
ಮೈಸೂರು (ನ.30): ಮೊಬೈಲ್ ಬಳಸಿದ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.
ಉಮೇಜ್(23) ಕೊಲೆಯಾದ ದುರ್ದೈವಿ. ಅಸ್ಲಂ ಪಾಷ ಕೊಲೆ ಮಾಡಿದ ತಂದೆ.
ತಾಯಿಯ ಮೊಬೈಲ್ ಅನುಮತಿಯಿಲ್ಲದೆ ಬಳಸಿದ್ದ ಮಗ. ತಾಯಿಯನ್ನು ಕೇಳದೆ ಮೊಬೈಲ್ ಬಳಸಿದ್ದಕ್ಕೆ ಮಗನೊಂದಿಗೆ ಜಗಳ ತೆಗೆದಿದ್ದ ಅಸ್ಲಂ ಪಾಷ. ತಂದೆ-ಮಗನ ನಡುವೆ ಮಾತಿನ ಚಕಮಕಿ ವಿಕೋಪ ತಿರುಗಿ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ವೇಳೆ ತಂದೆ ಅಸ್ಲಂಪಾಷ ಕೋಪದಿಂದ ಮಗ ಉವೇಜ್‌ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!
ಕ್ಷುಲ್ಲಕ ಕಾರಣಕ್ಕೆ ಮಗನನ್ನ ಕೊಂದ ತಂದೆ ಅಸ್ಲಂಪಾಷನನ್ನ ಬಂಧಿಸಿ ವಿಚಾರಣೆಗೊಳಪಡಿಸಿರುವ ಎನ್‌ಆರ್ ಪೊಲೀಸರು. ಕೊಲೆ ಪ್ರಕರಣ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.
ಹಣಕಾಸು ವಿಚಾರದಲ್ಲಿ ವೈಮನಸ್ಸು; ಕೊಲೆಯಲ್ಲಿ ಅಂತ್ಯ:
ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪ ಹಣಕಾಸಿನ ವಿಷಯದಲ್ಲಿ ಆದ ಗಲಾಟೆಯಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಮಂಗಳವಾರ ರಾತ್ರಿ ಟಿಪ್ಪರ್ ಚಲಾಯಿಸಿಕೊಂಡು ಬಂದು ಮೂವರ ಮೇಲೆ ಹಾಯಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಆರೊಳ್ಳಿ ಸೈಕಲ್ ಅಂಗಡಿ ಹತ್ತಿರ ಹಡಿನಬಾಳದ ವಿನಾಯಕ ನಾರಾಯಣ ಭಟ್ ಹಾಗೂ ಜನಾರ್ದನ ಕೇಶವ ನಾಯ್ಕ ನಡುವೆ ಹಣದ ವ್ಯವಹಾರದಲ್ಲಿ ಜಗಳವಾಗಿತ್ತು. ಆನಂತರ ಅದೇ ವಿಷಯಕ್ಕೆ ಆರೋಪಿ ವಿನಾಯಕ ಭಟ್ ಕೋಪದಿಂದ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದಾನೆ ಇದೇ ವೇಳೆ ಅರೇಅಂಗಡಿ ಜನತಾ ಕಾಲನಿ ಹತ್ತಿರ ರಸ್ತೆಯ ಪಕ್ಕದಲ್ಲಿದ ಓಲ್ವಿನ ಲೋಬೋ ಎಂಬಾತನ ಆಟೋ ರಿಕ್ಷಾದ ಹತ್ತಿರ ಜನಾರ್ದನ ನಾಯ್ಕ ಹಾಗೂ ವಸಂತ ನಾಯ್ಕ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಆರೋಪಿ ವಿನಾಯಕ್ ಭಟ್ ಟಿಪ್ಪರ್ ಹಾಯಿಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಆಟೋ ಜಖಂ ಆಗಿದ್ದು, ಆಟೋ ಚಾಲಕ ಓಲ್ವಿನ್ ರವಿ ಲೋಬೋ ತಲೆ ಭಾಗಕ್ಕೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!
ವಸಂತ ಹಾಗೂ ಜನಾರ್ದನ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ನೆರೆ ಜಿಲ್ಲೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ವಿನಾಯಕ ಭಟ್ ವಿರುದ್ಧ ವಸಂತ ನಾಯ್ಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ