Shivamogga: ಮಾನಸಿಕ ಖಿನ್ನತೆಯಿಂದ FDA ಆತ್ಮಹತ್ಯೆಗೆ ಶರಣು

By Suvarna News  |  First Published Jan 30, 2022, 12:19 PM IST

*  ಭದ್ರಾವತಿ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ್ 
*  ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮೃತ ಸಂತೋಷ್ 
*  ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು
 


ಶಿವಮೊಗ್ಗ(ಜ.30):  ಮಾನಸಿಕ ಖಿನ್ನತೆಯಿಂದ ಪ್ರಥಮ ದರ್ಜೆ ಸಹಾಯಕರೊಬ್ಬರು ಆತ್ಮಹತ್ಯೆಗೆ(Suicide) ಶರಣಾದ ಘಟನೆ ನಗರದಲ್ಲಿ ನಡೆದಿದೆ. ಮೊನ್ನೆ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸಂತೋಷ್ (40 ) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. 

ಜಿಲ್ಲೆಯ ಭದ್ರಾವತಿ ನಗರಸಭೆಯಲ್ಲಿ ಕಳೆದ ನಾಲೈದು ವರ್ಷಗಳಿಂದ ಸಂತೋಷ್ ಪ್ರಥಮ ದರ್ಜೆ ಸಹಾಯಕರಾಗಿ(FDA) ಕೆಲಸ ನಿರ್ವಹಿಸುತ್ತಿದ್ದರು. ಮೃತ ಸಂತೋಷ್ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ವೇತನವನ್ನೂ ತಡೆಹಿಡಿಯಲಾಗಿತ್ತು. ಇದರಿಂದ ಸಂತೋಷ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

Tap to resize

Latest Videos

Domestic violence : ಬೆಳಗಾವಿ, ಬುದ್ಧಿಮಾಂದ್ಯ ಮಕ್ಕಳಾಗಿದ್ದಕ್ಕೆ ಕಿರುಕುಳ, ಮಗನೊಂದಿಗೆ ಕೆರೆಗೆ ಹಾರಿದ ಮಹಿಳೆ

ಮೊನ್ನೆ ರಾತ್ರಿ ಶಿವಮೊಗ್ಗ(Shivamogga) ನಗರದ ಬಸವಗುಡಿಯಲ್ಲಿರುವ ಅವರ ಮನೆಯ ಕೊಠಡಿಯಲ್ಲಿ ಸಂತೋಷ್ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್‌: ಕಾರು ಚಾಲಕ ನಿಗೂಢ ಆತ್ಮಹತ್ಯೆ

ಚಿಕ್ಕಮಗಳೂರು(Chikkamagaluru): ಶೃಂಗೇರಿ ತಹಸೀಲ್ದಾರ್‌ ಜೀಪ್‌ ಚಾಲಕ ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಅಧಿಕಾರಿಗಳ ದುರಾಸೆ ಮತ್ತು ಬ್ರೋಕರ್‌ಗಳ ಹಾವಳಿಯೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. 

ಶೃಂಗೇರಿ ತಾಲೂಕಿನ ಹೆತ್ತೂರು ಗ್ರಾಮದ ನಿವಾಸಿ ವಿಜೇತ್‌ (24) ಮೃತಪಟ್ಟವರು. ಅವರು ತಮ್ಮ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತೀಚೆಗೆ ಶೃಂಗೇರಿ ತಹಸೀಲ್ದಾರ್‌ ಅಂಬುಜಾ ಅವರು ಲಂಚ ಸ್ವೀಕರಿಸಿದ ಆರೋಪದ ಮೇಲೆ ಎಸಿಬಿ(ACB) ಬಲೆಗೆ ಬಿದ್ದಿದ್ದರು. ಇದೇ ಪ್ರಕರಣದಲ್ಲಿ ಮೂರು ಮಂದಿ ಗ್ರಾಮ ಲೆಕ್ಕಿಗರು, ಒಬ್ಬ ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದರು. ಈಗ ವಿಜೇತ್‌ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, 94ಸಿ ಹಾಗೂ 94ಸಿಸಿ ನಕಲಿ ಹಕ್ಕುಪತ್ರ ಹಗರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ತಹಸೀಲ್ದಾರ್‌ ಅಂಬುಜಾ, ತಾಲೂಕು ಕಚೇರಿಯ ಉನ್ನತ ಅಧಿಕಾರಿಗಳು, ಕಮಿಷನ್‌ ಏಜೆಂಟರು ನೇರ ಹೊಣೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರಗತಿಪರ ಕೃಷಿಕ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳ(Bantwal) ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಶನಿವಾರ ಬೆಳಗ್ಗೆ ಪಾಣೆ ಮಂಗಳೂರಿನ(Mangaluru) ನಂದಾವರ ಸಂಪರ್ಕದ ಕಿರುಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಅವರು ಪ್ರಗತಿಪರ ಕೃಷಿಕರಾಗಿದ್ದರು. ಮನೆಯಿಂದ ಬೆಳಗ್ಗೆ ಪೇಟೆಯಿಂದ ಹೊರಟ ಅವರು ಪಾಣೆಮಂಗಳೂರು ಕಿರುಸೇತುವೆ ಬಳಿ ನೀರಿಗೆ ಹಾರಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ ಮಾಹಿತಿ ನೀಡಿದ್ದು ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತ ಪತಿ ಆತ್ಮಹತ್ಯೆ

ಕಾರವಾರ(Karwar): ಪತ್ನಿಯೊಂದಿಗೆ ವಿಡಿಯೋ ಕಾಲ್‌ ಮೂಲಕ ಮಾತನಾಡುತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿತ್ತಾಕುಲಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Bengaluru Suicide Cases: ಪತ್ನಿಯ ಬೇಡಿಕೆ ಪೂರೈಸಲಾಗದೇ ಪತಿ ಆತ್ಮಹತ್ಯೆ

ನಾಕುದಾಮೊಹಲ್ಲಾ ನಿವಾಸಿ ಮಹ್ಮದ್‌ ಶಫೀಕ್‌ (33) ಆತ್ಮಹತ್ಯೆ ಮಾಡಿಕೊಂಡವರು. ನಿರುದ್ಯೋಗಿಯಾಗಿದ್ದ ಮಹ್ಮದ್‌ ಯಾವುದೇ ಕೆಲಸ ಇಲ್ಲದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ. ಗೋವಾದ ವಾಸ್ಕೋದಲ್ಲಿರುವ ತನ್ನ ಪತ್ನಿಗೆ ಶುಕ್ರವಾರ ರಾತ್ರಿ ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿದ್ದು ತನಗೆ ಜೀವನ ಸಾಕಾಗಿದೆ, ತಾನು ಸಾಯುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಬಳಿಕ ಮನೆಯ ಹಾಲ್‌ನಲ್ಲಿಯೇ ವೇಲ್‌ನಿಂದ ನೇಣು ಬಿಗಿದುಕೊಳ್ಳಲು ಮುಂದಾಗಿದ್ದು, ಈ ವೇಳೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಹೇಳುತ್ತಿರುವಾಗಲೇ ಆಕೆಯ ಕರೆಯನ್ನು ಕಟ್‌ ಮಾಡಿ, ಮೊಬೈಲ್‌ ಬಂದ್‌ ಮಾಡಿ ನೇಣು ಬಿಗಿದುಕೊಂಡಿದ್ದಾನೆ. ಪತ್ನಿ ಕೂಡಲೇ ಆತನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಹೋಗಿ ನೋಡುವಷ್ಟರಲ್ಲಾಗಲೇ ಮಹ್ಮದ್‌ ಸಾವನ್ನಪ್ಪಿದ್ದಾಗಿ ಪತ್ನಿ ಸಮೀರಾ ದೂರಿನಲ್ಲಿ ತಿಳಿಸಿದ್ದಾರೆ. ಚಿತ್ತಾಕುಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
 

click me!