ಈ ಸ್ಟೋರಿ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಮ್ಮಿಇಲ್ಲ. ಕ್ರೈಂ ಮಾಡಿ ಕಾರು, ಬೈಕು ಬಸ್ಸಲ್ಲಿ ಎಸ್ಕೇಪ್ ಆಗೋದು ಕಾಮನ್ , ಆದ್ರೆ ಇಲ್ಲೊಬ್ಬನ್ನು ಪೊಲೀಸ್ರು ಕೊಲೆ ಯತ್ನದ ಕೇಸ್ ನಡಿ ಹುಡುಕುತ್ತಿದ್ದರೆ ಆತ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್ ಆಗಿದ್ದಾನೆ.
ಬೆಂಗಳೂರು (ಜೂ.21): ಕೊಲೆ ಯತ್ನದ ಆರೋಪಿ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್, ಈ ಸ್ಟೋರಿ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಮ್ಮಿಇಲ್ಲ. ಕ್ರೈಂ ಮಾಡಿ ಕಾರು, ಬೈಕು ಬಸ್ಸಲ್ಲಿ ಎಸ್ಕೇಪ್ ಆಗೋದು ಕಾಮನ್ , ಆದ್ರೆ ಇಲ್ಲೊಬ್ಬನ್ನು ಪೊಲೀಸ್ರು ಕೊಲೆ ಯತ್ನದ ಕೇಸ್ ನಡಿ ಹುಡುಕುತ್ತಿದ್ದರೆ ಆತ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಆರೋಪಿ ಎಸ್ಕೇಪ್ ಆದ ಕತೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಇದು ಉದ್ಯಮಿ ವೇದಾಂತ್ ದುಗಾರ್ ಎಸ್ಕೇಪ್ ಅಸಲಿ ಕಹಾನಿ. ಕಳೆದ 9ನೇ ತಾರೀಖು ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ್ದ. ಈ ಕುರಿತು ಆರ್ ಟಿ ನಗರ ಠಾಣೆಯಲ್ಲಿ ಕೊಲೆಯತ್ನದ ಕೇಸ್ ದಾಖಲಾಗಿತ್ತು. ಪೊಲೀಸರು ಹಿಂದೆ ಬೀಳ್ತಿದ್ದಂತೆ ವೇದಾಂತ್ ಖತರ್ನಾಕ್ ಪ್ಲಾನ್ ಮಾಡಿ ಬೆಂಗಳೂರಿನಿಂದ ವಿಮಾನದ ಮೂಲಕ ಬಾಂಬೆಗೆ ಹಾರಿದ್ದ. ನಂತರ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿ, ಬಳಿಕ ಪ್ರೈವೇಟ್ ಜೆಟ್ ಮೂಲಕ ಭಾರತ-ನೇಪಾಳ ಗಡಿಗೆ ಪ್ರಯಾಣ ಬೆಳೆಸಿದ್ದಾನೆ.
ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?
ಸದ್ಯ ಗಡಿಯಿಂದ ನೇಪಾಳಕ್ಕೆ ಹೋಗಿ ವೇದಾಂತ್ ತಲೆ ಮರೆಸಿಕೊಂಡಿದ್ದಾನೆ. ವೇದಾಂತ್ ಕುಟುಂಬಸ್ಥರು ಮೂಲತಃ ನೇಪಳಾದವರು. ಹೀಗಾಗಿ ಪೊಲೀಸರಿಗೆ ಸಿಗಬಾರದು ಅಂತ ನೇಪಾಳಕ್ಕೆ ವೇದಾಂತ್ ಎಸ್ಕೇಪ್ ಆಗಿದ್ದಾನೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನೇಪಾಳಕ್ಕೆ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಇತಿಹಾಸದಲ್ಲೆ ಆರೋಪಿಯೊಬ್ಬ ಪ್ರೈವೆಟ್ ಜೆಟ್ ಬಳಸಿ ಎಸ್ಕೇಪ್ ಆಗಿರೋದು ಅಪರೂಪ. ಇನ್ನು ಈ ಪ್ರಕರಣದಲ್ಲಿ ವೇದಾಂತ್ ಹಿಂದೆ ಬಿದ್ದು ಪೊಲೀಸರು ಬಾಂಬೆ ಗೋವಾ ಅಂತ ಹೋಗಿದ್ದಾರೆ. ಆದರೆ ಎಲ್ಲೂ ಆತ ಸಿಕ್ಕಿಲ್ಲ. ರಾಜಕೀಯ ಒತ್ತಡ ಬರ್ತಿದ್ದಂತೆ ನೇಪಾಳದತ್ತ ಮುಖ ಮಾಡಿದ ಪೊಲೀಸರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಘಟನೆ ಹಿನ್ನೆಲೆ: ಮಾತನಾಡದ ವಿಷಯಕ್ಕೆ ಐಷಾರಾಮಿ ಹೋಟೆಲಲ್ಲಿ ಉದ್ಯಮಿ ಮಕ್ಕಳ ಜಗಳ ನಡೆದಿತ್ತು. ಜೂನ್ ಮೊದಲ ವಾರ ಅಂದರೆ ಜೂ. 9ರಂದು ಸಂಜೆ ಆರ್.ಟಿ.ನಗರದ ಫೋರ್ ಸೀಜನ್ ಹೋಟೆಲ್‌ನಲ್ಲಿ ಸೂರ್ಯ ಎಂಬುವವರ ಮದುವೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಷ್ಣವಿ ಬಿಲ್ಡರ್ಸ್ ಮಾಲಿಕ ಗೋವಿಂದರಾಜು ಪುತ್ರ ದರ್ಶನ್ ಹಾಗೂ ವಿಎಆರ್ ಬಿಲ್ಡರ್ಸ್ ಪುತ್ರ ಸಂಜಯ್ ದಗ್ಗರ್ ಪುತ್ರ ವೇದಾಂತ್ ದಗ್ಗರ್ ಬಂದಿದ್ದರು. ಇಬ್ಬರು ಪರಸ್ಪರ ಪರಿಚಿತರು. ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ಎದುರಾದಾಗ ವೇದಾಂತ್ ದಗ್ಗರ್, ‘ಎಲ್ಲರೂ ನನ್ನನ್ನು ಮಾತನಾಡುತ್ತಾರೆ. ನೀನೇಕೆ ನನ್ನನ್ನು ಮಾತನಾಡಿಸುವುದಿಲ್ಲ’ ಎಂದು ದರ್ಶನ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ‘ನಿನ್ನದು ಅತಿಯಾಗಿದೆ’ ಎಂದು ಬೈದು ಸ್ಥಳದಿಂದ ತೆರಳಿದ್ದ ಎಂದು ಆರೋಪಿಸಲಾಗಿದೆ.
ಭಾರತದ ಅತೀದೊಡ್ಡ ಕೈಗಾರಿಕೋದ್ಯಮಿ ಆಗಿದ್ದರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್ ಟಾಟಾ ಏಕಿಲ್ಲ?
ಶನಿವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಊಟ ಮಾಡಲು ದರ್ಶನ್ ಹೋಗುವಾಗ, ವೇದಾಂತ್ ದಗ್ಗರ್ ಏಕಾಏಕಿ ಬಿಯರ್ ಬಾಟಲಿಯಿಂದ ದರ್ಶನ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಾಯಗೊಂಡು ಕುಸಿದು ಬಿದ್ದ ದರ್ಶನ್‌ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಗಲಾಟೆ ವೇಳೆ ಇಬ್ಬರು ಪಾನಮತ್ತರಾಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಗಾಯಾಳು ದರ್ಶನ್ ನೀಡಿದ ದೂರಿನ ಮೇರೆಗೆ ಆರ್.ಟಿ.ನಗರ ಠಾಣೆ ಪೊಲೀಸರು ವೇದಾಂತ್ ದಗ್ಗರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.