ಕಲಬುರಗಿ: ಕೊಲೆ ಪ್ರಕ​ರಣ, ಐವರು ಆರೋಪಿಗಳ ಬಂಧನ

By Kannadaprabha News  |  First Published Jun 25, 2023, 9:30 PM IST

ಕಲಬುರಗಿ ಆಶ್ರಯ ಕಾಲೋನಿಯ ನಿವಾಸಿ ಸತೀಶ ಮಲ್ಲಿಕಾರ್ಜುನ ಹೊಸಮನಿ, ಗಂಗಾನಗರ ಕಾಲೋನಿಯ ಶರಣುಕುಮಾರ ಅಂಬಾರಾಯ ಶೀಲವಂತ, ಪ್ರಭುದೇವ ನಗರ ನಿವಾಸಿ ಪ್ರದೀಪ ರಾಜಶೇಖರ ಸೇರಿದಂತೆ ಇನ್ನಿಬ್ಬರು ಬಾಲಕರು ಬಂಧಿತ ಆರೋಪಿಗಳಾಗಿದ್ದಾರೆ.


ಕಮಲಾಪುರ(ಜೂ.25):  ಕಲಬುರಗಿ ಆಶ್ರಯ ಕಾಲೋನಿ ನಿವಾಸಿ ರಾಜಕುಮಾರ ಶರಣಪ್ಪ ತೆಗನೂರ (35) ಅವರನ್ನು ಕೊಲೆಗೈದ ಐವರು ಆರೋಪಿಗಳನ್ನು ಮಹಾಗಾಂವ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಲಬುರಗಿ ಆಶ್ರಯ ಕಾಲೋನಿಯ ನಿವಾಸಿ ಸತೀಶ ಮಲ್ಲಿಕಾರ್ಜುನ ಹೊಸಮನಿ (27), ಗಂಗಾನಗರ ಕಾಲೋನಿಯ ಶರಣುಕುಮಾರ ಅಂಬಾರಾಯ ಶೀಲವಂತ (20), ಪ್ರಭುದೇವ ನಗರ ನಿವಾಸಿ ಪ್ರದೀಪ ರಾಜಶೇಖರ (22) ಸೇರಿದಂತೆ ಇನ್ನಿಬ್ಬರು ಬಾಲಕರು ಬಂಧಿತ ಆರೋಪಿಗಳಾಗಿದ್ದಾರೆ.

ತಾಲೂಕಿನ ಶಿರಡೋಣ ಹೊರವಲಯದ ಅರಣ್ಯದಲ್ಲಿ ಕಳೆದ ಮೇ 31ರಂದು ಅರ್ಧಂಬರ್ಧ ಹೂತ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವ ಗುರುತು ಪತ್ತೆ ಹಚ್ಚಿದ ಪೊಲೀಸರು ಮೃತ ವ್ಯಕ್ತಿಯ ಜತೆಗಿರುವ ಗೆಳೆಯರ ಬಗ್ಗೆ ಮಾಹಿತಿ ಪಡೆದರು. ಅವರನ್ನು ಬಂಧಿಸಿ ಕೇಳಿದಾಗ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟರು. ಕಲಬುರಗಿಯಲ್ಲಿ ರಾಜಕುಮಾರನನ್ನು ಮೇ 19ರಂದು ಕೊಲೆ ಮಾಡಿ ಶಿರಡೊಣ ಸಮೀಪದ ಹೊರವಲಯದಲ್ಲಿ ಹೂತು ಹಾಕಿರುವುದಾಗಿ ಆರೋಪಿಗಳು ಹೇಳಿದ್ದಾರೆ.

Tap to resize

Latest Videos

undefined

Bengaluru: ಲೈವ್‌ಬ್ಯಾಂಡ್‌ ಬಂದ್‌ನಿಂದ ಸಂಕಷ್ಟ: ಗೆಳತಿ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆಗೆ ಶರಣು

ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಕೊಲೆಯಾಗುವ ಮಟ್ಟಕೆ ಹೋಗಿದೆ ಎಂದು ಪೋಲಿಸರು ತಿಳಿಸಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಎಎಸ್‌ಪಿ ಶ್ರೀನಿಧಿ, ಡಿವೈಎಸ್ಪಿ ಯು.ಬಿ. ಚಿಕ್ಕಮಠ ಮಾರ್ಗದರ್ಶನದಲ್ಲಿ ಸಿಪಿಐ ವಿ.ನಾರಾಯಣ, ಪಿಎಸ್‌ಐ ಆಶಾ ರಾಠೋಡ, ಕುಪೇಂದ್ರ, ಅಶೋಕ, ರಾಮಲಿಂಗ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

click me!