ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ಸಿಂದಗಿ ಪಟ್ಟಣದ ಹಂಚಿನಾಳ ಎಂಬುವರಿಗೆ ಸೇರಿದ ಧನಲಕ್ಷ್ಮೀ ಜ್ಯುವೆಲರಿ ಬಳಿ ಆಗುಂತಕರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿರುವ ಘಟನೆ ಸಿಂದಗಿ ಪಟ್ಟಣದ ಅಶೋಕ ಚೌಕ್ ಬಳಿಯ ಜ್ಯುವೆಲರಿ ಶಾಪ್ ಬಳಿ ನಡೆದಿದೆ.
ವಿಜಯಪುರ (ಫೆ.13): ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ಸಿಂದಗಿ ಪಟ್ಟಣದ ಹಂಚಿನಾಳ ಎಂಬುವರಿಗೆ ಸೇರಿದ ಧನಲಕ್ಷ್ಮೀ ಜ್ಯುವೆಲರಿ ಬಳಿ ಆಗುಂತಕರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿರುವ ಘಟನೆ ಸಿಂದಗಿ ಪಟ್ಟಣದ ಅಶೋಕ ಚೌಕ್ ಬಳಿಯ ಜ್ಯುವೆಲರಿ ಶಾಪ್ ಬಳಿ ನಡೆದಿದೆ. ಪಲ್ಸರ್ ಮೇಲೆ ಬಂದ ಐವರ ಪೈಕಿ ಓರ್ವನಿಂದ ಕೃತ್ಯ ನಡೆದಿದ್ದು ಗುಂಡಿನ ಶಬ್ಧ ಕೇಳಿ ಬಂದ ಕೂಡಲೇ ಸ್ಥಳೀಯರು ಜಮಾಯಿಸಿದ್ದಾರೆ. ಇನ್ನು ಜನರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾರೆ.
ನಂಬರ್ ಇಲ್ಲದ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಕಿರಾತಕರ ಪೈಕಿ ಇಬ್ಬರು ದುಷ್ಕರ್ಮಿಗಳು ಜನರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇತರೆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ವಶಕ್ಕೆ ಸಿಕ್ಕ ಇಬ್ಬರ ಬಳಿ ಒಂದು ಕಂಟ್ರೀ ಪಿಸ್ತೂಲ್ ಮೂರು ಜೀವಂತ ಗುಂಡುಗಳು ಹಾಗೂ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇನ್ನು ಕದೀಮರು ತಾವು ಪೊಲೀಸರ ಮುಂದೆ ತಾವು ಪೂನಾದವರೆಂದು ಹೇಳುತ್ತಿದ್ದಾರೆ. ಗುಂಡಿನ ದಾಳಿಯಿಂದ ಸಿಂದಗಿ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು ತನಿಖೆ ಮುಂದುವರೆದಿದೆ.
ಧರ್ಮ ಕಾರ್ಯಗಳು ನಿರಂತರ ನಡೆಯಬೇಕು: ಬಿ.ಎಸ್.ಯಡಿಯೂರಪ್ಪ
ದಿಲ್ಲಿ ವೈದ್ಯ ಬೆಂಗಳೂರಲ್ಲಿ ಬಂಧನ: ಪತ್ನಿಗೆ ನಿಷೇಧಿತ ‘ತ್ರಿವಳಿ ತಲಾಖ್’ ಹೇಳಿ ಆಕೆಯನ್ನು ದೂರ ಮಾಡಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿದ್ದ ಪತಿ ವಿರುದ್ಧ ಪತ್ನಿ ನೀಡಿದ ದೂರಿನನ್ವಯ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕು ಕಾಯ್ದೆ 2019ರ ಅನ್ವಯ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಈತ ಬೆಂಗಳೂರು ಮೂಲಕ ಬ್ರಿಟನ್‌ಗೆ ತೆರಳಲು ಯೋಜನೆ ಹಾಕಿದ್ದ. ಆದರೆ ಪೊಲೀಸರು ಆತನ ಸುಳಿವು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಚುನಾವಣೆ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ: ನಳಿನ್‌ಕುಮಾರ್ ಕಟೀಲ್
2020ರಲ್ಲಿ ದಂಪತಿಯ ವಿವಾಹವಾಗಿತ್ತು. ಬಳಿಕ ತಾನು ಕೆಲ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರತ್ಯೇಕತೆ ಬೇಕು ಎಂದು ತನ್ನ ಪತ್ನಿಯಿಂದ ದೂರವಾಗಿದ್ದ. ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದ ವೇಳೆ ಪತಿಯ ಜಾಗಕ್ಕೆ ಪತ್ನಿ ಕಳೆದ ಅಕ್ಟೋಬರ್‌ನಲ್ಲಿ ಭೇಟಿ ನೀಡಿದಾಗ ಆತ ಇನ್ನೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದದ್ದು ಕಂಡುಬಂದಿದೆ. ಆಗ ಪ್ರಶ್ನೆ ಮಾಡಿದ್ದ ಪತ್ನಿ ಮೇಲೆ ಹಲ್ಲೆ ನಡೆಸಿದ ವೈದ್ಯ ‘ತಲಾಖ್ ತಲಾಖ್ ತಲಾಖ್’ ಎಂದು ಹೇಳಿ ಪತ್ನಿಯನ್ನು ದೂರ ಮಾಡಿದ್ದ. ಈಗ ಪೊಲೀಸರೆದುರು ಪತ್ನಿಯೊಂದಿಗೆ ಬದುಕಲು ಇಷ್ಟವಿಲ್ಲ ಎಂದಿದ್ದಾನೆ.