ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!

Published : Apr 05, 2023, 04:59 PM IST
ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!

ಸಾರಾಂಶ

ಕೋಳಿ ಪದಾರ್ಥದ ವಿಚಾರವಾಗಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಕೋಳಿ ಸಾರು ಖಾಲಿ ಆಗಿದ್ದಕ್ಕೆ ತಂದೆ ಮಗನ ಮಧ್ಯೆ ಜಗಳ ಆರಂಭವಾಗಿತ್ತು.

ಸುಳ್ಯ (ಏ.5): ಕ್ಷುಲ್ಲಕ ಕಾರಣಕ್ಕಾಗಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದ. ಕ ಜಿಲ್ಲೆಯ ಸುಳ್ಯ ತಾಲೂಕಿನ  ಗುತ್ತಿಗಾರು ಗ್ರಾಮದಲ್ಲಿ ನಡೆದಿದೆ.  ಇಲ್ಲಿನ ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಹಾಗೂ ಮಗ ಶಿವರಾಮ ನಡುವೆ ಕೋಳಿ ಪದಾರ್ಥದ ವಿಚಾರವಾಗಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಮಗ ಶಿವರಾಮ ಕೂಲಿ ಕೆಲಸ ಮುಗಿಸಿ, ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿಯಾಗಿತ್ತು. ಕೋಳಿ ಪದಾರ್ಥದ ಖಾಲಿಯಾದ ವಿಚಾರವಾಗಿ ಮನೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಮಗ ಶಿವರಾಮ ಜಗಳ ಪ್ರಾರಂಭಿಸಿದ್ದ, ನನಗೆ ಈಗಲೇ ಪದಾರ್ಥ ಮಾಡಿಕೊಡಬೇಕೆಂದು ಮನೆಯಲ್ಲಿ ಸಾಕಿದ್ದ ಕೋಳಿಯನ್ನು ಹಿಡಿಯಲು ಮುಂದಾದ. ಈ ವೇಳೆ ತಂದೆ ಹಾಗೂ ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ  ತಂದೆ ಶೀನ ಮಗ ಶಿವರಾಮನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.  ಬಲವಾದ ಏಟಿನಿಂದ ತಲೆ ಒಡೆದು ಪುತ್ರ ಶಿವರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಕೊಲೆ ಆರೋಪಿ ಶೀನನನ್ನ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನ ಶಿವರಾಮ  ಅಗಲಿದ್ದಾನೆ.

ಭರ್ತಿಯಿಂದ ಇರಿತು ಕೊಲೆ: ಆರೋಪಿ ಬಂಧನ
ನಾಗಮಂಗಲ: ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ವ್ಯಕ್ತಿಯನ್ನು ಭರ್ಜಿಯಿಂದ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಟಿ.ಬಿ.ಬಡಾವಣೆಯ ಸುಭಾಷ್‌ನಗರದ ವಾಸಿ ಮಂಜುನಾಥ ಅಲಿಯಾಸ್‌ ಡಿಂಗ್ರಿ ಮಂಜ (25)ಯನ್ನು ಈತನ ಭಾವ ಆನಂದ ಕಳೆದ ಶನಿವಾರ ತಡರಾತ್ರಿ 12ರ ಸಮಯದಲ್ಲಿ ಭರ್ಜಿಯಿಂದ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು.

ಗೋ ಸಾಗಾಟಗಾರನ ಕೊಲೆ ಆರೋಪ, ತಲೆ ಮರೆಸಿಕೊಂಡಿದ್ದ ಪುನೀತ್ ‌ಕೆರೆಹಳ್ಳಿ ಮತ್ತು

ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣ ಠಾಣೆಯ ಪೊಲೀಸರು ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸುತ್ತಿದ್ದರು. ಆರೋಪಿ ಆನಂದನ ಭದ್ರಾವತಿಯಿಂದ ತಾಲೂಕಿನ ಬೆಳ್ಳೂರು ಕ್ರಾಸ್‌ಗೆ ಸಾರಿಗೆ ಬಸ್‌ನಲ್ಲಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸೋಮವಾರ ಬೆಳಗ್ಗೆ 6.30ರ ವೇಳೆಯಲ್ಲಿ ಆರೋಪಿ ಆನಂದ ಬಸ್‌ ಇಳಿಯುತ್ತಿದ್ದಂತೆ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ನಾಗಮಂಗಲ ಪಟ್ಟಣ ಠಾಣೆಯ ಪೊಲೀಸರ ತಂಡಕ್ಕೆ ಜಿಲ್ಲಾ ಎಸ್ಪಿ ಎನ್‌.ಯತೀಶ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ

ಕುಖ್ಯಾತ ಪಾತಕಿ ದೀಪಕ್‌ ಬಾಕ್ಸರ್‌ ಮೆಕ್ಸಿಕೋದಲ್ಲಿ ದಿಲ್ಲಿ ಪೊಲೀಸರ ವಶಕ್ಕೆ
ನವದೆಹಲಿ: ದೆಹಲಿಯ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಕುಖ್ಯಾತಿಯ ದೀಪಕ್‌ ಬಾಕ್ಸರ್‌ನನ್ನು ದೆಹಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಲ್ಲಿ ಪೊಲೀಸರು ವಿದೇಶವೊಂದಕ್ಕೆ ತೆರಳಿ ಅಲ್ಲಿ ಪಾತಕಿ ಬಂಧಿಸಿದ ಮೊದಲ ಪ್ರಕರಣ ಇದಾಗಿದೆ. ದೀಪಕ್‌ ದೆಹಲಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಅಮಿತ್‌ ಗುಪ್ತಾ ಕೊಲೆ ಮಾಡಿ ಬಳಿಕ ಮೆಕ್ಸಿಕೋಗೆ ಪರಾರಿಯಾಗಿದ್ದ. ಇದೀಗ ಈತನನ್ನು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ನೆರವಿನೊಂದಿಗೆ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆತನನ್ನು ಭಾರತಕ್ಕೆ ಕರೆ ತರುವ ಸಾಧ್ಯತೆ ಇದೆ. ಈತ ದೆಹಲಿಯ ಕುಖ್ಯಾತ ಗೋಗಿ ಪಡೆಯ ನಾಯಕನಾಗಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ