ಕುಡಿದು ಬಂದು ಏನೂ ಅರಿಯದ 2 ವರ್ಷದ ಕಂದಮ್ಮನನ್ನೇ ಕೊಂದು ಹಾಕಿದ ಪಾಪಿ ತಂದೆ!

Published : Jun 13, 2023, 08:26 PM ISTUpdated : Jun 13, 2023, 08:30 PM IST
ಕುಡಿದು ಬಂದು ಏನೂ ಅರಿಯದ 2 ವರ್ಷದ ಕಂದಮ್ಮನನ್ನೇ ಕೊಂದು ಹಾಕಿದ ಪಾಪಿ ತಂದೆ!

ಸಾರಾಂಶ

ಪತ್ನಿ ಹಾಗೂ ಮಕ್ಕಳಿಗೆ  ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ ಪಾಪಿ ಈಗ ಏನೂ ಅರಿಯದ 2 ವರ್ಷದ ತನ್ನದೇ ಮಗುವನ್ನು ಕೊಂದಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.

ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜೂ.13): ಅವರಿಬ್ಬರು ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು. ಮುದ್ದಾದ ಮೂರು ಪುಟಾಣಿ ಹೆಣ್ಣು ಮಕ್ಕಳು ಸಹ ಇದ್ರು. ದುಶ್ಚಟಕ್ಕೆ ಬಿದ್ದ ಪತಿ ಪ್ರತೀದಿನ, ಪ್ರತಿಕ್ಷಣ ಪತ್ನಿ ಹಾಗೂ ಮಕ್ಕಳಿಗೆ  ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ. ಹೆಂಡತಿ ಮಕ್ಕಳು ಬೇಕು ಎಂದು ನಟಿಸಿ ಪತ್ನಿಯ ಮನೆಗೆ ಬಂದು ಇದೀಗ ತನ್ನ ಸ್ವಂತ ಪುಟಾಣಿ ಕಂದಮನನ್ನೇ ಸಾವಿನ ಮನೆಗೆ ಕಳುಹಿಸಿದ್ದಾನೆ.

ಮುಗಿಲು ಮುಟ್ಟಿದ ತಾಯಿ ಹಾಗೂ ಗ್ರಾಮಸ್ಥರ ಆಕ್ರಂದನ, ಏನಾಗ್ತಿದೆ ಅಂತ ಅರಿಯದೆ ಆಟವಾಡ್ತಿರುವ ಎರಡು ಪುಟಾಣಿ ಮಕ್ಕಳು, ನಿರ್ಜನ ಪ್ರದೇಶದಲ್ಲಿ ಸತ್ತು ಬಿದ್ದಿರುವ ಎರಡು ವರ್ಷ ವಯಸ್ಸಿನ ಮಗು. ಎಂತಹವರ ಕಣ್ಣಾಲಿಗಳು ಒದ್ದೆಯಾಗುವ ದೃಶ್ಯಗಳು ಕಂಡುಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ. ಕೇವಲ ಒಂದೇ ಕಿಮೀ ದೂರದಲ್ಲಿರುವ ಆಂಧ್ರದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ನಡಿಬಾರದು ಘಟನೆಯೊಂದು ನಡೆದು ಹೋಗಿದೆ.

ಮುರುಡೇಶ್ವರ ತೀರದ ಅಲೆಗೆ ಸಿಲುಕಿ BENGALURU ವಿದ್ಯಾರ್ಥಿ ಸಾವು, ಲೈಫ್ ಗಾರ್ಡ್‌ ಎಚ್ಚರಕ್ಕೆ ಪ್ರವಾಸಿಗರ ಹಲ್ಲೆ!

ಫೋಟೋದಲ್ಲಿ ಕಿರಾತಕನಂತೆ ಫೋಸ್ ಕೊಡ್ತಿರುವ ಇವನ ಹೆಸರು ಗಂಗಾಧರ  (30),ಇವನು ಮಾಡಿರುವ ನೀಚ ಕೆಲಸಕ್ಕೆ ಇವತ್ತು ಇಡೀ ಕುಟುಂಬವೇ ಕಣ್ಣೀರಿನ ಕೈ ತೊಳೆಯುವಂತೆ ಮಾಡಿದೆ. ಕೂಲಿ ಕೆಲಸಕ್ಕೆ ಹೋಗುವ ಗಂಗಾಧರ ಸದಾ ಎಣ್ಣೆ ಮತ್ತಿನಲ್ಲಿ ಇರುವ ವ್ಯಕ್ತಿ,  ತನ್ನ ಪತ್ನಿ ರೇಣುಕಾ (25) ಹಾಗೂ ಮೂವರು ಮಕ್ಕಳನ್ನು ಇಡ್ಕೊಂಡು ಹೊಡಿಯೋದು ಇವನ ಕಾಯಕ. ಇವನ ಟಾರ್ಚರ್ ತಾಳಲಾರದೆ ತನ್ನ ಮೂರು ಮಕ್ಳಳನ್ನು ಕರೆದುಕೊಂಡು ಇದೆ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಏಳು ತಿಂಗಳ ಹಿಂದೆ ರೇಣುಕಾ ಬಂದಿದ್ದಾಳೆ. ಅಣ್ಣ ಆಸೆರೆಯಲ್ಲಿದ್ದು ಕೂಲಿ ಕೆಲಸಕ್ಕೂ ಹೋಗುತ್ತ ತನ್ನ ಮಕ್ಕಳನ್ನು ಸಾಕುತ್ತಿದ್ದಳು. ಆದ್ರೆ ಗಂಗಾಧರನಿಗೆ ಅದೇನಾಯ್ತೋ ಗೊತ್ತಿಲ್ಲ ಭಾನುವಾರ ಏಕಾಏಕಿ ರೇಣುಕಾಳ ಅಣ್ಣನ ಮನೆಗೆ ಬಂದು ನಾನು ಇನ್ಮುಂದೆ ಕುಡಿಯೋದಿಲ್ಲ ನನ್ನ ಹೆಂಡ್ತಿ ಮಕ್ಕಳನ್ನು ಮನೆಗೆ ಕಳುಹಿಸಿ ಎಂದು ಗೋಗರೆದಿದ್ದಾನೆ.

ಇವನ ನಾಟಕವನ್ನು ನಂಬದ ರೇಣುಕಾಳ ಅಣ್ಣ ನೀನು ಯಾರಾದ್ರೂ ದೊಡ್ಡವರನ್ನು ಕರೆದುಕೊಂಡು ಬಂದು ಪಂಚಾಯ್ತಿ ಮಾಡಿ ಹೆಂಡ್ತಿ ಮಕ್ಕಳನ್ನು ಕರೆದುಕೊಂಡು ಹೋಗು ಅಂತ ಹೇಳಿದ್ದಾನೆ. ಆಯ್ತು ಅಂತ ಹೋದವನು ಇದ್ದಕಿದ್ದಂತೆ ರೇಣುಕಾಳ ಅಣ್ಣನ ಮನೆಗೆ ಜೂನ್ 12ರ ಸಂಜೆ 5 ಗಂಟೆ ಸುಮಾರಿಗೆ ಬಂದು ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡನೇ ಮಗಳು ಅಕ್ಷಿತಾ ಹಾಗೂ ಮೂರನೇ ಮಗು ರಮ್ಯಾಳನ್ನು ಕರೆದುಕೊಂಡು ಅಂಗಡಿಗೆ ಹೋಗಿದ್ದಾನೆ. ಅಂಗಡಿಯ ಬಳಿ ಹೋಗ್ತಿದಂತೆ ಅಕ್ಷಿತಾಳಿಗೆ ಹೊಡೆಯಲು ಆರಂಭಿಸಿದ್ದಾನೆ. ಭಯಗೊಂಡು ಆಕೆ ಮನೆಗೆ ಓಡಿ ಬಂದಿದ್ದಾಳೆ. ಬಳಿಕ ರಮ್ಯಾಳನ್ನು ಗ್ರಾಮದ ಹೊರಹೊಲಯದಲ್ಲಿರುವ ತನ್ನ ಜಮೀನಿನ ಬಳಿ ಕರೆದುಕೊಂಡು ಹೋಗಿ ಮಗುವನ್ನು ಸಾಯಿಸಿ, ಏನೂ ತಿಳಿದವನಂತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದಾನೆ.

Bengaluru: ಐಟಿಬಿಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರಿಯದಳ ದೌಡು

ಮಗು ಕಾಣದೆ ಹೆಚ್ಚಿನ ಸಮಯವಾಯ್ತು ಅಂತ ಮನೆಯವರು ವಿಚಾರಿಸಿದಾಗ ಜಮೀನಲ್ಲಿರುವ ಬಾವಿಯ ಪಕ್ಕದಲ್ಲಿ ಮಗು ರಮ್ಯಾಳ ಶವ ಪತ್ತೆಯಾಗಿದೆ. ವಿಷಯ ಗ್ರಾಮದಲ್ಲಿ ತಿಳಿಯುತ್ತಿದಂತೆ ಪಾಪಿ ಗಂಗಾಧರ ತಲೆಮರಿಸಿಕೊಂಡಿದ್ದು, ನಂಗಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಲೆ ಬೀಸಿದ್ದಾರೆ. ಇತ್ತ ತಾಯಿ ರೇಣುಕಾ ಹಾಗೂ ಕುಟುಂಬಸ್ಧರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಗಂಗಾಧರ ಹಾಗೂ ರೇಣುಕಾ ಇಬ್ಬರು ಒಂದೇ ಗ್ರಾಮದವವರು ಆಗಿರೋದ್ರಿಂದ ಒಬ್ಬರನೊಬ್ಬರು ಪ್ರೀತಿಸಿ 9 ವರ್ಷಗಳ ಹಿಂದೆ ಮದುವೆ ಆಗಿದ್ದಾರೆ. 6 ವರ್ಷ ವಯಸ್ಸಿನ ರಕ್ಷಿತಾ,4 ವರ್ಷ ವಯಸ್ಸಿನ ಅಕ್ಷಿತಾ ಹಾಗೂ ಈಗ ಸತ್ತು ಹೋಗಿರುವ 2 ವರ್ಷ ವಯಸ್ಸಿನ ರಮ್ಯಾ ಅನ್ನೋ ಮಕ್ಕಳು ಇದ್ದಾರೆ. ಮದುವೆಯ ಆರಂಭದಲ್ಲಿ ಸರಿಯಾಗಿ ಬಾಳ್ವೆ ಮಾಡ್ತಿದ್ದ ಗಂಗಾಧರ ಬಳಿಕ ಗ್ರಾಮದ ಅಂಗಡಿಗಳಲ್ಲಿ ಅಕ್ರಮವಾಗಿ ಸಿಗುವ ಎಣ್ಣೆ ಕುಡಿಯುತ್ತಾ ಸದಾ ಗುಂಗಿನಲ್ಲಿ ಇರ್ತಿದ್ದ. ಸಂಜೆ ಆಗ್ತಿದಂತೆ ಕೂಲಿ ಕೆಲಸ ಮಗಿಸಿಕೊಂಡು ಬಂದು ಹೆಂಡ್ತಿ ಮಕ್ಕಳನ್ನು ಹೋಡಿಯೋದು ಇವನ ಕೆಲಸ ವಾಗಿತ್ತು. ವರ್ಷದ ಹಿಂದೆ ಅಷ್ಟೇ ರೇಣುಕಾಳ ಕಿವಿಗೆ ಬಲವಾಗಿ ಹೊಡೆದು ಆಕೆಗೆ ಈಗಲೂ ಕಿವಿ ಕೇಳಿಸ್ತಿಲ್ಲ.

ಹೀಗಾಗಿ ನಿನ್ನ ಸಹವಾಸವೇ ಬೇಡ ಎಂದು ತಾನೇ ಕೂಲಿ ಕೆಲಸಕ್ಕೆ ಹೋಗುತ್ತಾ ಗ್ರಾಮದಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಮೂರು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಳು. ಆದ್ರೆ ಕುಡಿದ ಮತ್ತಿನಲ್ಲಿ ಏನೂ ಕಾರಣವೂ ಇಲ್ಲದೆ ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡು ವರ್ಷ ವಯಸ್ಸಿನ ಮಗಳು ರಮ್ಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಗುವಿನ ಎದೆಯ ಮೇಲೆ ಬಲವಾಗಿ ತುಳಿದು ಸಾಯುವವರೆಗೂ ಕೈಯಲ್ಲಿ ಗುದ್ದಿ ವಿಕೃತಿ ಮೆರೆದಿದ್ದಾನೆ. ಏನೂ ತಿಳಿದವನಂತೆ ಗ್ರಾಮಕ್ಕೆ ವಾಪಸ್ಸು ಆಗಿದ್ದ ಗಂಗಾಧರ ಸಂಜೆ ಮಗುವನ್ನು ಕರೆದುಕೊಂಡು ಹೋಗೋದನ್ನು ಗ್ರಾಮಸ್ಥರು ನೋಡಿದ್ರಿಂದ ಮನೆಯವರಿಗೆ ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಏನಾದ್ರು ಜಮೀನಿನಲ್ಲೇ ಮಗುವನ್ನು ಮಲಗಿಸಿ ಬಂದಿರಬೇಕು ಅಂತ ಅನುಮಾನದಲ್ಲಿ ಹುಡುಕಿದಾಗ ಮಗು ಸತ್ತು ಬಿದ್ದಿತ್ತು, ಇರುವೆಗಳು ಮಗುವಿನ ಕಿವಿ ಹಾಗೂ ಬಾಯಿಗೆ ಮುತ್ತಿಕೊಂಡಿದನ್ನು  ನೋಡಿ ಮಗುವಿನ ತಾಯಿ ಹಾಗೂ ಅಣ್ಣ ಗೋಳಾಡುತ್ತಿರೋದು, ಎಂತಹವರ ಕಣ್ಣಾಲಿಗಳು ಒದ್ದೆಯಾಗುತ್ತೆ.

ಒಟ್ಟಾರೆ ಏನೂ ಕಾರಣವೇ ಇಲ್ಲದೆ ಸ್ವಂತ ಮಗುವನ್ನೇ ಕೊಲೆ ಮಾಡಿ ವಿಕೃತಿ ಮೆರೆದಿರುವ ಪಾಪಿ ಗಂಗಾಧರ ಇದೀಗ ತಲೆ ಮರೆಸಿಕೊಂಡಿದ್ದಾನೆ. ಪ್ರೀತಿಸಿ ಮದುವೆಯಾಗಿದ್ರು ಸಹ ಗಂಡನಿಂದ ನೆಮ್ಮದಿ ಸಿಗದೆ ಮೊದಲೇ ನೋವಿನಲ್ಲಿದ್ದ ಪತ್ನಿಗೆ ಇದೀಗ ತನ್ನ ಕಂದಮನನ್ನು ಕಣ್ಮುಂದೆ ಕಳೆದುಕೊಂಡು ದಿಕ್ಕು ತೋಚದಂತಿದ್ದಾಳೆ, ಇನ್ನುಳಿದ ಇಬ್ಬರು ಪುಟಾಣಿ ಮಕ್ಕಳ ಕಥೆ ಮುಂದೇನು ಅನ್ನೋ ಯೋಚನೆಯಲ್ಲಿದ್ದಾಳೆ. ಗಂಗಾಧರನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ಎಂದು ಪತ್ನಿ ಹಾಗೂ ಕುಟುಂಬಸ್ಥರು ಆಗ್ರಹ ಮಾಡ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!