ಪ್ರೀತಿಸಿದ ಹುಡುಗಿ ಜೊತೆ ಮಾತನಾಡ್ತಾನೆ ಅಂತಾ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿ ಪುಂಡ!

By Ravi Janekal  |  First Published Aug 24, 2024, 1:50 PM IST

ಪ್ರೀತಿಸಿದ ಹುಡುಗಿ ಜೊತೆ ಬೇರೊಬ್ಬ ಮಾತನಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು ವಿದ್ಯಾರ್ಥಿಯೋರ್ವನಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ನಡೆದಿದೆ.


ತುಮಕೂರು (ಆ.24):  ಪ್ರೀತಿಸಿದ ಹುಡುಗಿ ಜೊತೆ ಬೇರೊಬ್ಬ ಮಾತನಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು ವಿದ್ಯಾರ್ಥಿಯೋರ್ವನಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ನಡೆದಿದೆ.

ಜಯವರ್ದನ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮನೋಜ್, ಗಣೇಶ್ ಎಂಬುವವರಿಂದ ಹಲ್ಲೆ. ವಿದ್ಯಾನಿಧಿ ಕಾಲೇಜಿನಲ್ಲಿ 2nd ಪಿಯುಸಿ ಓದುತ್ತಿರುವ ಜಯವರ್ಧನ್. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿರುವ ಆರೋಪಿ ಮನೋಜ್. ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಅವನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿ ಜೊತೆಗೆ ಜಯವರ್ದನ್ ಮಾತನಾಡುತ್ತಾನೆ, ವಿದ್ಯಾರ್ಥಿಯೊಂದಿಗೆ ಜೊತೆಗೆ ಇರುವ ಗೊತ್ತಾಗಿ  'ನಮ್ಮ ಹುಡುಗಿ ಜೊತೆ ಯಾಕೆ ಮಾತನಾಡ್ತಿಯಾ ಮಗನೇ' ಅಂತ ಜಯವರ್ಧನ್ ಗೆ ಪೋನ್ ನಲ್ಲಿ ಬೆದರಿಕೆ ಹಾಕಿದ್ದ ಮನೋಜ್. ಫೋನ್‌ನಲ್ಲಿ ಬೆದರಿಕೆ ಹಾಕಿದ ಬಳಿಕ ಕಾಲೇಜ್ ಬಳಿ ಬಂದು ತನ್ನ ಸ್ನೇಹಿತ ಗಣೇಶ್ ಎಂಬಾತನ ಜೊತೆ ಸೇರಿಕೊಂಡು ಜಯವರ್ದನ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Tap to resize

Latest Videos

undefined

ಕಾರ್ಕಳ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಶಾಸಕ ಸುನಿಲ್ ಕುಮಾರ ಆಕ್ರೋಶ

ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿರುವ ಘಟನೆ ಕಂಡು ಕಾಲೇಜಿನ ಬಸ್ ಚಾಲಕರು ದಾವಿಸಿದ್ದಾರೆ. ಕೂಡಲೇ ಹಲ್ಲೆ ನಡೆಸುತ್ತಿದ್ದ ಮನೋಜ್‌ನನ್ನ ಹಿಡಿದು ಕಾಲೇಜು ಪ್ರಿನ್ಸಿಪಾಲ್‌ರಿಗೆ ಒಪ್ಪಿಸಿದ್ದಾರೆ. ಈ ವೇಳೆ ಇನ್ನೋರ್ವ ಗಣೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಘಟನೆ ಸಂಬಂಧ ಹಲ್ಲೆಗೊಳಗಾದ ಜಯವರ್ದನ್ ಪೋಷಕರಿಂದ ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಮನೋಜ್ ವಿರುದ್ಧ ದೂರು ದಾಖಲಾಗಿದೆ. 

click me!