
ಬೀದರ್(ನ.30): ಕಾಂಗ್ರೆಸ್ ಮುಖಂಡನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಹಣಮಂತವಾಡಿ ಬಳಿ ನಿನ್ನೆ(ಬುಧವಾರ) ನಡೆದಿದೆ.
ಉಮಾಪತಿ ಎಂಬುವರಿಂದ 3.5 ಕೋಟಿ ರೂಪಾಯಿ ಹಣವನ್ನ ಕಾಂಗ್ರೆಸ್ ಮುಖಂಡ ಗುಂಡು ರೆಡ್ಡಿ ಸುಲಿಗೆ ಮಾಡಿದ್ದಾರೆ. ಉಮಾಪತಿ ಆಂಧ್ರಪ್ರದೇಶದ ತಿರುಪತಿಯಿಂದ ಪಂಡರಾಪುರಕ್ಕೆ ಹೊರಟಿದ್ದರು. ಹಾಲು ಖರೀದಿಸಿದ ರೈತನಿಗೆ ಹಣ ನೀಡಲು ಉಮಾಪತಿ ಹೊರಟ್ಟಿದ್ದರು. ದಾರಿ ಮಧ್ಯೆ 9 ಗಂಟೆ ಸುಮಾರಿಗೆ ಪನ್ನೀರಿ ಪ್ಯಾಕ್ಟರಿ ಹತ್ತಿರ ರಿಫ್ರೆಶ್ ಆಗಲು ಉಮಾಪತಿ ನಿಂತಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಗುಂಡು ರೆಡ್ಡಿ ಸೇರಿ ನಾಲ್ವರ ತಂಡ ದರೋಡೆ ಮಾಡಿದೆ ಎಂದು ಆರೋಪಿಸಲಾಗಿದೆ.
ಕದಿಯಲು ಬಂದು ಗಡದ್ ನಿದ್ದೆಗೆ ಜಾರಿದ ಕಳ್ಳ, 2ನೇ ಎಡವಟ್ಟು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ!
ಗುಂಡು ರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಸಂಜಯರೆಡ್ಡಿ ಸೇರಿ ನಾಲ್ವರು ದರೋಡೆ ಮಾಡಿದ್ದಾರೆ. ಗುಂಡು ರೆಡ್ಡಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಹಣೆಯ ಮೇಲೆ ಪಿಸ್ತೂಲ್ ಇಟ್ಟಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ. ಪಿಸ್ತೂಲ್ ನಿಂದ ಬೆದರಿಸಿ 3.5 ಕೋಟಿ ಹಣ ದೋಚಿಕೊಂಡಿದ್ದಾರೆ.
ಘಟನೆ ನಡೆದ 24 ಗಂಟೆಯಲ್ಲೇ ಪ್ರಕರಣವನ್ನ ಪೊಲೀಸರು ಭೇದಿಸಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಗುಂಡು ರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಸಂಜಯರೆಡ್ಡಿ ವಶಕ್ಕೆ ಪಡೆದು ಮತ್ತೋರ್ವನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಆರೋಪಿಗಳಿಂದ 2. 62 ಕೋಟಿ ಹಣವನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿಗಳ ವಿರುದ್ಧ ಸುಲಿಗೆ, ಕೊಲೆ ಯತ್ನ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ