ಪುತ್ತೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮದ್ಯ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ.
ಮಂಗಳೂರು (ನ.29): ಪುತ್ತೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮದ್ಯ ಮಿಶ್ರಣ ಮಾಡಿ ಕುಡಿಸಿ ಅರೆ ಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ ನಂತರ ಅತ್ಯಾಚಾರ ಮಾಡಿದ ದುರ್ಘಟನೆ ಕಳೆದ ಐದು ದಿನಗಳ ಹಿಂದೆ ನಡೆದಿದೆ.
ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ಇತರರು ಅಪರಿಚಿತರು ಕೊಡುವ ಆಹಾರ, ನೀರು ಅಥವಾ ಪಾನೀಯಗಳನ್ನು ಸೇವನೆ ಮಾಡಬೇಡಿ ಎಂದು ಎಷ್ಟೇ ಎಚ್ಚರಿಕೆ ನೀಡಿದರೂ ಎಚ್ಚರಿಕೆ ವಹಿಸದ ಕ್ಷಣದಲ್ಲಿ ಕೆಲವು ಅವಘಡಗಳು ನಡೆದು ಹೋಗುತ್ತವೆ. ಅದೇ ರೀತಿ ಮಂಗಳೂರಿನ ಪುತ್ತೂರಿನ ಬಸ್ ನಿಲ್ದಾಣದಲ್ಲಿದ್ದ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮದ್ಯ ಮಿಶ್ರಣ ಮಾಡಿ ಕುಡಿಸಿದ್ದಾನೆ. ನಂತರ, ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆಯೇ ಆಕೆಯನ್ನು ಸಾಲ್ಮರ ಎಂಬಲ್ಲಿಗೆ ಕರೆದುಕೊಮಡು ಹೋಗಿ ಅತ್ಯಾಚಾರ ಮಾಡಿ ಬಿಟ್ಟು ಹೋಗಿರುವ ದುರ್ಘಟನೆ ನಡೆದಿದೆ.
Bengaluru ಬಾಯ್‌ಫ್ರೆಂಡ್ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ ಎಂಬಲ್ಲಿ ನಡೆದಿದ್ದ ಘಟನೆ ನಡೆದಿದೆ. ನ.24ರಂದು ಪುತ್ತೂರಿನಲ್ಲಿ ಘಟನೆ ನಡೆದಿದೆ. ಪುತ್ತೂರು ಆರ್ಯಾಪು ಗ್ರಾಮದ ನಿವಾಸಿಯಾದ ಸಂಶುದ್ದೀನ್ ಆಸ್ಗರ್ ಆಲಿ (23) ಅರೋಪಿಯಾಗಿದ್ದಾನೆ. ಈತ ಪುತ್ತೂರು ನಿವಾಸಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದವರು ಎಂದು ಗುರುತಿಸಲಾಗಿದೆ. ನ.24ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮಿಶ್ರಣ ಮಾಡಿದ್ದ ಮದ್ಯಪಾನ ಮಾಡಿಸಿ, ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಆಕೆಯನ್ನು ಅಲ್ಲಿಂದ ಸಾಲ್ಮರ ಎಂಬಲ್ಲಿಗೆ ಕರೆದೊಯ್ದಿದ್ದನು.
ಆರೋಪಿ ಶಂಸುದ್ದೀನ್ ಅಸ್ಗರ್ ಅಲಿ ಮಹಿಳೆಯ ಅರೆ ಪ್ರಜ್ಞಾವಸ್ಥೆಯ ವಿರೋಧದ ನಡುವೆಯೂ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಘಟನೆಯ ನಂತರ ಆತನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಮದ್ಯ ಸೇವಿಸಿದ್ದ ಪರಿಣಾಮ ಹೆಚ್ಚು ದೂರು ಕ್ರಮಿಸಲಾಗದೇ ರಸ್ತೆಯ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರು ಮಹಿಳೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ, ಮಹಿಳೆ ಎಚ್ಚರಗೊಂಡಾಗ ಆಕೆ ಕೊಟ್ಟ ದೂರಿನಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಸಮಂತಾಳ ಯಶೋಧಾ ಸಿನಿಮಾ ರೀತಿ ಮಹಿಳೆಯರ ಗರ್ಭದಲ್ಲಿ ಮಕ್ಕಳನ್ನು ಬೆಳಸಿ, ಹೆರಿಗೆ ನಂತರ ಬೆಂಗಳೂರಲ್ಲಿ ಮಗು ಮಾರಾಟ!
ಸಾಮೂಹಿಕ ಅತ್ಯಾಚಾರದ ಶಂಕೆ, ತನಿಖೆ ನಡೆಸುವಂತೆ ಬಜರಂಗದಳ ಒತ್ತಾಯ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರಿನ ಭಜರಂಗದಳ ಇದೊಂದು ಜಿಹಾದಿ ಮಾನಸಿಕತೆಯ ಕೃತ್ಯ, ಇದು ಒಬ್ಬರಿಂದ ಅಸಾಧ್ಯ. ಇದು ಒಂದು ಗುಂಪಿನ ಕೆಲಸ ಎಂದು ಸಾಮೂಹಿಕ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಸಿದ್ದು, ಪೋಲೀಸ್ ಇಲಾಖೆ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಪ್ರದೇಶದಲ್ಲಿ 2006ರಲ್ಲಿ ಸತ್ತರ್ ಎನ್ನುವವನಿಂದಲೂ ಅಕ್ಷತಾ ಎನ್ನುವ ಯುವತಿಯ ಕೊಲೆಯೂ ನಡೆದು ಭಾರೀ ಪ್ರತಿಭಟನೆ ನಡೆದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಮತ್ತು ಗಾಂಜಾ ಪ್ರಕರಣ ನಡೆಯುತ್ತಿರುವ ಬಗ್ಗೆ ಕೂಡಾ ಹಲವು ದೂರುಗಳು ದಾಖಲಾಗಿವೆ. ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗುವ ಮೂಲಕ ಪುತ್ತೂರು ತಾಲೂಕನ್ನು ಗಾಂಜಾ ಮುಕ್ತವನ್ನಾಗಿ ಹಾಗೂ ಶಾಂತಿಧಾಮವಾಗಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.