
ಬೆಂಗಳೂರು (ನ.21): ಅಪ್ರಾಪ್ತ ಮಗಳನ್ನು ಚುಡಾಯಿಸಿದ್ದಕ್ಕೆ ಕುಪಿತಗೊಂಡ ತಂದೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಅಶೋಕ ನಗರದ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ.
ಡೇವಿಡ್ ಕೊಲೆಯಾದ ದುರ್ದೈವಿ. ಬಾಲಕಿಯ ತಂದೆ ಮಂಜುನಾಥ ಕೊಲೆ ಮಾಡಿದ ಆರೋಪಿ. ವಿನಾಯಕನಗರ ನಿವಾಸಿಯಾಗಿರೋ ಡೇವಿಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮಂಜುನಾಥ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!
ಮೃತ ಡೇವಿಡ್ ತನ್ನನ್ನು ಲವ್ ಮಾಡುವಂತೆ ಮಂಜುನಾಥರ ಅಪ್ರಾಪ್ತ ಮಗಳ ಹಿಂದೆ ಬಿದ್ದು ದಿನಾಲು ಪೀಡಿಸುತ್ತಿದ್ದ. ಇದು ಮಂಜುನಾಥಗೆ ಗೊತ್ತಾಗಿ ಮೊದಲಿಗೆ ಡೇವಿಡ್‌ಗೆ ಎಚ್ಚರಿಕೆ ನೀಡಿದ್ದಾನೆ. ಆದರೆ ಎಚ್ಚರಿಕೆ ನೀಡಿದ್ದರೂ ಚುಡಾಯಿಸುವುದು, ಲವ್ ಮಾಡುವಂತೆ ಪೀಡಿಸುವುದು ಮುಂದುವರಿಸಿದ್ದ ಡೇವಿಡ್. ಈ ವಿಚಾರವಾಗಿ ಡೇವಿಡ್ ಹಾಗೂ ಮಂಜುನಾಥ ನಡುವೆ ಗಲಾಟೆ ಆಗಿತ್ತು. ಬಳಿಕ ಕಳೆದ ರಾತ್ರಿ ಮದುವೆ ವಿಷಯ ಮಾತನಾಡೋಣಾ ಬನ್ನಿ ಎಂದು ಬಾಲಕಿ ತಂದೆ ಮಂಜುನಾಥಗೆ ಕರೆ ಮಾಡಿ ಕರೆದಿದ್ದ ಡೇವಿಡ್.
ಅದರಂತೆ ಸ್ಥಳಕ್ಕೆ ಬಂದಿದ್ದ ಮಂಜುನಾಥ. ಡೇವಿಡ್ ಹಾಗೂ ಬಾಲಕಿ ತಂದೆ ಮಂಜುನಾಥ್ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕುಪಿತಗೊಂಡ ಮಂಜುನಾಥ. ಮೊದಲೇ ಮುಗಿಸಲು ಸಿದ್ಧವಾಗಿ ಬಂದಂತೆ ಚಾಕು ಹೊರತೆಗೆದು ಡೇವಿಡ್‌ಗೆ ಇರಿದಿದ್ದಾನೆ. ಬಳಿಕ ಕೆಳಗೆ ಬಿದ್ದ ಮೇಲೆ ಡೇವಿಡ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಮಂಜುನಾಥ.
ನಿನ್ನೆ ರಾತ್ರಿ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿರುವ ಘಟನೆ. ಸದ್ಯ ಆರೋಪಿ ಮಂಜುನಾಥ್ ಬಂಧಿಸಿರುವ ಪೊಲೀಸರು. ಸ್ಥಳಕ್ಕೆ ಅಶೋಕ್ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು.
ಬೆಂಗಳೂರು ವಿವಿ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ; ವಿದ್ಯಾರ್ಥಿಗಳು ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ