕೂರು ಮೂಲದ ಶರತ್‌ ಎಂಬ ಯುವಕನ ಹುಟ್ಟುಹಬ್ಬದ ನಿಮಿತ್ತ ತಡರಾತ್ರಿವರೆಗೆ ಪಾರ್ಟಿ ಮುಗಿಸಿ ಚುಂಚನಗಿರಿಯತ್ತ ಪ್ರಯಾಣ ಬೆಳೆಸಿದ್ದರು.

ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ಬಳಿಕ ನಾಲ್ಕೂ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

click me!