ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರಿನ ಯುವಕ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.
ಉತ್ತರಕನ್ನಡ (ಜೂ.13): ಸಮುದ್ರದ ಅಲೆಗೆ ಸಿಲುಕಿ ಮತ್ತೋರ್ವ ಯುವಕ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪವನ್ ನಾಯ್ಕ್ (20) ಸಾವಿಗೀಡಾದ ವಿದ್ಯಾರ್ಥಿಯಾಗಿದ್ದಾನೆ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿರುವ ಪವನ್ ನಾಯ್ಕ್ ಸೇರಿ ಆರು ಜನ ಸ್ನೇಹಿತರು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಪವನ್ ಸೇರಿ ಮೂವರು ಸಮುದ್ರದಲ್ಲಿ ಈಜಲು ಇಳಿದಿದ್ದಾಗ ಅಲೆಗಳಿಗೆ ಸಿಲುಕಿದರು. ಇಬ್ಬರನ್ನು ರಕ್ಷಣೆ ಮಾಡಲಾಯ್ತಾದರೂ ಪವನ್ ಸಾವನ್ನಪ್ಪಿದ್ದಾನೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿನ್ನೆಯಷ್ಟೇ ಸಂತೋಷ್ ಹೆಸರಿನ ಪ್ರವಾಸಿಗ ಮುರುಡೇಶ್ವರ ಕಡಲಿನಲ್ಲಿ ನಾಪತ್ತೆಯಾಗಿದ್ದ. ಆತನ ಪತ್ತೆಗೆ ಮುನ್ನವೇ ಇದೀಗ ಮತ್ತೊಂದು ದುರ್ಘಟನೆ ನಡೆದಿದೆ. ಸಂತೋಷ್ ಕಲಘಟಗಿ ಎಂಬಾತ ಸಮುದ್ರ ಪಾಲಾಗಿದ್ದ, ಗೆಳೆಯರಾದ ಸಂತೋಷ್ ಹುಲಿಗುಂಡ, ಹಸನ್, ಸಂಜೀವ ಹೆಬ್ಬಳ್ಳಿ ಜತೆ ಮುರುಡೇಶ್ವರಕ್ಕೆ ಆಗಮಿಸಿದ್ದ ಸಮುದ್ರಕ್ಕಿಳಿದಿದ್ದ ಈ ನಾಲ್ವರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದರು. ಲೈಫ್‌ಗಾರ್ಡ್ ಸಿಬ್ಬಂದಿಯಿಂದ ಮೂವರ ರಕ್ಷಣೆ, ಓರ್ವ ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಮೃತದೇಹ ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ.
undefined
ಕೊಂಕಣ ರೈಲ್ವೆ-ಭಾರತೀಯ ರೈಲ್ವೆಗೆ ವಿಲೀನಕ್ಕೆ ಸಾರ್ವಜನಿಕರ ಬೆಂಬಲ, ವಿಲೀನದ
ಪ್ರವಾಸಿಗರನ್ನು ಸಮುದ್ರಕ್ಕಿಳಿಯದಂತೆ ತಿಳಿಸಿದ್ರೆ ಲೈಫ್ ಗಾರ್ಡ್‌ಗಳ ಮೇಲೆಯೇ ಹಲ್ಲೆ ಯತ್ನ ನಡೆದಿದೆ. ಲೈಫ್ ಗಾರ್ಡ್‌ಗಳ ಜತೆ ಜಗಳವಾಡಿ ಹಲ್ಲೆಗೆ ಯತ್ನಿಸುವ ಪ್ರವಾಸಿಗರ ವಿಡಿಯೋ ವೈರಲ್ ಆಗಿದೆ.
ಚಂಡಮಾರುತ ಎಚ್ಚರಿಕೆ ನೀಡಿದರೂ, ನಿರ್ಲಕ್ಷ್ಯ ವಹಿಸುತ್ತಿರುವ ಪ್ರವಾಸಿಗರು
ಬಿಫರ್ ಜಾಯ್ ಚಂಡಮಾರುತ ಇಫೆಕ್ಟ್ ಹಿನ್ನೆಲೆ ಸಮುದ್ರದಲ್ಲಿ ದಿನದಿಂದ ದಿನಕ್ಕೆ ಅಲೆಗಳ ಅಬ್ಬರ ಹೆಚ್ಚಾಗ್ತಿದೆ , ಸಮುದ್ರ ಕೊರೆತದ ಭೀತಿ ಎದುರಾಗಿದೆ. ನಾಲ್ಕರಿಂದ ಐದು ಅಡಿಗಳಷ್ಟು ಅಲೆಗಳ ಅಬ್ಬರ ಏರುತ್ತಿದೆ. ಇನ್ನೆರಡು ದಿನಗಳ ಕಾಲ ಚಂಡಮಾರುತ ಎಫೆಕ್ಟ್ ಕಾಡಲಿದೆ. ರಾತ್ರಿ ವೇಳೆ ಭೀಕರ ಅಲೆಗಳು ತೀರ ಪ್ರದೇಶದವರೆಗೆ ನುಗ್ಗುತ್ತಿದೆ. ರಾಕ್ಷಸ ಅಲೆಗಳಿಗೆ ಹೆದರಿ ಸಮುದ್ರದಿಂದ 100ಮೀಟರ್ ದೂರದಲ್ಲಿ ಮೀನುಗಾರರು ದೋಣಿಗಳನ್ನು ಕಟ್ಟಿದ್ದಾರೆ. ಸಾಂಪ್ರದಾಯಿಕ ದೋಣಿಗಳು ಕೊಚ್ಚಿ ಹೋಗುವ ಸಾಧ್ಯತೆಯಿರೋದ್ರಿಂದ ಸಾಕಷ್ಟು ದೂರದಲ್ಲಿ ದೋಣಿಗಳನ್ನು ಮೀನುಗಾರರು ಕಟ್ಟಿದ್ದಾರೆ. ಸದ್ಯಕ್ಕೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸದಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದಾರೆ. ಪ್ರವಾಸಿಗರು ಕೂಡಾ ಸಮುದ್ರಕ್ಕಿಳಿಯದಂತೆ ಪ್ರವಾಸೋದ್ಯಮ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಚರಿಕೆ ನೀಡಿದ್ದರೂ ಕ್ಯಾರೇ ಅನ್ನದೇ ಮತ್ತೆ ಮತ್ತೆ ಸಮುದ್ರಕ್ಕಿಳಿದು ನಿರ್ಲಕ್ಷ್ಯ ವಹಿಸುತ್ತಿರುವ ಪ್ರವಾಸಿಗರು.
Bengaluru: ಐಟಿಬಿಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರಿಯದಳ ದೌಡು
ಸಾರಿಗೆ ಸಂಸ್ಥೆ ಬಸ್ ಟಯರ್ ಬ್ಲಾಸ್ಟ್, ಚಾಲಕ ಸೇರಿ ನಾಲ್ವರಿಗೆ ಗಂಭೀರ
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಟಯರ್ ಬ್ಲಾಸ್ಟ್ ಆಗಿ ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಗಾಯಾಳುಗಳನ್ನು ಗಣೇಶಗುಡಿ ಕೆಪಿಸಿಸಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸರಕಾರಿ ಬಸ್ 54 ಜನರು ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಬಸ್ ನ ಬ್ರೇಕ್ ವೈಫಲ್ಯ ಹಾಗೂ ಎರಡು ಟೈರ್‌ಗಳು ಸಿಡಿದು ಭಾರೀ ಅವಘಡ ಸಂಭವಿಸಿದೆ. ಬಸ್ ಬಜಾರಕೋಣಂಗ- ರಾಮನಗರದ ಮೂಲಕ ಜೋಯಿಡಾಕ್ಕೆ ತೆರಳುತ್ತಿತ್ತು.