* ಗೂಗಲ್ ಮಾಹಿತಿ ಪರಿಶೀಲನೆ ವೇಳೆ ಪತ್ತೆ
* 4 ಸರ್ವರ್‌ನಿಂದ ಮೇಲ್
* ಇ-ಮೇಲ್‌ಗಳ ಜಾಡು ಪತ್ತೆಗೆ ಮುಂದಾದ ಪೊಲೀಸರು
ಬೆಂಗಳೂರು(ಏ.24): ಇತ್ತೀಚೆಗೆ ಬೆಂಗಳೂರು(Bengaluru) ನಗರ ಹಾಗೂ ಸುತ್ತಮುತ್ತಲಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ(Bomb Threat) ಇ-ಮೇಲ್‌ಗಳ ಹಿಂದೆ ಪಾಕಿಸ್ತಾನದ(Pakistan) ಭಯೋತ್ಪಾದಕ(Terrorist) ಸಂಘಟನೆಗಳ ಕೈವಾಡವಿರಬಹುದು ಎಂದು ನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇ-ಮೇಲ್(E-Mail) ಕಳುಹಿಸಿದ್ದ ನಾಲ್ಕು ಸರ್ವರ್‌ಗಳ ಬಗ್ಗೆ ಗೂಗಲ್(Google) ನೀಡಿದ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಪಾಕಿಸ್ತಾನದಿಂದ ಮೇಲ್‌ಗಳು ಬಂದಿರುವುದು ಪತ್ತೆಯಾಯಿತು. ಹಾಗಾಗಿ ಇ-ಮೇಲ್‌ಗಳನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಅಥವಾ ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಗಳು ಕಳುಹಿಸಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಕೇಂದ್ರ ತನಿಖಾ ಏಜೆನ್ಸಿಗಳ ನೆರವು ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
Bomb Threat: ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಗೆ ಫ್ರಾಕ್ಸಿ ಸರ್ವರ್ ಬಳಕೆ
ಖಾಸಗಿ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಮೂಲಕ ಅಶಾಂತಿ ಸೃಷ್ಟಿಸುವುದು ಈ ಕಿಡಿಗೇಡಿಗಳ ದುರುದ್ದೇಶವಾಗಿರಬಹುದು. ಒಮ್ಮೆಗೆ ಅಸಂಖ್ಯಾತ ಇ-ಮೇಲ್‌ಗಳು ಬಂದಿದ್ದು, ಕೆಲ ಶಾಲೆಗಳಿಗೆ ಒಂದೇ ರೀತಿಯ ಸಂದೇಶವುಳ್ಳ 150ಕ್ಕೂ ಇ-ಮೇಲ್‌ಗಳು ಬಂದಿವೆ. ಆದರೆ ಯಾವ ಶಾಲೆಯಲ್ಲೂ ಸಹ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದಿದ್ದಾರೆ.
ಏ.8ರಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸುಮಾರು 18 ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಈ ಬೆದರಿಕೆ ಹಿನ್ನೆಲೆಯಲ್ಲಿ ಆ ದಿನ ಶಾಲೆಗಳಲ್ಲಿ ಆತಂಕದ ವಾತಾರವಣ ನೆಲೆಸಿತ್ತು. ಕೊನೆಗೆ ಆ ಶಾಲೆಗಳನ್ನು ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅವು ಹುಸಿ ಬೆದರಿಕೆ ಇ-ಮೇಲ್‌ಗಳು ಎಂಬುದು ಪತ್ತೆಯಾಗಿತ್ತು. ಈ ಪ್ರಕರಣದ ಕುರಿತು ಬೆಂಗಳೂರು ಹಾಗೂ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇ-ಮೇಲ್‌ಗಳ ಜಾಡು ಪತ್ತೆಗೆ ಮುಂದಾದ ಪೊಲೀಸರು(Police), ಗೂಗಲ್‌ಗೆ ಪತ್ರ ಬರೆದು ಮಾಹಿತಿ ಕೋರಿದ್ದರು. ಅಂತೆಯೇ ನಾಲ್ಕು ಸರ್ವರ್‌ಗಳಿಂದ ಇ-ಮೇಲ್ ಬಂದಿರುವ ಬಗ್ಗೆ ಗೂಗಲ್ ಪ್ರತಿಕ್ರಿಯಿಸಿತ್ತು. ಈ ಮಾಹಿತಿ ಹಿನ್ನೆಲೆಯಲ್ಲಿ ಆ ನಾಲ್ಕು ಸರ್ವರ್‌ಗಳನ್ನು ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಹಿಂದೆ ಪಾಕಿಸ್ತಾನದ ನೆರಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
Chitradurga: ಹೆಂಡತಿ ಶೀಲವನ್ನೇ ಶಂಕಿಸಿ ಬರ್ಬರವಾಗಿ ಕೊಚ್ಚಿ ಹತ್ಯೆಗೈದ ಗಂಡ
ಗ್ಯಾಸ್ ರೀಫಿಲ್ಲಿಂಗ್ ದಂಧೆ: 500 ಗ್ಯಾಸ್ ಸಿಲಿಂಡರ್ ಜಪ್ತಿ
ಬೆಂಗಳೂರು: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಶೇಖರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಶೆಡ್ ಮೇಲೆ ದಾಳಿ ಮಾಡಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬೆಟ್ಟಹಲಸೂರು ವಿಐಟಿ ಕಾಲೇಜು ರಸ್ತೆಯ ಸೊಣ್ಣಪ್ಪ ಪೌಲ್ಟಿ್ರ ಫಾರಂನ ಶೆಡ್‌ನಲ್ಲಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶುಕ್ರವಾರ ಶೆಡ್ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸುಮಾರು .7 ಲಕ್ಷ ಮೌಲ್ಯದ 500 ಗ್ಯಾಸ್ ಸಿಲಿಂಡರ್ ಹಾಗೂ ಸಿಲಿಂಡರ್ ಸಾಗಣೆಗೆ ಬಳಸುತ್ತಿದ್ದ ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಅಕ್ರಮ ದಂಧೆಯ ಪ್ರಮುಖ ಕಿಂಗ್ ಪಿನ್‌ಗಳಾದ ಲಾಲ್ ಸಿಂಗ್ ಮತ್ತು ಜಾಪರ್ ಸಿಂಗ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಟಾರ್‌ಗಳಿಂದ ಚಿಕ್ಕ ಚಿಕ್ಕ ಸಿಲಿಂಡರ್‌ಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡಿ ದುಬಾರಿ ಹಣ ಪಡೆದು ಮಾರುತ್ತಿದ್ದರು.