Suicide Cases in Karnataka: ಸಾಲದ ಬಾಧೆಗೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣು

By Girish Goudar  |  First Published Apr 24, 2022, 10:09 AM IST

*   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದ ಘಟನೆ
*   ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ರೈತ
*  ಈ ಸಂಬಂಧ ರಿಪ್ಪನ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು 
 


ಶಿವಮೊಗ್ಗ(ಏ.24):  ಸತತ ಶುಂಠಿ ಧಾರಣೆ ಕುಸಿತವಾದ ಹಿನ್ನೆಲೆಯಲ್ಲಿ ಸಾಲದ ಬಾಧೆಗೆ ಸಿಲುಕಿದ ರೈತನೋರ್ವ(Farmer) ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಹೊಸನಗರ(Hosanagar) ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಇಂದು(ಭಾನುವಾರ) ನಡೆದಿದೆ.  ಬಸವಾಪುರ ಗ್ರಾಮದ ವಸಂತ (34) ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. 

ಕಳೆದ ಐದು ವರ್ಷಗಳಿಂದ ಜಾಗ ಬಾಡಿಗೆ ಪಡೆದು ಶುಂಠಿ ಬೆಳೆ ಹಾಕಿದ್ದ ಮೃತ ವಸಂತ. ಸತತ ಮೂರು ವರ್ಷಗಳಿಂದ ಶುಂಠಿ(Ginger) ಧಾರಣೆ ಕುಸಿತಗೊಂಡಿದ್ದರಿಂದ ತೀವ್ರ ಸಂಕಷ್ಟಗೊಳಗಾಗಿದ್ದ ವಸಂತ. ನಷ್ಟದಲ್ಲಿದ್ದ ರೈತ ವಸಂತ ಸಂಘ ಸಂಸ್ಥೆ ಹಾಗೂ ಇತರೆ ಕೈಗಡ ಸೇರಿದಂತೆ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದನು ಅಂತ ತಿಳಿದು ಬಂದಿದೆ. 

Tap to resize

Latest Videos

Raichur Suicide: ಸಿಂಧನೂರಲ್ಲಿ ಒಂದೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು: ಕಾರಣ?

ಸಾಲಗಾರರ(Loan) ಕಾಟಕ್ಕೆ ಹೆದರಿ ಕೋಟೆತಾರಿಗಾ ಗ್ರಾಮದ ಹಿಂಡ್ಲೆಮನೆ ರಸ್ತೆಯ ಪಕ್ಕದ ಕಾಡಿನಲ್ಲಿ ಕಳೆನಾಶಕ ಕುಡಿದು ರೈತ ವಸಂತ ಸಾವನ್ನಪ್ಪಿದ್ದಾನೆ. ಈ ಸಂಬಂಧ ರಿಪ್ಪನ್ ಪೇಟೆ ಪೋಲಿಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಮನೆಯಲ್ಲಿ ಜಗಳ ಮಾಡಿಕೊಂಡು ಕೆರೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆ ಮೂಡಿಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಪ್ರಮೋದ್ (19) ಎಂಬುವವೇ ಅತ್ಮಹತ್ಯೆ(Suicide) ಮಾಡಿಮೊಂಡ ಮೃತ ದುರ್ದೈವಿಯಾಗಿದ್ದಾನೆ. 

ಸಿದ್ದು-ಪ್ರೇಮ ದಂಪತಿಯ ಪುತ್ರನಾದ ಪ್ರಮೋದ್ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಂತ ತಿಳಿದು ಬಂದಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅನಾರೋಗ್ಯದಿಂದ ಮಾನಸಿಕ ಖಿನ್ನತೆ: ಆತ್ಮಹತ್ಯೆಗೆ ಶರಣು

ಬೆಂಗಳೂರು:  ಅನಾರೋಗ್ಯದಿಂದ ಮಾನಸಿಕ ಖಿನ್ನತೆಯಿಂದ ಒಳಗಾಗಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಳ್ಯದಲ್ಲಿ ಚಲಿಸುತ್ತಿರುವ ಲಾರಿ ಅಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ವಿಡಿಯೋ

ಶ್ರೇಯಸ್‌ ಕಾಲೋನಿಯ ನಿವಾಸಿ ಚಂದ್ರಶೇಖರ್‌ (62) ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚಂದ್ರಶೇಖರ್‌, ಅನಾರೋಗ್ಯದ ಹಿನ್ನೆಲೆಯಲ್ಲಿ ಐದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ ಪಡೆದಿದ್ದರು. ಪತ್ನಿ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿದ್ದಾರೆ. ಇಬ್ಬರು ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಶುಕ್ರವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮರಣಪತ್ರ ಬರೆದಿಟ್ಟು ಹಗ್ಗದಿಂದ ಸೀಲಿಂಗ್‌ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಪತ್ನಿ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಚಂದ್ರಶೇಖರ್‌ ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಕಣ್ಣುಗಳು ಸಹ ಸರಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಜೀವನದ ಮೇಲೆ ಜಿಗುಪ್ಸೆಗೊಂಡಿದ್ದರು. ನಾನು ಬದುಕಿರಬಾರದು ಎಂದು ಪತ್ನಿ ಹಾಗೂ ಸಂಬಂಧಿಕರ ಜತೆ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
 

click me!