ಅಣ್ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಆರೋಪಿ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ಮುನಿಯ ಪೊಲೀಸ್ 112 ವಾಹನವನ್ನು ಓಡಿಸಿಕೊಂಡು ಹೋಗಿದ್ದ ಆರೋಪಿ.
ತುಮಕೂರು (ನ.21): ಅಣ್ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಆರೋಪಿ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ
ಮುನಿಯ ಪೊಲೀಸ್ 112 ವಾಹನವನ್ನು ಓಡಿಸಿಕೊಂಡು ಹೋಗಿದ್ದ ಆರೋಪಿ. ತಡರಾತ್ರಿ ಗ್ರಾಮದ ಸಹೋದರಿಬ್ಬರ ನಡುವೆ ಗಲಾಟೆ ಆಗ್ತಿತ್ತು. ಈ ವೇಳೆ ಆರೋಪಿ ಸಹೋದರ 112 ಕ್ಕೆ ಕರೆ ಮಾಡಿದ್ದ. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ ಬಂದಿದ್ದ ಪೊಲೀಸರು. ಈ ವೇಳೆ 112 ವಾಹನದ ಹಿಂಬದಿಯ ಗಾಜು ಒಡೆದಿದ್ದ ಆರೋಪಿ ಮುನಿಯ. ಗಾಜು ಒಡೆದಿದ್ದಕ್ಕೆ ಕಾರು ನಿಲ್ಲಿಸಿ ಹಿಂಬದಿ ಗಾಜು ನೋಡಲು ಹೋದ ಪೊಲೀಸರು. ಈ ವೇಳೆ ಕಾರಿನೊಳಗೆ ಕುಳಿತು ವೇಗವಾಗಿ ಕಾರು ಓಡಿಸಿಕೊಂಡು ಎಸ್ಕೇಪ್ ಆದ ಆರೋಪಿ. ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಕೊನೆಗೂ 112 ವಾಹನ ಪತ್ತೆ ಹಚ್ಚಿದ ಪೊಲೀಸರು. ತುಮಕೂರು ತಾಲೂಕಿನ ಹೆಬ್ಬೂರು ಬಳಿ ಬಿಟ್ಟು ಪರಾರಿಯಾಗಿದ್ದ ಆರೋಪಿ ಮುನಿಯ.
undefined
ಮಗಳನ್ನ ಹೊತ್ತೊಯ್ದಿದಲ್ಲದೆ ಮನೆ ವಸ್ತುಗಳನ್ನೂ ಕದ್ದೊಯ್ದ ಅಳಿಯನ ಬಂಧನ!
ಸದ್ಯ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಪೊಲೀಸರು. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ಈ ಘಟನೆ ನೋಡಿದಾಗ ಇಲ್ಲಿ ಪೊಲೀಸರ ನಿರ್ಲಕ್ಷ್ಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಆರೋಪಿಯೊಬ್ಬ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಹೋಗಿ ತಪ್ಪಿಸಿಕೊಳ್ಳುತ್ತಾನೆಂದರೆ ಇನ್ನು ನಮ್ಮ ಪೊಲೀಸ್ ಇಲಾಖೆ ಎಷ್ಟು ಚುರುಕಾಗಿದೆ ಎಂಬ ಅನುಮಾನ ಮೂಡುತ್ತಿದೆ.
ಮದುವೆಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳೊಂದಿಗೆ ಅಸಭ್ಯ ವರ್ತನೆ; ಮಚ್ಚಿನಿಂದ ಹಲ್ಲೆ!