ಚೆನ್ನೈ ದೇಗುಲದ ಬಳಿಯ ಟ್ಯಾಂಕ್‌ನಲ್ಲಿ ಮುಳುಗಿ ಐವರ ದಾರುಣ ಸಾವು: ಮೃತದೇಹಗಳು ಪತ್ತೆ

By BK Ashwin  |  First Published Apr 5, 2023, 4:40 PM IST

ಪೂಜಾರಿಗಳೊಂದಿಗೆ ಐವರು ಯುವಕರು ಟ್ಯಾಂಕ್‌ಗೆ ಪ್ರವೇಶಿಸಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಸರ್ಕಲ್‌ ಅನ್ನು ರಚಿಸಿದ್ದರು. ಆದರೆ ಅವರಲ್ಲಿ ಒಬ್ಬರು ಮುಳುಗಿದರು. ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ ಇನ್ನೂ ನಾಲ್ವರು ಆಳಕ್ಕೆ ಹೋದರು. ಆದರೆ ಅವರು ಕೂಡ ನೀರಿನಲ್ಲಿ ಮುಳುಗಿದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. 


ಚೆನ್ನೈ (ಏಪ್ರಿಲ್ 5, 2023): ತಮಿಳುನಾಡಿನ ರಾಜಧಾನಿ ಚೆನ್ನೈನ ದೇವಸ್ಥಾನದ ಬಳಿಯ ಸಾರ್ವಜನಿಕ ಟ್ಯಾಂಕ್‌ನಲ್ಲಿ ಮುಳುಗಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಋತುಮಾನದ ಆಚರಣೆಯ ಸಂದರ್ಭದಲ್ಲಿ ಈ ದುರಂತ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. 

ಪೂಜಾರಿಗಳೊಂದಿಗೆ ಐವರು ಯುವಕರು ಟ್ಯಾಂಕ್‌ಗೆ ಪ್ರವೇಶಿಸಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಸರ್ಕಲ್‌ ಅನ್ನು ರಚಿಸಿದ್ದರು. ಆದರೆ ಅವರಲ್ಲಿ ಒಬ್ಬರು ಮುಳುಗಿದರು. ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ ಇನ್ನೂ ನಾಲ್ವರು ನೀರಿನ ಆಳಕ್ಕೆ ಹೋದರು. ಆದರೆ ಅವರು ಕೂಡ ನೀರಿನಲ್ಲಿ ಮುಳುಗಿದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಮೃತಪಟ್ಟ ಐವರೂ ಸಹ ಯುವಕರು ಎಂದೂ ಹೇಳಲಾಗಿದೆ. 

Tap to resize

Latest Videos

ಇದನ್ನು ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ

ತಮಿಳುನಾಡಿನ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಭಕ್ತರು ಪಂಗುಣಿ ಆಚರಣೆಯ ಅಂಗವಾಗಿ ಧಾರ್ಮಿಕ ಕ್ರಿಯೆಗಳಿಗಾಗಿ ತೊಟ್ಟಿಯಲ್ಲಿ ಜಮಾಯಿಸಿದಾಗ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.  "ಮೊದಲಿಗೆ ಒಬ್ಬರು ಜಾರಿಬಿದ್ದರು, ಮತ್ತು ನಂತರ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಉಳಿದ ನಾಲ್ವರೂ ನೀರಿನಲ್ಲಿ ಮುಳುಗಿದರು. ಏನು ತಪ್ಪಾಗಿದೆ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ.

ಇನ್ನು, ಎಲ್ಲಾ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಈ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಟ್ಯಾಂಕ್‌ನಲ್ಲಿ ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ವೆಗೆ ಗಿಫ್ಟ್‌ ಕೊಟ್ಟ ಮ್ಯೂಸಿಕ್‌ ಸಿಸ್ಟಂನಲ್ಲಿ ಬಾಂಬ್‌..! ವಧುವಿನ ಎಕ್ಸ್ ಬಾಯ್‌ಫ್ರೆಂಡ್‌ ಅಂದರ್‌

ಈ ಮಧ್ಯೆ,  ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಮಿಳುನಾಡು ಗ್ರಾಮೀಣ ಕೈಗಾರಿಕಾ ಸಚಿವ ಟಿ.ಎಂ. ಅನ್ಬರಸನ್ "ಅವರು ವಿಧಿ ವಿಧಾನಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೆ, ಇದನ್ನು ತಪ್ಪಿಸಬಹುದಿತ್ತು. ಇದು ತುಂಬಲಾರದ ನಷ್ಟ" ಎಂದು ಹೇಳಿದ್ದಾರೆ. ಈ ಮಧ್ಯೆ, ನೀರಿನಲ್ಲಿ ಮುಳುಗಿದ ಐವರೂ ಚೆನ್ನೈನ ಮೂರು ವಿಭಿನ್ನ ಪ್ರದೇಶಗಳಿಗೆ ಸೇರಿದವರು ಎಂದೂ ಪೊಲೀಸರು ಹೇಳಿದ್ದಾರೆ. 

ಈ ಘಟನೆ ಸಂಬಂಧ ಹಿರಿಯ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ದೇವಸ್ಥಾನಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಶವಗಳನ್ನು ಹೊರತೆಗೆದು ಶವಪರೀಕ್ಷೆಗಾಗಿ ಕ್ರೋಂಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹಾಗೂ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಮಿಳುನಾಡಿನ ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್‌ ಸೈಫಿ ಬಂಧನ

click me!