Fraud: ಗಾಂಜಾ ನಶೆಯಲ್ಲಿ ಪುಂಡಾಟ: 5 ಆಪ್ರಾಪ್ತರು ಪೊಲೀಸರ ವಶಕ್ಕೆ

By Kannadaprabha News  |  First Published Dec 6, 2021, 8:00 AM IST

*   ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ
*   ಹಣ ಸುಲಿಗೆ ಮಾಡುವ ಕೃತ್ಯಗಳಲ್ಲಿ ತೊಡಗಿದ್ದ ಅಪ್ರಾಪ್ತರು
*   ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು
 


ಬೆಂಗಳೂರು(ಡಿ.06):  ಗಾಂಜಾ(Marijuana) ನಶೆಯಲ್ಲಿ ಮನೆಗಳ ಮೇಲೆ ಕಲ್ಲು ತೂರುವುದು ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ನಾಗರಿಕರಿಂದ ಹಣ ಸುಲಿಗೆ ಮಾಡುವ ಕೃತ್ಯಗಳಲ್ಲಿ ತೊಡಗಿದ್ದ ಐವರು ಅಪ್ರಾಪ್ತರನ್ನು(Minors) ಪುಲಿಕೇಶಿನಗರದ ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಗಾಂಜಾ ನಶೆಯಲ್ಲಿ ಐವರು ಬಾಲಕರು ಮನೆಗಳ ಮೇಲೆ ಕಲ್ಲೆ ಎಸೆದು ಪುಂಡಾಟಿಕೆ ಪ್ರದರ್ಶಿಸಿದ್ದರು. ರಸ್ತೆಯಲ್ಲಿ ವೃದ್ಧರೊಬ್ಬರಿಗೆ ಲಾಂಗ್‌ ಬೀಸಿ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಹೀಗಾಗಿ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಚಟಕ್ಕೆ ಬಿದ್ದಿದ್ದ ಅಪ್ರಾಪ್ತರು ರಾತ್ರಿ ವೇಳೆ ರಸ್ತೆಯಲ್ಲಿ ಬರುವವರನ್ನು ತಡೆದು ದರೋಡೆ(Robbery) ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡಗಳಿಗೆ ನುಗ್ಗಿ ಕಬ್ಬಿಣ, ಸಿಮೆಂಟ್‌ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಗಾಂಜಾ, ಸಿಗರೆಟ್‌(Cigarette), ಮದ್ಯ(Alcohol) ಇತರೆ ಶೋಕಿಗಳಿಗೆ ವ್ಯಯಿಸುತ್ತಿದ್ದರು. ಕೆಲ ದಿನಗಳ ಹಿಂದೆ ಜೀವನಹಳ್ಳಿಯ ಬೀದಿಗಳಲ್ಲಿ ಹಲವು ಮನೆಗಳ ಮೇಲೆ ಕಲ್ಲು ತೂರಿದ್ದರು. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿ ದರೋಡೆಗೆ ಯತ್ನಿಸಿದ್ದರು. ಈ ವೇಳೆ ಕಟ್ಟಡದ ಕೆಲಸಗಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಅವರ ಮೇಲೆ ಕಲ್ಲು ತೂರಿ, ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಈ ಬಾಲಕರ ಹುಚ್ಚಾಟದಿಂದ ನಿವಾಸಿಗಳು ರೋಸಿ ಹೋಗಿದ್ದರು.

Tap to resize

Latest Videos

undefined

ಹುಬ್ಬಳ್ಳಿ-ಧಾರವಾಡ: ಗ್ರಾಮೀಣ ಭಾಗದಲ್ಲೂ ಇದೆ ಗಾಂಜಾ ಘಾಟು!

ಇವರ ಪುಂಡಾಟ ಹಲವು ಮನೆಗಳ ಸಿಸಿಟಿವಿ(CCTV) ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇವರ ಕಾಟ ತಳಲಾರದೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸೇವಿಸಿದ ಆರೋಪಿ ಸೆರೆ

ಮಂಗಳೂರು(Mangaluru): ನಗರದ ಹೊರ ವಲಯದ ತಣ್ಣೀರುಬಾವಿ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿ ಬರುತ್ತಿದ್ದ ಯುವಕನನ್ನು ಪಣಂಬೂರು ಪೊಲೀಸರು ಡಿ.1ರಂದು ಬಂಧಿಸಿದ್ದರು(Arrest).

ತಣ್ಣೀರುಬಾವಿ ಗೆಸ್ಟ್‌ ಹೌಸ್‌ ಬಳಿ ನಿವಾಸಿ ರೋಹಿತ್‌ ಆರ್‌. (20) ಬಂಧಿತ. ಪಿಎಸ್‌ಐ ಉಮೇಶ್‌ ಕುಮಾರ್‌ ಅವರು ಸಿಬ್ಬಂದಿ ದಾದಾಸಾಬ್‌ ಅವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ರೋಹಿತ್‌ ಅಮಲು ಪದಾರ್ಥ ಸೇವಿಸಿ ನಡೆದುಕೊಂಡು ಬರುತ್ತಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಗಮ್ಮತ್ತಿನಲ್ಲಿ ಕಾರಿಗೆ ಬೆಂಕಿ; ನಶೆ ಇಳಿದಾಗ ತಗ್ಲಾಕೊಂಡ ಕಿಡಿಗೇಡಿ!

ಗಾಂಜಾ, ಮದ್ಯ ವಶ

ಗೋಕರ್ಣ(Gokarna): ಇಲ್ಲಿನ ಕುಡ್ಲೆ ಬೀಚ್‌ನ ಸನ್‌ ಆ್ಯಂಡ್‌ ಮೂನ್‌ ರೆಸ್ಟೋರೆಂಟ್‌ನ ಮೇಲೆ ಕರಾವಳಿ ಕಾವಲು ಪಡೆ ಸಿಪಿಐ ಮಾರುತಿ ನಾಯಕ ಮತ್ತು ಪಿಎಸ್‌ಐ ದಯಾನಂದ ಜೋಗಳೇಕರ ನೇತೃತ್ವ ತಂಡ ದಾಳಿ(Raid) ನಡೆಸಿ ರೆಸ್ಟೋರೆಂಟ್‌ ವ್ಯವಸ್ಥಾಪಕ ಮತ್ತು ಕೆಲಸಗಾರರಿಂದ ಗಾಂಜಾ, ಮದ್ಯ ಮತ್ತು ಹುಕ್ಕಾಗಳನ್ನು ವಶಪಡಿಸಿಕೊಂಡಿದ್ದರು.

ಐವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ(Judicial Custody) ಒಪ್ಪಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತರೆಲ್ಲರೂ ನೇಪಾಳದವರಾಗಿದ್ದು, ಲಕ್ಷ್ಮಣ ಖಾತ್ರಿ ಬೀರ ಬಹದ್ದೂರ (33), ಸುಮನ್‌ ಭರತ ತಮನ್‌ (23), ಆಯುಸ್‌ ಲಾಮಾ ಹಿರಾಲಾಲ (21), ಬಿಪಿನ್‌ ಕೇಸಿ (33), ತೇಜಚಂದ್ರ ಸುಬ್ಬಾ (50) ಬಂಧಿತರಾಗಿದ್ದು, ರಾಜತಮನ ದೋಲ್‌ ಬಹದ್ದೂರ ತಮಾಂಗ್‌ ಪರಾರಿಯಾಗಿದ್ದನು. ದಾಳಿಯಲ್ಲಿ ಕರಾವಳಿ ಕಾವಲುಪಡೆ(Coast Guard) ಎಎಸ್‌ಐ ಸದಾನಂದ ಪಟಗಾರ, ಸಿಬ್ಬಂದಿಯಾದ ಶೇಖರ ಗೌಡ, ಪ್ರಶಾಂತ, ಕೇಂದ್ರೀಯ ದಳದ ಸಿಬ್ಬಂದಿ ವಿಷ್ಣು ಕುಲೆರ, ರಾಜೀವ ಗೋವೆಕರ, ನಾಗೇಂದ್ರ ಟಕ್ಕರ ಪಾಲ್ಗೊಂಡಿದ್ದರು.
 

click me!