ತಡರಾತ್ರಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಮಾಡಿದ ಕುಡುಕರು!

By Ravi Janekal  |  First Published Jun 5, 2023, 9:39 AM IST

ತಡರಾತ್ರಿ ಮದ್ಯ ಮಾರಾಟ ವಿಚಾರವಾಗಿ ನಡೆದ ಗಲಾಟೆ ವೇಳೆ ಬಾರ್‌ ಕ್ಯಾಶಿಯರ್‌ಗೆ ಚೂರಿ ಇರಿದು ಕೊಂದಿರುವ ಘಟನೆ ತಾಲೂಕಿನ ಆಯನೂರು ಪಟ್ಟಣದಲ್ಲಿ ನಡೆದಿದೆ.


ಶಿವಮೊಗ್ಗ (ಜೂ.5) ತಡರಾತ್ರಿ ಮದ್ಯ ಮಾರಾಟ ವಿಚಾರವಾಗಿ ನಡೆದ ಗಲಾಟೆ ವೇಳೆ ಬಾರ್‌ ಕ್ಯಾಶಿಯರ್‌ಗೆ ಚೂರಿ ಇರಿದು ಕೊಂದಿರುವ ಘಟನೆ ತಾಲೂಕಿನ ಆಯನೂರು ಪಟ್ಟಣದಲ್ಲಿ ನಡೆದಿದೆ.

ಸಚಿನ್ (28) ಕೊಲೆಯಾದ ಬಾರ್ ಕ್ಯಾಶಿಯರ್.  ಆಯನೂರು ಪಟ್ಟಣದ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಶಿಯರ್‌ ಆಗಿದ್ದ ಸಚಿನ್. ಆಯನೂರು ಕೋಟೆ ತಾಂಡದ ನಿರಂಜನ, ಮತ್ತು ಅಶೋಕ್ ನಾಯ್ಕ ಎಂಬುವವರು ಬಾರ್‌ಗೆ ಹೋಗಿದ್ದಾರೆ. ತಡರಾತ್ರಿ ಮದ್ಯ ಸರಬರಾಜು ಮಾಡುವಂತೆ ಹೇಳಿದ್ದಾರೆ. ಆದರೆ ಮಧ್ಯರಾತ್ರಿ ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಕುಪಿತಗೊಂಡು ಅಲ್ಲಿನ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಾರೆ.  ಕ್ಯಾಶಿಯರ್ ಸಚಿನ್ ಮೇಲೆ ಮೂವರೂ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ದುಷ್ಕೃತ್ಯ  ಎಸಗಿರುವ ಆರೋಪಿಗಳು.

Tap to resize

Latest Videos

ಆಸ್ತಿ ವಿಚಾರಕ್ಕೆ ತಮ್ಮನಿಗೆ ಚಾಕು ಇರಿದ ಪಾಪಿ ಅಣ್ಣ: ಸ್ಥಳದಲ್ಲಿಯೇ ನರಳಿ ಪ್ರಾಣಬಿಟ್ಟ

ಚಾಕು ಇರಿತಕ್ಕೆ ಗಂಭೀರ ಗಾಯಗೊಂಡ ಸಚಿನ್  ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಸಚಿನ್
ಘಟನೆ ಸಂಬಂಧಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 ಅಕ್ರಮ ಸಂಬಂಧ ಶಂಕೆ: ರಾಡ್‌ನಿಂದ ಚುಚ್ಚಿ ಯುವಕನ ಕೊಲೆ

ಮಂಗಳೂರು:  ಪತ್ನಿ ಜತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಾನೆ ಎಂಬ ಸಂಶಯದಲ್ಲಿ ವ್ಯಕ್ತಿಯೊಬ್ಬ ಯುವಕನ ಎದೆಗೆ ರಾಡ್‌ನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪಶ್ಚಿಮ ಬಂಗಾಳ, ಪ್ರಸ್ತುತ ಕುಳೂರು ನಿವಾಸಿ ಬಿಕಾಸ್‌ ಗುನಿಯಾ (22) ಮೃತಪಟ್ಟಯುವಕ. ಪಶ್ಚಿಮ ಬಂಗಾಳ ನಿವಾಸಿ ವಾಸುದೇವ ಗುನಿಯಾ (34) ಕೊಲೆ ಮಾಡಿದ ಆರೋಪಿ.

ಕೊಲೆಯಾದ ಬಿಕಾಸ್‌ ಗುನಿಯಾ ಮತ್ತು ಆರೋಪಿ ವಾಸುದೇವ ಗುನಿಯಾ ಪಶ್ಚಿಮ ಬಂಗಾಳದವರಾಗಿದ್ದು, ಕುಳೂರಿನಲ್ಲಿ ಗಾರೆ ಕೆಲಸಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದರು.

 

ಗಂಡನಿಗೆ ಮೋಸ ಮಾಡಿ ಮಾವನ ಜೊತೆ ಸಂಬಂಧ, ಅವಳಿ ಮಕ್ಕಳ ನಿರೀಕ್ಷೆಯಲ್ಲಿ ಜೋಡಿ!

ವಾಸುದೇವ ಗುನಿಯಾನಿಗೆ ಬಿಕಾಸ್‌ ಗುನಿಯಾ ಊರಿನ ಯುವತಿಯ ಜತೆ ಹಲವು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಪಶ್ಚಿಮ ಬಂಗಾಳದಲ್ಲೇ ವಾಸ್ತವ್ಯವಿದ್ದಳು. ಆಕೆಯ ಜತೆ ಬಿಕಾಸ್‌ ಗುನಿಯಾನಿಗೆ ಅಕ್ರಮ ಸಂಬಂಧವಿದೆ, ಮೊಬೈಲ್‌ ಮೂಲಕ ಮಾತನಾಡುತ್ತಾನೆ ಎಂಬ ಸಂಶಯ ಆರೋಪಿಗೆ ಕಾಡುತ್ತಿತ್ತು. ಇದೇ ವಿಚಾರದಲ್ಲಿ ಹಲವು ಬಾರಿ ಇವರಿಬ್ಬರ ಮಧ್ಯೆ ವಾಕ್ಸಮರ, ಜಟಾಪಟಿ ನಡೆದಿದೆ. ಭಾನುವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಬಂದು ಅಕ್ರಮ ಸಂಬಂಧದ ನೆಪದಲ್ಲಿ ಬಿಕಾಸ್‌ ಜತೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್ನಿಂದ ಬಿಕಾಸ್ನ ಎದೆಗೆ ತಿವಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಬಿಕಾಸ್‌ ಮೃತಪಟ್ಟಿದ್ದಾನೆ. ಕಾವೂರು ಪೊಲೀಸ್‌ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

click me!